ಅತ್ಯಾಚಾರ ಕುರಿತು ರಮೇಶ್ ಕುಮಾರ್ ಹೇಳಿಕೆ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷರ ಖಂಡನೆ
ಗುವಾಹಟಿ,ಡಿ.17: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ನೆಚ್ಚಾರ್ಸಿ)ದ ಅಧ್ಯಕ್ಷ ನ್ಯಾ.ಎ.ಕೆ.ಮಿಶ್ರಾ ಅವರು ಶುಕ್ರವಾರ ಕರ್ನಾಟಕದ ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಹೇಳಿಕೆಯನ್ನು ಉಲ್ಲೇಖಿಸದೆ ಎಲ್ಲ ಅತ್ಯಾಚಾರ ಘಟನೆಗಳನ್ನು ಖಂಡಿಸಿದರು.
ಇಂತಹ ಹೇಳಿಕೆಗಳು ಮತ್ತು ಅತ್ಯಾಚಾರದ ಯಾವುದೇ ಘಟನೆ ನಿಜಕ್ಕೂ ಅತ್ಯಂತ ನಾಚಿಕೆಗೇಡಿನದಾಗಿವೆ. ಇಂತಹುದು ನಾಗರಿಕ ಸಮಾಜದಲ್ಲಿ ಸಂಭವಿಸಿಬಾರದು ಎಂದು ನ್ಯಾ.ಮಿಶ್ರಾ ಹೇಳಿದರು.
ಅಸ್ಸಾಂ,ನಾಗಾಲ್ಯಾಂಡ್,ಅರುಣಾಚಲ ಪ್ರದೇಶ,ಮಿಜೋರಾಂ ಮತ್ತು ಸಿಕ್ಕಿಮ್ ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಡಿ.15 ಮತ್ತು 16ರಂದು ಇಲ್ಲಿ ಬಹಿರಂಗ ವಿಚಾರಣೆಯನ್ನು ಹಮ್ಮಿಕೊಂಡಿದ್ದು,40 ಪ್ರಕರಣಗಳನ್ನು ಕೈಗೆತ್ತಿಕೊಂಡಿತ್ತು. ಈ ಪೈಕಿ ಪರಿಹಾರ ಶಿಫಾರಸುಗಳನ್ನು ರಾಜ್ಯಗಳು ಅನುಷ್ಠಾನಿಸಿರುವ ಐದು ಪ್ರಕರಣಗಳನ್ನು ಅದು ಇತ್ಯರ್ಥಗೊಳಿಸಿದೆ.
Next Story