ಡಿ.19ರಿಂದ ಸಾಲ್ಮರ ಸೈಯ್ಯದ್ ಮಲೆ ಉರೂಸ್ ಸಮಾರಂಭ

ಪುತ್ತೂರು: ಸಾಲ್ಮರ ಸೈಯ್ಯದ್ ಮಲೆಯಲ್ಲಿ 2 ವರ್ಷಗಳಿಗೊಮ್ಮೆ ನಡೆಯುತ್ತಿರುವ 26ನೇ ಉರೂಸ್ ಸಮಾರಂಭವು ಡಿ.19ರಿಂದ 23ರ ತನಕ ಸಾಲ್ಮರ ಸೆಯ್ಯದ್ ಮುಹಮ್ಮದ್ ತಂಙಳ್ ಅಧ್ಯಕ್ಷತೆಯಲಿ, ಸೆಯ್ಯದ್ ಮಲೆ ಖತೀಬ್ ಅಲ್ ಹಾಜ್ ಉಮರ್ ದಾರಿಮಿ ನೇತೃತ್ವದಲ್ಲಿ ನಡೆಯಲಿದೆ ಎಂದು ಮಸೀದಿ ಸಮಿತಿ ಅಧ್ಯಕ್ಷ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರು ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೋವಿಡ್ ನಿಯಮಾವಳಿಯಂತೆ ಹಾಗೂ ಸರ್ಕಾರದ ನಿರ್ದೇಶನದಂತೆ ಉರೂಸ್ ಕಾರ್ಯಕ್ರಮ ನಡೆಯಲಿದೆ. ಡಿ.19ರಂದು ಉರೂಸ್ ಉದ್ಘಾಟನಾ ಸಮಾರಂಭ ಹಾಗೂ ಆಧ್ಯಾತ್ಮಿಕ ಸಂಗಮ ನಡೆಯಲಿದೆ. ಸೆಯ್ಯದ್ ಅಹಮ್ಮದ್ ಪೂಕೋಯ ತಂಙಳ್ ಉರೂಸ್ ಉದ್ಘಾಟಿಸಿ ದುವಾಶೀರ್ವಚನ ನೀಡಲಿದ್ದಾರೆ. ಬಳಿಕ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ 'ನೂರೇ ಅಜ್ಮೀರ್ ಮಜ್ಲಿಸ್' ನಡೆಯಲಿದೆ. 20ರಂದು ಸೆಯ್ಯದ್ ಅಬೂಬಕ್ಕರ್ ತಂಙಳ್ ಕೆಮ್ಮಾಯಿ ದುವಾಶೀರ್ವಚನ ನೀಡಲಿದ್ದಾರೆ. ಯು.ಕೆ. ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ನೀಡಲಿದ್ದಾರೆ. 21ರಂದು ಕೂರ್ನಡ್ಕ ಖಾಝಿ ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ದುವಾಶೀರ್ವಚನ ನೀಡಲಿದ್ದಾರೆ. ನವಾಝ್ ಮನ್ನಾನಿ ತಿರುವನಂತಪುರಂ ಮುಖ್ಯ ಪ್ರಭಾಷಣ ನೀಡಲಿದ್ದಾರೆ. 22ರಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ದುವಾಶೀರ್ವಚನ ನೀಡಲಿದ್ದಾರೆ. ಇ.ಪಿ. ಅಬೂಬಕ್ಕರ್ ಅಲ್ ಖಾಸಿಮಿ ತಿರುವನಂತಪುರಂ ಮುಖಯ್ ಪ್ರಭಾಷಣ ನೀಡಲಿದ್ದಾರೆ.
23ರಂದು ಉರೂಸ್ ಸಮಾರೋಪ ಸಮಾರಂಭ ನಡೆಯಲಿದೆ. ಸೆಯ್ಯದ್ ಅಲಿ ತಂಙಳ್ ಕುಂಬೋಳ್ ದುವಾಶೀರ್ವಚನ ನೀಡಲಿದ್ದಾರೆ. ಖಲೀಲ್ ಹುದವಿ ಕಾಸರಗೋಡು ಮುಖ್ಯ ಪ್ರಭಾಷಣ ನೀಡಲಿದ್ದಾರೆ. ಸಮಾರೋಪ ಸಮಾರಂಭದ ಬಳಿಕ ಅನ್ನದಾನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉರೂಸ್ ಸಮಿತಿ ಅಧ್ಯಕ್ಷ ಬಾಯಾರ್ ಪುತ್ತುಹಾಜಿ, ಪ್ರಧಾನ ಕಾರ್ಯದರ್ಶಿ ಯೂಸುಫ್ ತಾರಿಗುಡ್ಡೆ, ಮಸೀದಿ ಸಮಿತಿ ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ಯಂಗ್‍ಮೆನ್ಸ್ ಸಮಿತಿ ಅಧ್ಯಕ್ಷ ಉಸ್ಮಾನ್ ಕೆರೆಮನೆ ಉಪಸ್ಥಿತರಿದ್ದರು.







