ನಮ್ಮನ್ನು ಕಡೆಗಣಿಸಿದ್ದರಿಂದಲೇ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎಂದ ಶಾಸಕ ಯತ್ನಾಳ್

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಮ್ಮನ್ನೆಲ್ಲ ಕಡೆಗಣಿಸಿದ್ದರಿಂದಲೇ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿಗೆ ಈ ಚುನಾವಣೆಯಲ್ಲಿ ಕೆಲವು ಕಡೆ ಯಾಕೆ ಹಿನ್ನಡೆ ಆಗ್ತಿದೆ ಅಂದ್ರೆ ನಮ್ನನ್ನೆಲ್ಲ ನಿರ್ಲಕ್ಷ್ಯಕ್ಕೆ ಮಾಡಿದ್ದಕ್ಕೆ' ಎಂದರು.
'ಸಿಂದಗಿಯಲ್ಲಿ ಜವಾಬ್ದಾರಿ ಕೊಟ್ಟಿದ್ದರು. 34 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೆ. ಈ ಚುನಾವಣೆಗೆ ಪ್ರಚಾರಕ್ಕೆ ಕರೆಯಲಿಲ್ಲ, ಆದ್ದರಿಂದ ಬಿಜೆಪಿಗೆ ಮತ ಹಾಕಿ ಎಂದು ಹೇಳಿ ಮನೆಯಲ್ಲೇ ಕುಳಿತೆ' ಎಂದು ಹೇಳಿದರು.
''ಯಾವುದೋ ಒಂದು ಯಾತ್ರೆ ತಗೆದುಕೊಂಡು ಯಡಿಯೂರಪ್ಪನವರು ಬಂದಿದ್ದರು. ಆಗ್ಲೂ ಕರೆಯಲಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
Next Story





