ಸಿದ್ದರಾಮಯ್ಯ-ಸಿಎಂ ಇಬ್ರಾಹಿಂ ಸಂಭಾಷಣೆಯನ್ನು ತಿರುಚಿದ ವೀಡಿಯೋ ಪೋಸ್ಟ್ ಮಾಡಿದ ಬಿಜೆಪಿ

ಫೈಲ್ ಚಿತ್ರ
ಬೆಂಗಳೂರು: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಅವರ ಸಂಭಾಷಣೆಯ ತಿರುಚಿದ ವೀಡಿಯೊ ಒಂದನ್ನು ಬಿಜೆಪಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ವೀಡಿಯೋದಲ್ಲೇನಿದೆ
ವಿಧಾನ ಪರಿಷತ್ ನಲ್ಲಿ ಬುಧವಾರ ನಡೆದ ಗಲಾಟೆ ಕುರಿತು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಸಿದ್ದರಾಮಯ್ಯ ಜೊತೆ ವಿವರಣೆ ನೀಡುತ್ತಿದ್ದ ವೀಡಿಯೋವನ್ನು ಹಲವು ಟಿವಿ ಚಾನೆಲ್ ಗಳು ಪ್ರಸಾರ ಮಾಡಿತ್ತು. ಆದರೆ, ಇದರ ಸಣ್ಣ ತುಣುಕೊಂದನ್ನು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 'ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಸಿ.ಎಂ. ಇಬ್ರಾಹಿಂ ಅವರ ಅದ್ಭುತ ವಾಗ್ಝರಿ! ಇದೇ
ಸಿದ್ದರಾಮಯ್ಯ ಅವರು ಬೇರೆಯವರಿಗೆ ಸಂಸದೀಯ ವ್ಯವಸ್ಥೆಯ ಬಗ್ಗೆ ಪಾಠ ಮಾಡುತ್ತಾರೆ, ಎಂತಹ ವಿಪರ್ಯಾಸ!!!'' ಎಂಬ ಶೀರ್ಷಿಕೆಯಲ್ಲಿ ಹಂಚಿಕೊಂಡಿದೆ.
ಸದ್ಯ ಇದೇ ವಿಡಿಯೋವನ್ನು 'ಕಾಂಗ್ರೆಸ್ ನಾಯಕರ ಏಕವಚನದ ಜಗಳ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಹಾಗೂ ಸಿ.ಎಂ. ಇಬ್ರಾಹಿಂ ಅವರ ಅದ್ಭುತ ವಾಗ್ಝರಿ!
— BJP Karnataka (@BJP4Karnataka) December 15, 2021
ಇದೇ @siddaramaiah ಅವರು ಬೇರೆಯವರಿಗೆ ಸಂಸದೀಯ ವ್ಯವಸ್ಥೆಯ ಬಗ್ಗೆ ಪಾಠ ಮಾಡುತ್ತಾರೆ, ಎಂತಹ ವಿಪರ್ಯಾಸ!!! pic.twitter.com/hFN4UJVEJC







