ಪಡುಬಿದ್ರೆ ಗ್ರಾಪಂ ಮಾಜಿ ಸದಸ್ಯ ಹಾಜಬ್ಬ ನಿಧನ

ಪಡುಬಿದ್ರೆ : ಇಲ್ಲಿನ ಕಂಚಿನಡ್ಕ ಶಾಲೆಯ ಬಳಿಯ ನಿವಾಸಿ ಪಡುಬಿದ್ರೆ ಗ್ರಾಪಂ ಮಾಜಿ ಸದಸ್ಯ ಹಾಜಬ್ಬ (74) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು.
ಧಾರ್ಮಿಕ ಹಾಗೂ ಸಾಮಾಜಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು, ಪಡುಬಿದ್ರೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿ, ಕಂಚಿನಡ್ಕ ಮುಸ್ಲಿಂ ವೆಲ್ಫೇರ್ ಸಂಸ್ಥೆಯ ಗೌರವ ಅಧ್ಯಕ್ಷರಾಗಿ, ಪಡುಬಿದ್ರೆ ಜುಮಾ ಮಸೀದಿಯ ಮಾಜಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಐವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
.
Next Story





