ಬಿಜೆಪಿ ,ಮಮತಾ ‘ಕಾಂಗ್ರೆಸ್ ಮುಕ್ತ ಭಾರತದ ಕನಸ’ನ್ನು ಹಂಚಿಕೊಂಡಿದ್ದಾರೆ':ಆರೆಸ್ಸೆಸ್-ಸಂಬಂಧಿತ ಬಂಗಾಳಿ ನಿಯತಕಾಲಿಕ

Photo: Twitter
ಕೋಲ್ಕತ್ತಾ: ಬಿಜೆಪಿ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಬ್ಬರೂ ‘ಕಾಂಗ್ರೆಸ್-ಮುಕ್ತ ಭಾರತ’ ‘ ಕನಸನ್ನು ಹಂಚಿಕೊಂಡಿದ್ದಾರೆ ಎಂದು ಆರೆಸ್ಸೆಸ್-ಸಂಬಂಧಿತ ಬಂಗಾಳಿ ನಿಯತಕಾಲಿಕದ ಲೇಖನವೊಂದರಲ್ಲಿ ಬರೆದಿದೆ.
'ಸ್ವಸ್ತಿಕ'ದಲ್ಲಿ ಬರೆದಿರುವ ಲೇಖನವನ್ನು 'ಆಧಾರರಹಿತ' ಎಂದು ಕರೆದಿರುವ ಬಿಜೆಪಿ ಪಕ್ಷವು ಅಧಿಕೃತ ನಿಲುವಿನಿಂದ ಅಂತರ ಕಾಯ್ದುಕೊಂಡಿದೆ. ತೃಣಮೂಲ ಕಾಂಗ್ರೆಸ್ ಕೂಡ 'ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ' ಎಂಬ ಆರೋಪವನ್ನು ತಳ್ಳಿಹಾಕಿದೆ. ಆದರೆ 'ಬೆಕ್ಕು ಈಗ ಚೀಲದಿಂದ ಹೊರಬಂದಿದೆ' ಎಂದು ಕಾಂಗ್ರೆಸ್ ಟೀಕಿಸಿದೆ.
ಇತಿಹಾಸವನ್ನು ಅಳಿಸಲು ಮಮತಾ ಏಕೆ ಉತ್ಸುಕರಾಗಿದ್ದಾರೆ? ಹೂಡಿಕೆಯನ್ನು ಆಕರ್ಷಿಸಲು ಅಥವಾ ಸೋನಿಯಾರನ್ನು ನಾಶಮಾಡಲು? ಎಂಬ ಹೆಸರಿನ ಲೇಖನವನ್ನು ನಿರ್ಮಾಲ್ಯ ಮುಖೋಪಾಧ್ಯಾಯ ಬರೆದಿದ್ದಾರೆ ಹಾಗೂ ಪತ್ರಿಕೆಯ ಡಿಸೆಂಬರ್ 13 ರ ಸಂಚಿಕೆಯಲ್ಲಿ ಇದನ್ನು ಪ್ರಕಟಿಸಲಾಗಿದೆ.
ಟಿಎಂಸಿ ಅಧ್ಯಕ್ಷರು ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಇತ್ತೀಚಿನ ಸಭೆಯ ಬಗ್ಗೆ ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಇಬ್ಬರೂ "ಕಾಂಗ್ರೆಸ್ ಮುಕ್ತ ಭಾರತ"ದ ಕನಸನ್ನು ಹಂಚಿಕೊಂಡಿದ್ದಾರೆ ಎಂದು ಅದು ಹೇಳಿದೆ.
“ನರೇಂದ್ರ ಮೋದಿಯವರ ಕನಸು ಕಾಂಗ್ರೆಸ್ ಮುಕ್ತ ಭಾರತ. ಮಮತಾ ಈಗ ಅದೇ ಕನಸನ್ನು ನಂಬಿದ್ದಾರೆ ಎಂದು ನನಗೆ ಅನಿಸುತ್ತದೆ. ಅದಕ್ಕಾಗಿಯೇ ಅವರು ಈ ಕನಸನ್ನು ಬಿತ್ತಲು ಇತಿಹಾಸವನ್ನು ಅಳಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಲೇಖಕ ಬರೆದಿದ್ದಾರೆ.
"ನಾನು ಲೇಖನವನ್ನು ಇನ್ನೂ ಓದಿಲ್ಲ, ಆದ್ದರಿಂದ ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದಲ್ಲಿ 62 ಬಿಜೆಪಿ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ ಎಂಬುದು ಸತ್ಯವಾದ್ದರಿಂದ ನನಗೆ ಎರಡೂ ಪಕ್ಷಗಳ ತಿಳುವಳಿಕೆಯ ಬಗ್ಗೆ ತಿಳಿದಿಲ್ಲ'' ಎಂದು ಆರೆಸ್ಸೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಶ್ನು ಬಸು ಪಿಟಿಐಗೆ ತಿಳಿಸಿದರು.
ಆರೆಸ್ಸೆಸ್ ಸಂಪಾದಕೀಯ ಮತ್ತು ವ್ಯವಸ್ಥಾಪಕ ಸಮಿತಿಯು ಆರೆಸ್ಸೆಸ್ ಹಿನ್ನೆಲೆ ಹೊಂದಿರುವ ಹಲವಾರು ಜನರನ್ನು ಹೊಂದಿರುವುದರಿಂದ ನಿಯತಕಾಲಿಕವು ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೆಸ್ಸೆಸ್ ಮೂಲಗಳು ತಿಳಿಸಿವೆ.
ರಾಜ್ಯ ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ ಅವರು ಲೇಖನವನ್ನು "ಆಧಾರರಹಿತ" ಎಂದು ಬಣ್ಣಿಸಿದ್ದಾರೆ ಮತ್ತು ಇದು ಪಕ್ಷದ ನೀತಿ ಅಥವಾ ನಿಲುವಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.