3 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣ; ಆರೋಪಿಯ ಮರಣದಂಡನೆಯನ್ನು ಜೀವಾವಧಿಗೆ ಇಳಿಸಿದ ಸುಪ್ರೀಂ

ಹೊಸದಿಲ್ಲಿ,ಡಿ.15: ಮೂರು ವರ್ಷದ ಬಾಲಕಿಯನ್ನು ಅತ್ಯಾಚಾರಗೈದ ಬಳಿಕ ಆಕೆಯನ್ನು ಹತ್ಯೆಗೈದ ಪ್ರಕರಣದ ಆರೋಪಿಗೆ ವಿಧಿಸಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಸುಪ್ರೀಕೋರ್ಟ್ ಜೀವಾವಧಿ ಶಿಕ್ಷೆಗೆ ಪರಿವರ್ತನೆಗೊಳಿಸಿದೆ. ಆರೋಪಿಯು ಪರಿವರ್ತನೆಗೊಳ್ಳುವ ಸಾಧ್ಯತೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಅದು ತಿಳಿಸಿದೆ.
ಚತ್ತೀಸ್ಗಢ ನಿವಾಸಿಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಜೀವಾವಧಿಗೆ ಇಳಿಸಿ ತೀರ್ಪು ನೀಡಿ ನ್ಯಾಯಯಮೂರ್ತಿ ಐ.ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠವು ಇಂತಹ ಪ್ರಕರಣಗಳ ತ್ವರಿತ ವಿಚಾರಣೆಯನ್ನು ಯೋಗ್ಯವಾದುದು. ಆದರೆ ನ್ಯಾಯಾಲಯದಲ್ಲಿ ಪ್ರತಿವಾದವನ್ನು ಮಂಡಿಸುವುದಕ್ಕಾಗಿ ಸಿದ್ಧತೆಯನ್ನು ನಡೆಸಲು ಆರೋಪಿ ಪರ ವಕೀಲ ರಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿದೆ ಎದಂರು.
ಮೂರು ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಲೋಚನ್ ಶ್ರೀವಾಸ್ ಎಂಬಾತನಿಗೆ ವಿಚಾರಣಾ ನ್ಯಾಯಾಯ ಮರಣದಂಡನೆಯನ್ನು ವಿಧಿಸಿತ್ತು ಮತ್ತು ಆ ತೀರ್ಪನ್ನು ಚತ್ತೀಸ್ಗಢದ ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಲೋಚನ್ ಶ್ರೀನಿವಾಸ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದನು.
ವಿಚಾರಣಾ ನ್ಯಾಯಾಲಯವು 2016ರ ಜೂನ್ 17ರಂದು ಆರೋಪಿಯು ದೋಷಿಯೆಂದು ಪರಿಗಣಿಸಿ ತೀರ್ಪು ನೀಡಿತ್ತು ಹಾಗೂ ಆ ದಿನವೇ ಆತನಿಗೆ ಮರಣದಂಡನೆ ಶಿಕ್ಷೆಯನ್ನು ಕೂಡಾ ಘೋಷಿಸಿದ್ದನ್ನು ಸರ್ವೋಚ್ಚ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿದೆ. ‘‘ದೋಷಿಯು,ಕಟ್ಟಾ ಕ್ರಿಮಿನಲ್ ಅಗಿರಲಿಲ್ಲ. ಹೀಗಾಗಿ ಆತನಿಗೆ ಪರಿವರ್ತನೆಯಾಗುವ ಅವಕಾಶ ನೀಡುವುದಕ್ಕಾಗಿ ಆತನಿಗೆ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವ ಪರ್ಯಾಯ ಅವಕಾಶವನ್ನು ನೀಡಬೇಕಾಗಿದೆ ’’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಿಸಿತು.
ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಕೇವಲ ಅಪರಾಧವನ್ನು ಮಾತ್ರವೇ ಪರಿಗಣನೆಗೆ ತೆಗೆದುಕೊಂಡಿದೆಯೇ ಹೊರತು ಅಪರಾಧ ಎಸಗಿದಾತನ ಮಾನಸಿಕ ಸ್ಥಿತಿಯನ್ನು , ಆತನ ಸಾಮಾಜಿಕ-ಆರ್ಥಿಕ ಹಿನ್ನೆಲೆ ಇತ್ಯಾದಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲವೆಂದು ಸುಪ್ರೀಂಕೋರ್ಟ್ ತಿಳಿಸಿತು.
‘ಅಹವಾಲುದಾರನು ಅಪರಾಧ ನಡೆದ ಸಮಯದಲ್ಲಿ 23 ವರ್ಷ ವಯಸ್ಸಿನ ಯುವಕನಾಗಿದ್ದ. ಆತ ಗ್ರಾಮೀಣ ಹಿನ್ನೆಲೆಯಿಂದ ಬಂದವನಾಗಿದ್ದಾನೆ. ಆರೋಪಿಯ ಪರಿವರ್ತನೆಯಾಗುವ ಯಾವುದೇ ಸಾಧ್ಯತೆಯಿಲ್ಲವೆಂಬ ಕುರಿತಾದ ಪುರಾವೆಯನ್ನು ಒದಗಿಸಲು ಆಡಳಿತವು ಒದಗಿಸಿಲ್ಲ’’ ಎಂದು ನ್ಯಾಯಾಲಯ ಅಭಿಪ್ರಾಯಿಸಿತು.
ಆರೋಪಿಯು ಶಾಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದನು ಹಾಗೂ ತನ್ನ ಕುಟುಂಬವನ್ನು ಬಡತನದಿಂದ ಹೊರತರಲು ನಿರಂತರವಾದ ಪ್ರಯತ್ನಗಳನ್ನು ನಡೆಸಿದ್ದನೆಂದು ಆತನ ಕಿರಿಯ ಸಹೋದರ ಹಾಗೂ ಹಿರಿಯ ಸೋದರಿ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
‘‘ ಕಾರಾಗೃಹದಲ್ಲಿ ಅರ್ಜಿದಾರನ ನಡತೆಯು ತೃಪ್ತಿಕರವಾಗಿದೆ. ಆತನ ಮೇಲೆ ಯಾವುದೇ ಕ್ರಿಮಿನಲ್ ಹಿನ್ನೆಲೆಗಳಿರಲಿಲ್ಲ. ಆತ ಅತ್ಯಂತ ಹೇಯವಾದ ಕೃತ್ಯವನ್ನು ಎಸಗಿದ್ದಾನೆಂಬುದರಲ್ಲಿ ಸಂದೇಹವಿಲ್ಲವಾದರೂ, ಅದು ಆತ ಎಸಗಿದ ಮೊದಲ ಅಪರಾಧ ಕೃತ್ಯವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಆರೋಪಿ ಪರ ವಕೀಲರಿಗೆ ಪ್ರತಿವಾದವನ್ನು ಸಾಕಷ್ಟು ಸಮಯಾವಕಾಶವನ್ನು ಕೂಡಾ ನೀಡದೆ ಇರುವುದನ್ನು ಕೂಡಾ ತಾನು ಗಮನಕ್ಕೆ ತೆಗೆದುಕೊಂಡಿರುವುದಾಗಿ ನ್ಯಾಯಪೀಠ ತಿಳಿಸಿತು.
ಆರೋಪಿಯು ವಾಸವಾಗಿದ್ದ ಕಟ್ಟಡದಲ್ಲೇ ಸಂತ್ರಸ್ತ ಬಾಲಕಿ ಹಾಗೂ ಆಕೆಯ ಕುಟುಂಬವು ನೆಲೆಸಿತ್ತೆಂದು ಪ್ರಾಸಿಕ್ಯೂಶನ್ ವಿಚಾರಣೆಯ ವೇಳೆ ತಿಳಿಸಿತ್ತು. 2016ರ ಫೆಬ್ರವರಿ 24ರಂದು ಬಾಲಕಿ ನಾಪತ್ತೆಯಾಗಿದ್ದಳು. ಆಗ ಆರೋಪಿಯು ತಾನೇ ಆಕೆಯನ್ನು ಹುಡುಕುವುದಾಗಿ ಹೇಳಿದ. ಆನಂತರ ಆತ ರಸ್ತೆಯೊಂದರ ಸಮೀಪದಲ್ಲಿರುವ ಕಂಬದ ತಾಗಿಕೊಂಡಿರುವ ಪೊದೆಗಳಲ್ಲಿ ಗೋಣಿಚೀಲವೊಂದರಲ್ಲಿ ಬಾಲಕಿಯ ಮೃತದೇಹ ಇರುವುದನ್ನ ಪತ್ತೆ ಮಾಡಿರುವುದಾಗಿ ತಿಳಿಸಿದ್ದನು.
ಆತನ ಬಗ್ಗೆ ಸಂಶಯಗೊಂಡ ಸ್ಥಳೀಯರು ಪೊಲೀಸರು ಮಾಹಿತಿ ನೀಡಿದರು. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನೆಂದು ಪ್ರಾಸಿಕ್ಯೂಶನ್ ನ್ಯಾಯಾಲಯಕ್ಕೆ ತಿಳಿಸಿತ್ತು.







