ರಾಜ್ಯದಲ್ಲಿ ಮತ್ತೆ 5 ಒಮೈಕ್ರಾನ್ ಪ್ರಕರಣ ಪತ್ತೆ: ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ

ಬೆಂಗಳೂರು, ಡಿ.16: ರಾಜ್ಯದಲ್ಲಿ ಮತ್ತೆ 5 ಒಮೈಕ್ರಾನ್ ಪ್ರಕರಣ ಪತ್ತೆಯಾಗಿರುವ ಮಾಹಿತಿಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇದುವರೆಗೂ 8 ಒಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ.
ಯುಕೆಯಿಂದ ಬಂದಿದ್ದ 19 ವರ್ಷದ ಯುವಕನಲ್ಲಿ, ಹೊಸದಿಲ್ಲಿಯಿಂದ ವಾಪಸಾಗಿರುವ 36 ವರ್ಷ ವಯಸ್ಸಿನ ವ್ಯಕ್ತಿಗೆ, 70 ವರ್ಷ ವಯಸ್ಸಿನ ವೃದ್ಧೆಗೆ ಸೋಂಕು ತಗುಲಿದೆ.
ಹಾಗೆಯೇ ನೈಜಿರಿಯಾದಿಂದ ಬಂದಿರುವ 52 ವರ್ಷದ ವ್ಯಕ್ತಿ ಹಾಗೂ ದಕ್ಷಿಣ ಆಫ್ರಿಕಾದಿಂದ ಬಂದಿರುವ 33 ವರ್ಷದ ವ್ಯಕ್ತಿಗೆ ಹೊಸ ರೂಪಾಂತರಿ ಕಾಣಿಸಿಕೊಂಡಿದೆ.
ಸದ್ಯ ಎಲ್ಲರೂ ಸರಕಾರ ಸೂಚಿಸಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಹೊಸ ಸೋಂಕಿತರ ಕುರಿತು ಗುರುವಾರ ಆರೋಗ್ಯ ಸಚಿವ ಸುಧಾಕರ್ ಟೀಟ್ವ್ ಮಾಡಿ, ಮಾಹಿತಿ ನೀಡಿದ್ದಾರೆ.
Next Story





