ಮಕ್ಕಳಾಗದ ಚಿಂತೆಯಲ್ಲಿ ಆತ್ಮಹತ್ಯೆ
ಕಾರ್ಕಳ, ಡಿ.17: ಮದುವೆಯಾಗಿ ನಾಲ್ಕು ವರ್ಷಗಳಾದರೂ ಮಕ್ಕಳಾಗದ ಚಿಂತೆಯಲ್ಲಿ ಮಾನಸಿಕವಾಗಿ ನೊಂದ ಎರ್ಲಪಾಡಿ ಗೋವಿಂದೂರು ನಿವಾಸಿ ಶ್ರೀಧರ ಕುಲಾಲ್ (45) ಎಂಬವರು ಡಿ.17ರಂದು ಬೆಳಗ್ಗೆ ತಾನು ಕೆಲಸ ಮಾಡಿ ಕೊಂಡಿದ್ದ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ಬಾರ್‌ನ ಮಹಡಿಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





