ಅನುಪಾತ ಉಲ್ಲಂಘಿಸಿ ನೇಮಕವಾದ ಹೆಚ್ಚುವರಿ ಶಿಕ್ಷಕರಿಗೆ ವೇತನ ಪಾವತಿ ಇಲ್ಲ: ಆದೇಶ

ಬೆಂಗಳೂರು, ಡಿ.17: ಅನುದಾನಿತ ಶಾಲೆ ಹೆಚ್ಚುವರಿ ಶಿಕ್ಷಕ ವೇತನ ಪಾವತಿಗೆ ನಿಯಮಗಳಲ್ಲಿ ಅವಕಾಶವಿಲ್ಲದ ಕಾರಣ ಸರಕಾರವು ಅವರ ವೇತನವನ್ನು ಪಾವತಿ ಮಾಡಲಾಗುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ.
2000 ರಿಂದ 2008ರವರೆಗೆ ಬಹುತೇಕ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಅನುಪಾತದಲ್ಲಿ ವ್ಯತ್ಯಾಸವಾಗಿದ್ದರಿಂದ ಅಂತಹ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರು ಎಂದು ಪರಿಗಣಿಸಲಾಗಿತ್ತು. ಆದರೆ ಈ ಹೆಚ್ಚುವರಿ ಶಿಕ್ಷಕರಿಗೆ ವೇತನ ಪಾವತಿ ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲದ ಕಾರಣ ಅವರ ವೇತನವನ್ನು ತಡೆಹಿಡಿಯಲಾಗಿತ್ತು.
ಅಲ್ಲದೇ, ಅಗತ್ಯವಿರುವ ಕಡೆ ಹೆಚ್ಚುವರಿ ಶಿಕ್ಷಕರಿಗೆ ಸ್ಥಳ ನಿಯುಕ್ತಿ ಮಾಡಲು ಶಾಲಾ ಆಡಳಿತ ಮಂಡಳಿಗೆ ಶಿಕ್ಷಣ ಇಲಾಖೆಯು ಸೂಚಿಸಿತ್ತು. ಆದರೆ ಆಡಳಿತ ಮಂಡಳಿ ಕ್ರಮ ವಹಿಸದ ಕಾರಣ ಅನುಪಾತ ಉಲ್ಲಂಘಿಸಿ ಕಾರ್ಯನಿರ್ವಹಿಸುವ ಹೆಚ್ಚುವರಿ ಶಿಕ್ಷಕರ ನೇಮಕ ಕುರಿತು ಇಲಾಖೆಯು ವೇತನವನ್ನು ಪಾವತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
Next Story





