ನಿರ್ಮಾಣ ನಿಷೇಧ ಉಲ್ಲಂಘನೆ ಎನ್ಬಿಸಿಸಿಗೆ 1 ಕೋ. ರೂ. ದಂಡ ವಿಧಿಸಿದ ದಿಲ್ಲಿ ಸರಕಾರ

Photo : PTI
ಹೊಸದಿಲ್ಲಿ, ಡಿ. 17: ರಾತ್ರಿ ನಿರ್ಮಾಣ ಕಾಮಗಾರಿ ನಡೆಸಿದ ಹಾಗೂ ಸುಪ್ರೀಂ ಕೋರ್ಟ್ನ ಮಾಲಿನ್ಯ ನಿಯಮ ಉಲ್ಲಂಘಿಸಿದ ಎನ್ಬಿಸಿಸಿಗೆ 1 ಕೋಟಿ ರೂಪಾಯಿ ದಂಡ ವಿಧಿಸುವಂತೆ ದಿಲ್ಲಿ ಪರಿಸರ ಸಚಿವ ಗೋಪಾಲ ರಾಯ್ ಶುಕ್ರವಾರ ಆದೇಶಿಸಿದ್ದಾರೆ.
ಅಲ್ಲದೆ ಎನ್ಬಿಸಿಸಿಯ ದಿಲ್ಲಿಯ ನಿರ್ಮಾಣ ನಿವೇಶನಕ್ಕೆ ಬೀಗಮುದ್ರೆ ಹಾಕುವಂತೆ ಕೂಡ ಅವರು ಸೂಚಿಸಿದ್ದಾರೆ. ಮಾಲಿನ್ಯ ನಿಯಂತ್ರಿಸಲು ಸುಪ್ರೀಂ ಕೋರ್ಟ್ ವಿಧಿಸಿದ್ದ ನಿಯಮಗಳನ್ನು ಉಲ್ಲಂಘಿಸಿದ ವೀಡಿಯೊ ಹಾಗೂ ಫೋಟೊಗಳೊಂದಿಗೆ ತನಿಖಾ ವರದಿಯೊಂದು ಪತ್ರಿಕೆಯಲ್ಲಿ ಪ್ರಕಟವಾದ ಒಂದು ದಿನದ ಬಳಿಕ ಈ ಆದೇಶ ನೀಡಲಾಗಿದೆ. ಸುಪ್ರೀಂ ಕೋರ್ಟ್ನ ಮಾಲಿನ್ಯ ನಿಯಮ ಉಲ್ಲಂಘನೆ ಕುರಿತಂತೆ ಗೋಪಾಲ್ ರಾಯ್ ಅವರು ಇಂದು ಬೆಳಗ್ಗೆ ಉನ್ನತ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದರು. ಸಭೆಯಲ್ಲಿ ದಿಲ್ಲಿ ಸಂಚಾರ ಪೊಲೀಸ್ ಇಲಾಖೆ, ಪರಿಸರ ಇಲಾಖೆ, ಸಾರಿಗೆ ಇಲಾಖೆ, ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಹಾಗೂ ಎನ್ಬಿಸಿಸಿ ಇಂಡಿಯಾದ ಅಧಿಕಾರಿಗಳು ಪಾಲ್ಗೊಂಡಿದ್ದರು.
Next Story