Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ದಣಿವರಿಯದ ಪತ್ರಕರ್ತ ಹಾಗೂ ಆರ್ಥಿಕ...

ದಣಿವರಿಯದ ಪತ್ರಕರ್ತ ಹಾಗೂ ಆರ್ಥಿಕ ನೀತಿಗಳ ವಿಶ್ಲೇಷಕ ಚಕ್ರವರ್ತಿ ರಾಘವನ್

ರೂಬೆನ್ಸ್ ರಿಕುಪೆರೊರೂಬೆನ್ಸ್ ರಿಕುಪೆರೊ17 Dec 2021 11:49 AM IST
share
ದಣಿವರಿಯದ ಪತ್ರಕರ್ತ ಹಾಗೂ ಆರ್ಥಿಕ ನೀತಿಗಳ ವಿಶ್ಲೇಷಕ ಚಕ್ರವರ್ತಿ ರಾಘವನ್

ಕೇವಲ ತಮ್ಮ ಜ್ಞಾನ ಮತ್ತು ನೈತಿಕ ಬದ್ಧತೆಯ ಬಲದಿಂದ ಜಗತ್ತಿನಲ್ಲಿ ಬದಲಾವಣೆಗಳನ್ನು ಮಾಡಿದ ಕೆಲವೇ ವ್ಯಕ್ತಿಗಳ ಪೈಕಿ ಚಕ್ರವರ್ತಿ ರಾಘವನ್ ಒಬ್ಬರು.

‘‘ಕೈಯಲ್ಲಿ ಒಂದು ಟೈಪ್‌ರೈಟರ್ ಮತ್ತು ಮನಸ್ಸಿನಲ್ಲಿ ಒಂದು ಕಲ್ಪನೆ’’- ಇದು ಚಕ್ರವರ್ತಿಯನ್ನು ಪರಿಪೂರ್ಣವಾಗಿ ಬಣ್ಣಿಸುತ್ತದೆ. ನ್ಯಾಯ ಮತ್ತು ಆರ್ಥಿಕ ಸಂಬಂಧಗಳಲ್ಲಿ ಸಮತೋಲನದ ಮೂಲಕ ಅಭಿವೃದ್ಧಿಯನ್ನು ಸಾಧಿಸಬೇಕು ಎನ್ನುವ ಕಲ್ಪನೆಯನ್ನು ಅವರು ಹೊಂದಿದ್ದರು.

ಇತ್ತೀಚೆಗೆ ನಿಧನರಾದ ಚಕ್ರವರ್ತಿ ರಾಘವನ್ (1925-2021) ಪತ್ರಕರ್ತರಾಗಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದವರು. ಅವರು 1940ರಲ್ಲಿ ಬಾಲಕನಾಗಿದ್ದಾಗಲೇ ‘ಬಾಯ್ ಸ್ಕೌಟ್ಸ್’ ಶಿಬಿರವೊಂದರಲ್ಲಿ ತನ್ನ ಪತ್ರಕರ್ತ ಬದುಕನ್ನು ಆರಂಭಿಸಿದರು. ಅವರು ಅಂದು ಶಿಬಿರಕ್ಕೆ ಭೇಟಿ ನೀಡಿದ ಮಹಾತ್ಮಾ ಗಾಂಧಿಯನ್ನು ಸಂದರ್ಶಿಸಿದರು. 1940ರ ದಶಕದ ಮಧ್ಯ ಭಾಗದಿಂದ ರಾಘವನ್ ಪತ್ರಕರ್ತನಾಗಿ ವೃತ್ತಿ ಜೀವನವನ್ನು ಆರಂಭಿಸಿದರು. ಮೊದಲು ಅವರು ರಾಯ್ಟರ್ಸ್/ಅಸೋಸಿಯೇಟಡ್ ಪ್ರೆಸ್ ಆಫ್ ಇಂಡಿಯದ ಪರವಾಗಿ ಕೆಲಸ ಮಾಡಿದರು. ಬಳಿಕ ಕಾಲು ಶತಮಾನಕ್ಕೂ ಅಧಿಕ ಸಮಯ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕಾಗಿ ದೇಶದಲ್ಲಿ ಮತ್ತು ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದರು. 1971ರಲ್ಲಿ ಅವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ)ದ ಪ್ರಧಾನ ಸಂಪಾದಕರಾದರು. ಬಳಿಕ ಅವರು 1976ರಲ್ಲಿ ಪಿಟಿಐಯನ್ನು ತೊರೆದರು. ತುರ್ತು ಪರಿಸ್ಥಿತಿ ಕಾಲದ ಆದೇಶಗಳಿಗೆ ಅನುಗುಣವಾಗಿ ಕೆಲಸ ಮಾಡಲು ತನ್ನಿಂದ ಸಾಧ್ಯವಾಗಲಿಲ್ಲ ಎನ್ನುವ ಕಾರಣವನ್ನು ಅವರು ಬಳಿಕ ನೀಡಿದ್ದರು.

ರಾಘವನ್ 1978ರಲ್ಲಿ ಜಿನೀವಕ್ಕೆ ಹೋದರು. ಅಲ್ಲಿ ಅವರು ಜಾಗತಿಕ ವಿದ್ಯಮಾನದಲ್ಲಿ ‘ದಕ್ಷಿಣ ಭಾಗದ ನಿಲುವು’ಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು. ಅದು ‘ನೂತನ ಜಾಗತಿಕ ಮಾಹಿತಿ ವ್ಯವಸ್ಥೆ’ಯ ಆಶಾದಾಯಕ ದಿನಗಳಾಗಿದ್ದವು. ಮುಂದಿನ ಮೂರು ದಶಕಗಳು ಅಥವಾ ಅದಕ್ಕೂ ಹೆಚ್ಚಿನ ಅವಧಿಯಲ್ಲಿ, ಅಂಕ್ಟಡ್, ಐಎಲ್‌ಒ ಮತ್ತು ಹೆಚ್ಚಾಗಿ ಗ್ಯಾಟ್/ಡಬ್ಲ್ಯುಟಿಒ ಸಂಘಟನೆಗಳಲ್ಲಿ ಚರ್ಚೆಯಾಗುವ ಅಂತರ್‌ರಾಷ್ಟ್ರೀಯ ಆರ್ಥಿಕ ವಿಷಯಗಳಿಗೆ ವಿವರಣೆ ನೀಡುತ್ತಾ, ವಿಶ್ಲೇಷಿಸುತ್ತಾ ಮತ್ತು ಟೀಕಿಸುತ್ತಾ ದಣಿವರಿಯದ ಕೆಲಸ ಮಾಡಿದರು. ಹೆಚ್ಚನ ಅಭಿವೃದ್ಧಿಶೀಲ ದೇಶಗಳ ಸರಕಾರಗಳು, ಎನ್‌ಜಿಒಗಳು ಮತ್ತು ಪತ್ರಕರ್ತರಿಗೆ ಜಿನೀವದಿಂದ ಪ್ರಕಟಗೊಳ್ಳುತ್ತಿದ್ದ ‘ಸೌತ್ ನಾರ್ತ್ ಡೆವೆಲಪ್‌ಮೆಂಟ್ ಮಾನಿಟರ್’ ಪತ್ರಿಕೆಯ ಪ್ರಧಾನ ಸಂಪಾದಕ ರಾಘವನ್ ಸ್ವತಂತ್ರ ಸುದ್ದಿ ಮತ್ತು ಅಭಿಪ್ರಾಯಗಳ ಏಕೈಕ ಮೂಲವಾಗಿದ್ದರು. ಅವರು ಉತ್ತರದ ದೇಶಗಳ ಕಾರ್ಯಸೂಚಿಯಿಂದ ಸಂಕೀರ್ಣಗೊಳ್ಳದ ಸ್ಪಷ್ಟ ಹಾಗೂ ನೇರ ಸುದ್ದಿ ಮತ್ತು ಅಭಿಪ್ರಾಯಗಳನ್ನು ನೀಡುತ್ತಿದ್ದರು. ಅವರು 1984ರಿಂದ 2005ರವರೆಗೆ ಸುಮಾರು ಎರಡು ದಶಕಗಳ ಕಾಲ ‘ಸೌತ್ ನಾರ್ತ್ ಡೆವೆಲಪ್‌ಮೆಂಟ್ ಮಾನಿಟರ್’ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು ಹಾಗೂ ಬಳಿಕ ಇತ್ತೀಚೆಗೆ ನಿಧನರಾಗುವವರೆಗೂ ಪತ್ರಿಕೆಯ ‘ಎಡಿಟರ್ ಎಮೆರಿಟಸ್’ (ಸಲಹಾ ಸಂಪಾದಕ) ಆಗಿದ್ದರು.

ಭಾರತ ಮತ್ತು ವಿದೇಶಗಳ ಪತ್ರಕರ್ತರ ಹಕ್ಕುಗಳಿಗಾಗಿಯೂ ಅವರು ದಣಿವಿಲ್ಲದೆ ದುಡಿದಿದ್ದಾರೆ. ಅವರು ಭಾರತೀಯ ಕಾರ್ಯನಿರತ ಪತ್ರಕರ್ತರ ಫೆಡರೇಶನ್‌ನ ಆರಂಭಿಕ ಪದಾಧಿಕಾರಿಗಳ ಪೈಕಿ ಒಬ್ಬರಾಗಿದ್ದರು. ಬಳಿಕ 1967ರಲ್ಲಿ ವಿಶ್ವಸಂಸ್ಥೆಯ ವರದಿಗಾರರ ಅಸೋಸಿಯೇಶನ್‌ನ ಅಧ್ಯಕ್ಷರಾಗಿದ್ದರು.

ಜಾಗತಿಕ ಮಾಧ್ಯಮ ಮತ್ತು ನೀತಿ ಕ್ಷೇತ್ರದಲ್ಲಿ ಅಮೋಘ ಸಾಧನೆಯನ್ನು ಮಾಡಿರುವ ಅವರನ್ನು ಭಾರತ ಗುರುತಿಸಿರುವುದು ಕಡಿಮೆ.

ಕೇವಲ ತಮ್ಮ ಜ್ಞಾನ ಮತ್ತು ನೈತಿಕ ಬದ್ಧತೆಯ ಬಲದಿಂದ ಜಗತ್ತಿನಲ್ಲಿ ಬದಲಾವಣೆಗಳನ್ನು ಮಾಡಿದ ಕೆಲವೇ ವ್ಯಕ್ತಿಗಳ ಪೈಕಿ ಚಕ್ರವರ್ತಿ ರಾಘವನ್ ಒಬ್ಬರು.

‘‘ಕೈಯಲ್ಲಿ ಒಂದು ಟೈಪ್‌ರೈಟರ್ ಮತ್ತು ಮನಸ್ಸಿನಲ್ಲಿ ಒಂದು ಕಲ್ಪನೆ’’- ಇದು ಚಕ್ರವರ್ತಿಯನ್ನು ಪರಿಪೂರ್ಣವಾಗಿ ಬಣ್ಣಿಸುತ್ತದೆ. ನ್ಯಾಯ ಮತ್ತು ಆರ್ಥಿಕ ಸಂಬಂಧಗಳಲ್ಲಿ ಸಮತೋಲನದ ಮೂಲಕ ಅಭಿವೃದ್ಧಿಯನ್ನು ಸಾಧಿಸಬೇಕು ಎನ್ನುವ ಕಲ್ಪನೆಯನ್ನು ಅವರು ಹೊಂದಿದ್ದರು.

ಗ್ಯಾಟ್‌ನ ನೂತನ ಬ್ರೆಝಿಲ್ ರಾಯಭಾರಿಯಾಗಿ 1987ರ ನವೆಂಬರ್‌ನಲ್ಲಿ ನಾನು ಜಿನೀವಕ್ಕೆ ಬಂದಾಗ, ‘ಸೌತ್ ನಾರ್ತ್ ಡೆವೆಲಪ್‌ಮೆಂಟ್ ಮಾನಿಟರ್’ನ ಚಿನ್ನದ ಹಳದಿ ಬಣ್ಣದ ಕಾಗದದಲ್ಲಿ ಮುದ್ರಿತವಾಗುತ್ತಿದ್ದ ರಾಘವನ್‌ರ ದೈನಂದಿನ ಅಂಕಣವನ್ನು ನೋಡಿದೆ. ಜಾಗತಿಕ ವಿದ್ಯಮಾನಗಳನ್ನು ಆಗ ಪ್ರಭಾವಿಯಾಗಿದ್ದ ಬೌದ್ಧಿಕ ಚಿಂತನೆಗಳಿಂದ ದೂರವಿರಿಸಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸುವ ಅವರ ಸಾಮರ್ಥ್ಯವನ್ನು ನಾನು ಆಗ ಗುರುತಿಸಿದೆ.

  ಉರುಗ್ವೇ ಸುತ್ತಿನ ಮಾತುಕತೆಗಳ ಆರಂಭ ಮತ್ತು ಹೆಚ್ಚಿನ ಅವಧಿಯಲ್ಲಿ ಅಭಿವೃದ್ಧಿಶೀಲ ದೇಶಗಳ ಸಂಧಾನಕಾರರು ಉಳಿದವರಿಂದ ಎಷ್ಟು ಪ್ರತ್ಯೇಕಿತರಾಗಿರುತ್ತಿದ್ದರು ಎನ್ನುವುದನ್ನು ನಮ್ಮ ದಿನಗಳಲ್ಲಿ ಊಹಿಸುವುದೇ ಕಷ್ಟವಾಗಿತ್ತು. ಈಗ ವ್ಯಾಪಾರ ಮಾತುಕತೆಗಳಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಹಲವು ಎನ್‌ಜಿಒಗಳು ಆಗ ಅಸ್ತಿತ್ವದಲ್ಲಿ ಇರಲಿಲ್ಲ. ಒಂದು ವೇಳೆ, ಆಕ್ಸ್‌ಫಾಮ್‌ನಂತಹ ಎನ್‌ಜಿಒಗಳು ಅಂದು ಅಸ್ತಿತ್ವದಲ್ಲಿ ಇದ್ದರೂ ಅವುಗಳು ವ್ಯಾಪಾರದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಂಡಿರಲಿಲ್ಲ.

ಗ್ಯಾಟ್‌ಗೆ ಅಂಗೀಕಾರ ನೀಡುವ ಕಲ್ಪನೆಯಿಂದ ಚೀನಾ ಬಹುದೂರದಲ್ಲಿತ್ತು. ಅತ್ಯಂತ ಪ್ರಮುಖ ಹಾಗೂ ಸಕ್ರಿಯವಾಗಿದ್ದ ಅಭಿವೃದ್ಧಿಶೀಲ ದೇಶಗಳಿಗೇ ಬೌದ್ಧಿಕ ಸಂಪನ್ಮೂಲಗಳನ್ನು ಪಡೆಯಲು ಅಸಾಧ್ಯವಾಗಿತ್ತು. ಆದರೆ ಈ ಸಂಪನ್ಮೂಲಗಳು ಅಭಿವೃದ್ಧಿ ಹೊಂದಿದ ದೇಶಗಳಿಗೆ ಒಇಸಿಡಿ ಮತ್ತು ಇತರ ಹಲವಾರು ಬೌದ್ಧಿಕ ಸಂಘಟನೆಗಳಿಂದ ಸಿಗುತ್ತಿತ್ತು.

ಜೋಸೆಫ್ ಸ್ಟಿಗ್ಲಿಝ್ ಮತ್ತು ಪೌಲ್ ಕ್ರಗ್ಮನ್‌ರಂತಹ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ವಿಜೇತರು ತಮ್ಮ ಡಮಾಸ್ಕಸ್‌ನ ರಸ್ತೆಗಳಲ್ಲಿ ಇನ್ನೂ ಬೆಳಕನ್ನು ನೋಡಿರಲಿಲ್ಲ. ಇದಾದ ದಶಕಗಳ ಬಳಿಕವಷ್ಟೇ ಬ್ರೆಟನ್ ವುಡ್ಸ್ ಸಂಸ್ಥೆಗಳ ಪ್ರತಿನಿಧಿಯೊಬ್ಬರು 1960ರ ದಶಕದಿಂದ ಅಂಕ್ಟಡ್ ಪದೇ ಪದೇ ಹೇಳುತ್ತಾ ಬಂದಿದ್ದ ವಿಷಯವನ್ನು ಆಂಶಿಕವಾಗಿ ಹಾಗೂ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಂಡರು. ಅಂಕ್ಟಡ್ ಏನು ಹೇಳುತ್ತಾ ಬಂದಿತ್ತೆಂದರೆ- ಬಹುಪಕ್ಷೀಯ ವ್ಯಾಪಾರ ವೇದಿಕೆಯಾಗಿರುವ ಗ್ಯಾಟ್ ಅಸಮತೋಲನ ಮತ್ತು ಅಸಮಾನತೆಯಿಂದ ಕೂಡಿದೆ; ಅದರ ನಿಯಮಗಳು ಮತ್ತು ಕಲಾಪಗಳು ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆಗಳ ವ್ಯಾಪಾರಿ ಹಿತಾಸಕ್ತಿಗಳೀಗೆ ಮಾರಕವಾದ ಪರಿಸ್ಥಿತಿಯನ್ನು ಖಾಯಂಗೊಳಿಸುತ್ತವೆ; ಮತ್ತು ಅಭಿವೃದ್ಧಿಸ್ನೇಹಿ ಮಾತುಕತೆಗಳನ್ನು ಸಂಪೂರ್ಣಗೊಳಿಸುವ ಪ್ರಕ್ರಿಯೆಯನ್ನು ವ್ಯಾಪಾರಿ ಸುತ್ತಿನ ಮಾತುಕತೆಗಳು 30 ವರ್ಷಗಳಿಗೂ ಅಧಿಕ ಕಾಲದಿಂದ ಮುಂದೂಡುತ್ತಾ ಬಂದಿವೆ.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಅದಾಗಲೇ ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯದಲ್ಲಿದ್ದ ಅಸಮಾನತೆಯಿಂದಾಗಿ ಅಭಿವೃದ್ಧಿಶೀಲ ದೇಶಗಳಿಗೆ ಸಮಾನ ಅವಕಾಶ ದೊರೆಯುವುದು ದೂರದ ಕನಸಾಗಿತ್ತು. ಈಗ ಮಾಹಿತಿ ಮತ್ತು ಜ್ಞಾನದಿಂದ ಬರುವ ಪ್ರಭಾವದಲ್ಲಿನ ಅಸಮತೋಲನವು ಆರ್ಥಿಕ ಮತ್ತು ರಾಜಕೀಯ ಪ್ರಾಬಲ್ಯದ ಅಸಮಾನತೆಯನ್ನು ಮತ್ತಷ್ಟು ಹಿಗ್ಗಿಸಿದೆ.

ಹಾಗಾಗಿ, ಅಭಿವೃದ್ಧಿ ಹೊಂದಿದ ದೇಶಗಳ ಪರವಾಗಿ ಮಂಡಿಸಲಾಗುತ್ತಿದ್ದ ನಕಲಿ ವಾದಗಳನ್ನು ಬಯಲಿಗೆಳೆಯುವಲ್ಲಿ ಹಾಗೂ ಅಂತಹ ವಾದ ಸರಣಿಗಳನ್ನು ತುಂಡರಿಸುವಲ್ಲಿ ರಾಘವನ್‌ರ ಲೇಖನಗಳು ಪ್ರಮುಖ ಪಾತ್ರ ವಹಿಸಿವೆ. ವಸ್ತುನಿಷ್ಠವೆಂಬಂತೆ ಕಂಡುಬರುವ ಅಂಕಿಅಂಶಗಳು ಮತ್ತು ಸಂಶೋಧನೆಗಳ ಹಿಂದೆ ಅಡಗಿರುವ ಆರ್ಥಿಕ ವಿಭಜನವಾದಿ ಹಿತಾಸಕ್ತಿಗಳನ್ನು ಅವರು ಬಯಲಿಗೆಳೆದರು. ಇದನ್ನು ಅವರು ಸಮಕಾಲೀನ ಆರ್ಥಿಕ ಮತ್ತು ಅಂತರ್‌ರಾಷ್ಟ್ರೀಯ ಇತಿಹಾಸದ ಮೇಲಿರುವ ತನ್ನ ಪ್ರಭುತ್ವದ ಮೂಲಕ ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ಇಂತಹ ಸಮಸ್ಯೆಗಳಿಗೆ ಸಂಬಂಧಿಸಿದ ಪೂರ್ವನಿದರ್ಶನಗಳನ್ನು ಅವರು ಓದುಗರ ಗಮನಕ್ಕೆ ತಂದರು ಹಾಗೂ ಸ್ವತಂತ್ರ ಸಂಶೋಧಕರು ಕಂಡುಕೊಂಡ ಅಂಶಗಳಿಗೆ ಸಂಬಂಧಿಸಿ ಒಇಸಿಡಿ ಮುಂದಿಟ್ಟ ವಾದಗಳನ್ನು ಅದರ ಹಾಲಿ ವಾದಗಳೊಂದಿಗೆ ತುಲನೆ ಮಾಡಿದರು.

ಪರಿಸರ ಪರಿಣಾಮ ಅಧ್ಯಯನವಿಲ್ಲದೆ ಯಾವುದೇ ಮಹತ್ವದ ಯೋಜನೆ ಅಥವಾ ಕಾಮಗಾರಿಗೆ ವಿಶ್ವ ಬ್ಯಾಂಕ್‌ನ ಆರ್ಥಿಕ ನೆರವು ಸಿಗದಿರುವ ಕಾಲದಲ್ಲಿ, ದೇಶಗಳನ್ನು ಉದ್ಯೋಗಾವಕಾಶಗಳಿಂದ ವಂಚಿಸುವ ವಾಣಿಜ್ಯ ಮಾತುಕತೆಗಳನ್ನು ಅವು ಜನರ ಮೇಲೆ ಬೀರಬಹುದಾದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಅಧ್ಯಯನವಿಲ್ಲದೆ ನಡೆಸಿರುವುದು ಅಚ್ಚರಿಯೇ ಸರಿ.

ಈ ಮಾಹಿತಿ ಅಂತರವನ್ನು ಸಂಪೂರ್ಣವಾಗಿ ತುಂಬಲು ತನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನಗಳನ್ನು ಮಾಡಿದರು. ಅಂತರ್‌ರಾಷ್ಟ್ರೀಯ ಸಂಘಟನೆಗಳು ಬಿಡುಗಡೆ ಮಾಡುವ ಪ್ರಮುಖ ವರದಿಗಳು ನೂರಾರು ಪುಟಗಳಲ್ಲಿರುತ್ತಿದ್ದವು. ಕೆಲಸದ ಒತ್ತಡಕ್ಕೆ ಒಳಗಾಗಿದ್ದ ಸಂಧಾನಕಾರರಿಗೆ ಅವುಗಳನ್ನು ಓದುವ ವ್ಯವಧಾನವೇ ಇರಲಿಲ್ಲ. ಆಗ ಚಕ್ರವರ್ತಿ ಈ ವರದಿಗಳನ್ನು ಓದಿ ಸ್ಪಷ್ಟ ಮಾತುಗಳಲ್ಲಿ ಅತ್ಯಂತ ಸಂಕ್ಷಿಪ್ತವಾಗಿ ನೀಡುತ್ತಿದ್ದರು. ಅವರ ಪತ್ರಿಕೆಯು ಕಾಲದಿಂದ ಕಾಲಕ್ಕೆ ಈ ಬಗ್ಗೆ ಲೇಖನಗಳನ್ನು ಬರೆಯುತ್ತಿತ್ತು ಹಾಗೂ ಸ್ವತಂತ್ರ ಪರಿಣತರ ಸಂದರ್ಶನಗಳನ್ನು ಪ್ರಕಟಿಸುತ್ತಿತ್ತು. ಅವರ ಪತ್ರಿಕೆಯು ಪ್ರಬಲ ಮತ್ತು ವಿರೋಧಾಭಾಸದ ನಿಲುವುಗಳಿಗೆ ಪರ್ಯಾಯ ಅಭಿಪ್ರಾಯಗಳನ್ನು ಒದಗಿಸುವ ವೇದಿಕೆಯಂತೆ ಕೊನೆಯವರೆಗೂ ಕೆಲಸ ಮಾಡಿತು.

ಉರುಗ್ವೆ ಸುತ್ತಿನ ಮಾತುಕತೆಗಳ ವೇಳೆ ನಡೆದ ದೈನಂದಿನ ಮಾತುಕತೆಗಳ ನಿಖರ, ವಿವರವಾದ ವಿಶ್ಲೇಷಣೆಯು ಅವರ ಮಹತ್ವದ ದೇಣಿಗೆಗಳ ಪೈಕಿ ಒಂದಾಗಿದೆ. ಉರುಗ್ವೇ ಸುತ್ತಿನ ಮಾತುಕತೆಗಳು 1991ರವರೆಗೆ ನಡೆಯಿತು. ಈ ಸುತ್ತಿನ ಹೆಚ್ಚಿನ ಅವಧಿಯಲ್ಲಿ ಅತ್ಯಂತ ವೈವಿಧ್ಯ ಮತ್ತು ಸಂಕೀರ್ಣ ವಿಷಯಗಳ ಬಗ್ಗೆ 15 ಗುಂಪುಗಳು ಮಾತುಕತೆಗಳಲ್ಲಿ ತೊಡಗಿದ್ದವು.

ಅಭಿವೃದ್ಧಿ ಹೊಂದಿದ ದೇಶಗಳ ನಿಯೋಗಗಳನ್ನು ಹೊರತುಪಡಿಸಿ, ಇತರರಿಗೆ ಈ ಗುಂಪುಗಳ ಪೈಕಿ ಪ್ರತಿಯೊಂದರ ಮೇಲೂ ನಿಗಾ ಇಡುವುದು ಬಹುತೇಕ ಅಸಾಧ್ಯದ ಕೆಲಸವಾಗಿದೆ. ಗ್ಯಾಟ್‌ನ ನೂತನ ಬ್ರೆಝಿಲ್ ರಾಯಭಾರಿಯಾಗಿ 1987ರ ನವೆಂಬರ್‌ನಲ್ಲಿ ನಾನು ಜಿನೀವಕ್ಕೆ ಬಂದಾಗ, ‘ಸೌತ್ ನಾರ್ತ್ ಡೆವೆಲಪ್‌ಮೆಂಟ್ ಮಾನಿಟರ್’ ನಮ್ಮ ಪೈಕಿ ಹೆಚ್ಚಿನವರ ನೆರವಿಗೆ ಬಂದಿದೆ.

ರಾಘವನ್‌ರಿಗೆ ಮಾತುಕತೆಗಳ ಕೋಣೆಗೆ ಪ್ರವೇಶವಿಲ್ಲ. ಆದರೆ ಅವರು ಪವಾಡ ಸದೃಶವೆನ್ನುವಷ್ಟು ನಿಖರ ಹಾಗೂ ಸಮಗ್ರವಾಗಿ ಆ ಮಾತುಕತೆಗಳನ್ನು ಹೇಗೆ ಗ್ರಹಿಸಿದ್ದಾರೆ ಎನ್ನುವುದು ನನಗೆ ಇಂದಿಗೂ ಅರ್ಥವಾಗಿಲ್ಲ.

ಸತ್ಯ ಸಂಗತಿಗಳನ್ನು ಸರಿಯಾದ ವಿಧಾನದಲ್ಲಿ ಪತ್ತೆಹಚ್ಚುವಲ್ಲಿ, ವಿಷಯವನ್ನು ಇದ್ದಂತೆ ಹೇಳುವಲ್ಲಿ ಮತ್ತು ಘಟನೆಗಳನ್ನು ಆಧರಿಸಿ ಸರಿಯಾದ ನಿರ್ಧಾರಕ್ಕೆ ಬರುವಲ್ಲಿ ಪತ್ರಕರ್ತನ ಯಶಸ್ಸು ಅಡಗಿದೆ.

ಜನರ ಕೃತಜ್ಞತೆ, ಮೆಚ್ಚುಗೆ, ಅಭಿಮಾನವೇ ರಾಘವನ್‌ಗೆ ಲಭಿಸಿದ ಪ್ರಶಸ್ತಿಗಳಾಗಿವೆ.

ಕೃಪೆ: thewire.in

share
ರೂಬೆನ್ಸ್ ರಿಕುಪೆರೊ
ರೂಬೆನ್ಸ್ ರಿಕುಪೆರೊ
Next Story
X