Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸಿಎಎ ಪ್ರತಿಭಟನೆ ಬಳಿಕದ ಎರಡು ವರ್ಷಗಳು

ಸಿಎಎ ಪ್ರತಿಭಟನೆ ಬಳಿಕದ ಎರಡು ವರ್ಷಗಳು

ಹೋರಾಟ ಈಗ ರಸ್ತೆಯಿಂದ ನ್ಯಾಯಾಲಯಕ್ಕೆ

ಐಶ್ವರ್ಯ ಅಯ್ಯರ್ಐಶ್ವರ್ಯ ಅಯ್ಯರ್18 Dec 2021 11:24 AM IST
share
ಸಿಎಎ ಪ್ರತಿಭಟನೆ ಬಳಿಕದ ಎರಡು ವರ್ಷಗಳು

‘‘ಪ್ರತಿ ಬಾರಿ ನಾನು ನ್ಯಾಯಾಲಯಕ್ಕೆ ಹೋದಾಗಲೆಲ್ಲ ನಾನು ಹೆಚ್ಚಿನ ಭರವಸೆಯೊಂದಿಗೆ ಹಿಂದಿರುಗುತ್ತೇನೆ. ಯಾಕೆಂದರೆ ಅಲ್ಲಿ ನಾನು ಇತರ ಆರೋಪಿಗಳನ್ನು ನೋಡುತ್ತೇನೆ, ಅವರ ಮಾತುಗಳನ್ನು ಕೇಳುತ್ತೇನೆ ಹಾಗೂ ಸಂಭಾಷಣೆ ನಡೆಸುತ್ತೇನೆ’’ ಎಂದು ಸಫೂರಾ ಝರ್ಗರ್ ಹೇಳುತ್ತಾರೆ. ‘‘ಆಗಿನ ಮತ್ತು ಈಗಿನ ಸಮಯಗಳ ನಡುವಿನ ಏಕೈಕ ವ್ಯತ್ಯಾಸವೆಂದರೆ, ಜೀವಂತಿಕೆಯ ಪ್ರತಿಭಟನಾ ಸ್ಥಳಗಳಿಗೆ ಬದಲಾಗಿ, ಈಗ ನ್ಯಾಯಾಲಯಗಳ ಕಾರಿಡಾರ್‌ಗಳಲ್ಲಿ ನಮ್ಮ ಚೇತನ ಪ್ರತಿಧ್ವನಿಸುತ್ತಿದೆ. ಯುಎಪಿಎ ಮತ್ತು ಅದರ ದುರ್ಬಳಕೆ ವಿರುದ್ಧದ ಹೋರಾಟವು ಸಿಎಎ ವಿರುದ್ಧದ ಪ್ರತಿಭಟನಾ ಆಂದೋಲನದ ಭಾಗವೇ ಆಗಿದೆ. ನನ್ನ ಪ್ರಕರಣದಲ್ಲಿ ಹೋರಾಡಲು ನಾನು ದೃಢ ನಿರ್ಧಾರ ಮಾಡಿದ್ದೇನೆ. ಇದೊಂದು ಭಿನ್ನ ಹಂತ ಅಷ್ಟೆ’’ ಎನ್ನುತಾರೆ ಅವರು.

ಈ ದಿನಗಳಲ್ಲಿ, 24 ವರ್ಷದ ಶರ್ಜೀಲ್ ಉಸ್ಮಾನಿ ತನ್ನ ಹೆಚ್ಚಿನ ಸಮಯವನ್ನು ಹಾಜರಿ ಹಾಕುವುದಕ್ಕಾಗಿ ಅಲಿಗಢದ ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ಪ್ರಯಾಣಿಸುವುದರಲ್ಲೇ ಕಳೆಯುತ್ತಾರೆ. ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿರುವ ಅವರ ವಿರುದ್ಧ ನಾಲ್ಕು ಮೊಕದ್ದಮೆಗಳು ದಾಖಲಾಗಿವೆ. ಎಲ್ಲವೂ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆಸಿದ ಪ್ರತಿಭಟನೆಗಳಿಗೆ ಸಂಬಂಧಿಸಿದೆ. ಈ ಕಾಯ್ದೆಯನ್ನು ಸಂಸತ್ತು 2019 ಡಿಸೆಂಬರ್ 11ರಂದು ಅಂಗೀಕರಿಸಿದೆ.

ಸಂಸತ್ತಿನಲ್ಲಿ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆಯೇ, ದೇಶಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ಪ್ರತಿಭಟನೆಗಳು ಬೆಳೆಯುತ್ತಾ, ‘ಸಿಎಎ ಚಳವಳಿ’ ಆಯಿತು. ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಜಾತ್ಯತೀತ ತತ್ವಗಳನ್ನು ಕಡೆಗಣಿಸುತ್ತದೆ ಎನ್ನುವುದು ಅದರ ವಿರುದ್ಧದ ಪ್ರಮುಖ ಆರೋಪವಾಗಿತ್ತು. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ, ಭಾರತೀಯ ಪೌರತ್ವ ಪಡೆಯಲು ಧಾರ್ಮಿಕ ಮಾನದಂಡವನ್ನು ಕಾನೂನೊಂದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಮುಸ್ಲಿಮೇತರ ಅದಾಖಲಿತ ವಲಸಿಗರಿಗೆ ಭಾರತೀಯ ಪೌರತ್ವ ನೀಡುವುದನ್ನು ಈ ಕಾಯ್ದೆ ತ್ವರಿತಗೊಳಿಸುತ್ತದೆ. ಈ ಕಾಯ್ದೆಯು ಪ್ರಸ್ತಾಪಿತ ರಾಷ್ಟ್ರೀಯ ನಾಗರಿಕರ ನೋಂದಣಿ ಜೊತೆಗೆ ಸೇರಿಕೊಂಡು ಭಾರತೀಯ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವುದಕ್ಕೆ ಹಾದಿಯಾಗುತ್ತದೆ ಎಂಬ ಭೀತಿಯನ್ನು ಜನರು ಹೊಂದಿದ್ದಾರೆ.

ಪ್ರತಿಭಟನೆಗಳು ದೇಶಾದ್ಯಂತ ನಡೆದವು. ಹೆಚ್ಚಿನ ಸ್ಥಳಗಳಲ್ಲಿ ಈ ಪ್ರತಿಭಟನೆಗಳ ನೇತೃತ್ವವನ್ನು ಮುಸ್ಲಿಮರು ವಹಿಸಿಕೊಂಡರು. ಆದರೆ, ದೇಶದ ಜಾತ್ಯತೀತ ಹಂದರವನ್ನು ಉಳಿಸಿಕೊಳ್ಳುವುದಕ್ಕಾಗಿ ಎಲ್ಲ ಧರ್ಮಗಳ ಭಾರತೀಯರು ಪ್ರತಿಭಟನೆಗಳಲ್ಲಿ ಭಾಗವಹಿಸಿದರು.

ಎರಡು ವರ್ಷಗಳ ಬಳಿಕ, ಪ್ರತಿಭಟನೆ ನಡೆದ ಸ್ಥಳಗಳು ಖಾಲಿಯಾಗಿವೆ. ಉತ್ತರ ಭಾರತದಲ್ಲಿ, ಪೊಲೀಸರ ಹಿಂಸಾತ್ಮಕ ದಮನ ಕಾರ್ಯಾಚರಣೆ ಮತ್ತು ಬಂಧನಗಳೂ ಇದಕ್ಕೆ ಒಂದು ಕಾರಣವಾಗಿದೆ. ದಿಲ್ಲಿಯಲ್ಲಿ ನಡೆದ ಪ್ರತಿಭಟನೆಗಳಿಗೆ ಹಲವರು ವಿರೋಧ ವ್ಯಕ್ತಪಡಿಸಿದರು ಹಾಗೂ ಇದು 2020ರ ಫೆಬ್ರವರಿಯಲ್ಲಿ ಕೋಮುಗಲಭೆಗೆ ಕಾರಣವಾಯಿತು. ಹಾಗಾಗಿ, ಇನ್ನು ಹಲವು ಪ್ರತಿಭಟನಾ ಸ್ಥಳಗಳು ತೆರವುಗೊಂಡವು. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020 ಮಾರ್ಚ್‌ನಲ್ಲಿ ದೇಶದೆಲ್ಲೆಡೆ ಲಾಕ್‌ಡೌನ್ ಹೇರಿದಾಗ ದೇಶಾದ್ಯಂತದ ಎಲ್ಲ ಪ್ರತಿಭಟನಾ ಸ್ಥಳಗಳು ಅಂತಿಮವಾಗಿ ತೆರವುಗೊಂಡವು. ರಸ್ತೆ ಪ್ರತಿಭಟನೆಗಳನ್ನು ಸಮನ್ವಯಗೊಳಿಸಿದ್ದ ಹಾಗೂ ಚೇತೋಹಾರಿ ಚರ್ಚೆಗಳನ್ನು ಹುಟ್ಟು ಹಾಕಿದ್ದ ಹಲವು ವಾಟ್ಸ್‌ಆ್ಯಪ್ ಗುಂಪುಗಳೂ ಮೌನವಾದವು.

‘‘ಸಮುದಾಯದಲ್ಲಿ ಈಗ ಆಕ್ರೋಶವನ್ನು ನಾನು ಕಾಣುತ್ತಿಲ್ಲ’’ ಎಂದು ಉಸ್ಮಾನಿ ಹೇಳುತ್ತಾರೆ. ಬೀದಿಗಿಳಿಯುವಂತೆ ಜನರನ್ನು ಪ್ರೇರೇಪಿಸಿದ ಆಕ್ರೋಶ, ನಮ್ಮ ಹಕ್ಕುಗಳು ಮತ್ತು ಸಂವಿಧಾನವನ್ನು ಅರಿಯುವತ್ತ ಪ್ರೇರೇಪಿಸಿದ ಆಕ್ರೋಶ, ಏಕತೆಯತ್ತ ನಮ್ಮನ್ನು ಮುನ್ನಡೆಸಿದ ಆಕ್ರೋಶ ಈಗ ಕಾಣುತ್ತಿಲ್ಲ’’ ಎಂದು ಅವರು ಹೇಳುತ್ತಾರೆ.

‘‘ದಿಲ್ಲಿ ಮತ್ತು ಉತ್ತರಪ್ರದೇಶದಲ್ಲಿ ಒಮ್ಮೆ ಚಳವಳಿಯ ನೇತೃತ್ವ ವಹಿಸಿದ್ದವರ ಶ್ರಮ ಈಗ ಬೇರೆ ಕಡೆ ವ್ಯಯವಾಗುತ್ತಿದೆ. ಸಿಎಎ ವಿರೋಧಿ ಚಳವಳಿಯ ವೇಳೆ ಬಂಧನಕ್ಕೊಳಗಾದವರನ್ನು ಹೊರಗೆ ಕರೆ ತರುವುದು ನಮ್ಮ ಮೊದಲ ಆದ್ಯತೆಯಾಗಿದೆ’’ ಎಂದು ಉಸ್ಮಾನಿ ಹೇಳುತ್ತಾರೆ. ‘‘ಅವರು ಸುರಕ್ಷಿತರಾಗಿರುವವರೆಗೆ, ಜೈಲಿನಿಂದ ಹೊರಗೆ ಬರುವವರೆಗೆ ಮತ್ತು ನಮ್ಮಾಂದಿಗೆ ಇರುವವರೆಗೆ ಸಿಎಎ ವಿರೋಧಿ ಪ್ರತಿಭಟನೆಗಳನ್ನು ಪುನರಾರಂಭಿಸುವ ಬಗ್ಗೆ ಯಾವುದೇ ಮಾತುಕತೆ ನಡೆಸುವುದು ಸರಿಯಲ್ಲ’’ ಎನ್ನುತ್ತಾರವರು.

ಭಿನ್ನ ಹೋರಾಟ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡವರ ಪೈಕಿ ಹೆಚ್ಚಿನವರು ಈಗ ಪೊಲೀಸರು ದಾಖಲಿಸಿದ ಮೊಕದ್ದಮೆಗಳಲ್ಲಿ ಸಿಲುಕಿಕೊಂಡು ಜೈಲಿನಲ್ಲಿದ್ದಾರೆ. 29 ವರ್ಷದ ಸಫೂರಾ ಝರ್ಗರ್ ಅವರ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅವರನ್ನು 2020ರ ಎಪ್ರಿಲ್‌ನಲ್ಲಿ ಪೊಲೀಸರು ಬಂಧಿಸಿದಾಗ ಗರ್ಭಿಣಿಯಾಗಿದ್ದರು ಹಾಗೂ ಜಾಮೀನು ಲಭಿಸುವ ಮೊದಲು 74 ದಿನಗಳನ್ನು ದಿಲ್ಲಿಯ ತಿಹಾರ್ ಜೈಲಿನಲ್ಲಿ ಕಳೆದರು. ಕುಖ್ಯಾತ ಎಫ್‌ಐಆರ್ 59ರ ಅಡಿಯಲ್ಲಿ ಆರೋಪ ದಾಖಲಾಗಿರುವ ಹಲವರ ಪೈಕಿ ಸಫೂರಾ ಕೂಡ ಒಬ್ಬರು. ಎಫ್‌ಐಆರ್ 59ರ ಅಡಿಯಲ್ಲಿ ಪೊಲೀಸರು 15 ಪ್ರತಿಭಟನಾಕಾರರ ವಿರುದ್ಧ ಕಠೋರ ಭಯೋತ್ಪಾದನೆ ನಿಗ್ರಹ ಕಾನೂನು ಆಗಿರುವ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳು ವಿಭಜನವಾದಿ ಉದ್ದೇಶಗಳನ್ನು ಹೊಂದಿರುವ ಪಿತೂರಿಯಾಗಿದೆ ಎನ್ನುವುದನ್ನು ಸೂಚಿಸುವುದಕ್ಕಾಗಿ ಪೊಲೀಸರು ಈ ಎಫ್‌ಐಆರ್ ದಾಖಲಿಸಿದ್ದಾರೆ.

‘‘ಅಂದಿನ ದಿನಗಳ ಹಲವು ಸುಂದರ ನೆನಪುಗಳನ್ನು ನಾನು ಹೊಂದಿದ್ದೇನೆ. ಆ ದಿನಗಳಿಗೆ ನಾನು ಮತ್ತೆ ಹೋಗುವಂತಾಗಿದ್ದರೆ ಎಂಬುದಾಗಿ ನಾನು ಕೆಲವು ಸಲ ಯೋಚಿಸುತ್ತೇನೆ’’ ಎಂದು ಸಫೂರಾ ಹೇಳುತ್ತಾರೆ. ಸ್ನೇಹಿತರೊಂದಿಗೆ ನಡೆಸಿದ ಆ ಸಂಭಾಷಣೆಗಳು, ಅಲ್ಲಿ ನಾವು ಯಾವುದಕ್ಕೂ ಹೆದರದೆ, ಮುಖ್ಯವಾಗಿ ನಮ್ಮ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದ ಸ್ಪೆಶಲ್ ಸೆಲ್‌ನ ಭಯವಿಲ್ಲದೆ ಮುಕ್ತವಾಗಿ ಮಾತನಾಡಬಹುದಾಗಿತ್ತು’’ ಎಂದು ಅವರು ಹೇಳಿದರು.

ಜೈಲಿನಿಂದ ಬಿಡುಗಡೆಗೊಂಡ ಕೆಲವು ತಿಂಗಳುಗಳ ಬಳಿಕ ಅವರು ಮಗುವಿಗೆ ಜನ್ಮ ನೀಡಿದರು. ಅವರು ಈಗ ಅರ್ಬನ್ ಸೋಶಿಯಾಲಜಿಯಲ್ಲಿ ಎಂಫಿಲ್ ಮಾಡುತ್ತಿದ್ದಾರೆ. ಇದರೊಂದಿಗೆ ಅವರ ಗಮನ ಹೋರಾಟದಿಂದ ಬೇರೆಡೆಗೆ ಹರಿದಿದೆ.

ಸಫೂರಾ ಝರ್ಗರ್

‘‘ಪ್ರತಿ ಬಾರಿ ನಾನು ನ್ಯಾಯಾಲಯಕ್ಕೆ ಹೋದಾಗಲೆಲ್ಲ ನಾನು ಹೆಚ್ಚಿನ ಭರವಸೆಯೊಂದಿಗೆ ಹಿಂದಿರುಗುತ್ತೇನೆ. ಯಾಕೆಂದರೆ ಅಲ್ಲಿ ನಾನು ಇತರ ಆರೋಪಿಗಳನ್ನು ನೋಡುತ್ತೇನೆ, ಅವರ ಮಾತುಗಳನ್ನು ಕೇಳುತ್ತೇನೆ ಹಾಗೂ ಸಂಭಾಷಣೆ ನಡೆಸುತ್ತೇನೆ’’ ಎಂದು ಅವರು ಹೇಳಿದರು. ‘‘ಆಗಿನ ಮತ್ತು ಈಗಿನ ಸಮಯಗಳ ನಡುವಿನ ಏಕೈಕ ವ್ಯತ್ಯಾಸವೆಂದರೆ, ಜೀವಂತಿಕೆಯ ಪ್ರತಿಭಟನಾ ಸ್ಥಳಗಳಿಗೆ ಬದಲಾಗಿ, ಈಗ ನ್ಯಾಯಾಲಯಗಳ ಕಾರಿಡಾರ್‌ಗಳಲ್ಲಿ ನಮ್ಮ ಚೇತನ ಪ್ರತಿಧ್ವನಿಸುತ್ತಿದೆ. ಯುಎಪಿಎ ಮತ್ತು ಅದರ ದುರ್ಬಳಕೆ ವಿರುದ್ಧದ ಹೋರಾಟವು ಸಿಎಎ ವಿರುದ್ಧದ ಪ್ರತಿಭಟನಾ ಆಂದೋಲನದ ಭಾಗವೇ ಆಗಿದೆ. ನನ್ನ ಪ್ರಕರಣದಲ್ಲಿ ಹೋರಾಡಲು ನಾನು ದೃಢ ನಿರ್ಧಾರ ಮಾಡಿದ್ದೇನೆ. ಇದೊಂದು ಭಿನ್ನ ಹಂತ ಅಷ್ಟೆ’’ ಎಂದರು.

ಆದರೆ ಆಕೆಯ ಆಶಾಭಾವನೆ ಎಲ್ಲರಲ್ಲೂ ಇಲ್ಲ. ಕಳೆದ ತಿಂಗಳವರೆಗೂ ಎಫ್‌ಐಆರ್ 59ರ ಅಡಿಯಲ್ಲಿ ದಾಖಲಾದ ಪ್ರಕರಣಗಳ ವಿಚಾರಣೆಗಾಗಿ ವಿದ್ಯಾರ್ಥಿಗಳು ಮತ್ತು ಹೋರಾಟಗಾರರನ್ನು ಕರೆಸಲಾಗುತ್ತಿತ್ತು. ಪ್ರತಿಭಟನೆಯಲ್ಲಿ ಪಿತೂರಿಯ ಅಂಶವನ್ನು ಸೇರಿಸಲು ಈ ಎಫ್‌ಐಆರ್‌ನ್ನು ಬಳಸಲಾಗಿತ್ತು. ದಿಲ್ಲಿ ಪೊಲೀಸರು 750 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಅವುಗಳ ಪೈಕಿ ಹೆಚ್ಚಿನವುಗಳು ಜಾಮಿಯಾ ಮಿಲ್ಲಿಯ ಇಸ್ಲಾಮಿಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿವೆ. 2019 ಡಿಸೆಂಬರ್ 15ರಂದು ಪೊಲೀಸರು ಈ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗೆ ನುಗ್ಗಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧ ಹಿಂಸಾತ್ಮಕ ದಮನ ಕಾರ್ಯಾಚರಣೆ ನಡೆಸಿದ್ದರು. ಅಂದಿನ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದ ವಿದ್ಯಾರ್ಥಿಗಳನ್ನು ಕಳೆದ ತಿಂಗಳವರೆಗೂ ಪೊಲೀಸರು ವಿಚಾರಣೆ ನಡೆಸುತ್ತಿದ್ದರು.

‘‘ಎಫ್‌ಐಆರ್ 59ರಡಿಯಲ್ಲಿ ಮೊಕದ್ದಮೆ ಎದುರಿಸುತ್ತಿರುವ ಜಾಮಿಯಾ ಮಿಲ್ಲಿಯ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ಅಸಿಫ್ ಇಕ್ಬಾಲ್ ತನ್ಹಾ 2020ರ ಮೇ ತಿಂಗಳಿನಿಂದ ಜೂನ್‌ವರೆಗೆ ಜೈಲಿನಲ್ಲಿದ್ದರು. ಜಾಮಿಯಾ ವಿದ್ಯಾರ್ಥಿಗಳು ಈಗಲೂ ಪೊಲೀಸ್ ಠಾಣೆಗಳಿಗೆ ಅಲೆಯುತ್ತಿದ್ದಾರೆ’’ ಎಂದು ಅವರು ಹೇಳುತ್ತಾರೆ. ‘‘ಎಲ್ಲ ಸಕ್ರಿಯ ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಯಲಾಗಿತ್ತು ಹಾಗೂ ಅವರಿಗೆ ಅಲ್ಲಿ ನೋಟಿಸ್‌ಗಳನ್ನು ನೀಡಲಾಗಿದೆ’’ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿರುವ ತನ್ಹಾ ತಿಳಿಸಿದ್ದಾರೆ. ‘‘ಅದರಿಂದಾಗಿ, ವ್ಯವಸ್ಥೆಯ ವಿರುದ್ಧ ಹೋರಾಡುವ ಧೈರ್ಯ ಕಡಿಮೆಯಾಗಿದೆ’’ ಎಂದು ಅವರು ಹೇಳುತ್ತಾರೆ.

ಶರ್ಜೀಲ್ ಉಸ್ಮಾನಿ

ಹಲವು ಹೋರಾಟಗಾರರಿಗೆ ಹಲವು ವಿಧಗಳಲ್ಲಿ ಬದುಕು ಬದಲಾಗಿದೆ. ಉಸ್ಮಾನಿಗೆ ಅಲಿಗಢ ಜಿಲ್ಲೆಯಲ್ಲಿರುವ ತನ್ನ ಮನೆಗೆ ಹಿಂದಿರುಗಲು ಒಂದೂವರೆ ವರ್ಷ ಬೇಕಾಯಿತು. ಅವರ ವಿರುದ್ಧ ಮೂರು ಬಾರಿ ಉತ್ತರಪ್ರದೇಶ ಗೂಂಡಾಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಯಿತು. ವ್ಯಕ್ತಿಗಳನ್ನು ಒಂದು ನಿರ್ದಿಷ್ಟ ಸ್ಥಳದಿಂದ ನಿರ್ದಿಷ್ಟ ಅವಧಿಗೆ ಗಡೀಪಾರು ಮಾಡಲು ಈ ಕಾಯ್ದೆಯು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಹೆತ್ತವರ ಹಿರಿಯ ಮಗನಾಗಿರುವ ಅವರು ಈಗ ತನ್ನ ಕುಟುಂಬಕ್ಕೆ ಆಸರೆಯಾಗುವುದು ಹೇಗೆಂದು ಚಿಂತಿಸುತ್ತಿದ್ದಾರೆ.

‘‘ಹಿಂದಿನಷ್ಟು ಮಾತನಾಡದಿರಲು ನಾನೀಗ ಕಲಿತಿದ್ದೇನೆ’’ ಎಂದು ಉಸ್ಮಾನಿ ಹೇಳುತ್ತಾರೆ. ‘‘ಏನು ಪ್ರಯೋಜನ?’’ ಎಂದು ಅವರು ಪ್ರಶ್ನಿಸುತ್ತಾರೆ. ‘‘ಭಾರತ ನನಗಾಗಿ ಬದಲಾಗುವುದಿಲ್ಲ. ಉದಾಹರಣೆಗೆ; ನಾನು ಅಲಿಗಢದ ಕೊಳೆಗೇರಿಯೊಂದರಲ್ಲಿ ಹುಟ್ಟಿ ಬೆಳೆದೆ. ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ನಾನು ಕಲಿತೆ. ಅದು ಇನ್ನೊಂದು ಮುಸ್ಲಿಮ್ ಕೊಳೆಗೇರಿ. ನಾನು ದಿಲ್ಲಿಗೆ ಹೋದಾಗ ಶಾಹೀನ್ ಬಾಗ್‌ನಲ್ಲಿ ವಾಸಿಸುತ್ತೇನೆ. ಅದು ಇನ್ನೊಂದು ಮುಸ್ಲಿಮ್ ಕೊಳೆಗೇರಿ. ಇದು ನನಗೆ ಗೊತ್ತಿರುವ ಭಾರತದ ಏಕೈಕ ಕಲ್ಪನೆಯಾಗಿದೆ’’ ಎಂದರು.

ದಮನ ಕಾರ್ಯಾಚರಣೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳ ಹೆಚ್ಚಿನ ನೆನಪುಗಳು ಚೇತೋಹಾರಿ ಚರ್ಚೆ ಮತ್ತು ಸಂಭಾಷಣೆಯಗಳದ್ದಾಗಿದೆ. ಆದರೆ, ಶೀತಲ ಡಿಸೆಂಬರ್‌ನಲ್ಲಿ ನಡೆದ ಹಿಂಸಾಚಾರದ ನೆನಪುಗಳೂ ಇವೆ.

ಉಸ್ಮಾನಿ ಹೇಳುವ ಪ್ರಕಾರ, ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರಗೊಳ್ಳುವ ಮುನ್ನವೇ ಚಳವಳಿಯು ಅಲಿಗಢದಲ್ಲಿ ಆರಂಭಗೊಂಡಿತ್ತು. 2019 ಡಿಸೆಂಬರ್ 6ರಂದು ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, 1992ರಲ್ಲಿ ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಗೊಂಡ ನೆನಪಿನಲ್ಲಿ ‘ಬಾಬರಿ ಸ್ಮರಣೆ ದಿನ’ವನ್ನು ಆಚರಿಸಿದ್ದರು.

‘‘ಆ ಆಚರಣೆಯ ಕೊನೆಯಲ್ಲಿ ನಾನು ಪೌರತ್ವ ತಿದ್ದುಪಡಿ ಮಸೂದೆಯನ್ನು ಪ್ರಸ್ತಾಪಿಸಿದೆ. ಈ ಮಸೂದೆಯು ಜನಾಂಗೀಯ ಹತ್ಯೆ ಎಂಬುದಾಗಿ ನಾನು ಬಣ್ಣಿಸಿದೆ’’ ಎಂದು ಉಸ್ಮಾನಿ ಹೇಳಿದರು. ‘‘ನಾವು ಇದರ ವಿರುದ್ಧ ಪ್ರತಿಭಟಿಸಲೇ ಬೇಕು ಎಂದು ನಾನು ಹೇಳಿದೆ. ಇದಕ್ಕಿಂತ ಮೊದಲು ಇದರ ಬಗ್ಗೆ ಸೂಕ್ತ ಮಾತುಕತೆಗಳು ನಡೆದಿರಲಿಲ್ಲ. ಈ ಬಗ್ಗೆ ಮೊದಲೇ ಯೋಚಿಸುತ್ತಾ ಬಂದಿದ್ದರೋ ಎಂಬಂತೆ, ಬಹುತೇಕ ಎಲ್ಲ ವಿದ್ಯಾರ್ಥಿಗಳು ಬಹುತೇಕ ತಕ್ಷಣಕ್ಕೆ ಪ್ರತಿಭಟನೆಯ ಕಲ್ಪನೆಯನ್ನು ಸ್ವೀಕರಿಸಿದರು. ಡಿಸೆಂಬರ್ 7ರಂದು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗೆ ಹೋಗುವ ಸೈಯದ್ ಗೇಟನ್ನು ಮುಚ್ಚಲಾಯಿತು ಹಾಗೂ ಪ್ರತಿಭಟನೆಗಳು ಆರಂಭಗೊಂಡವು.’’

‘‘ಕಾನೂನು ಸಂಸತ್ತಿನಲ್ಲಿ ಅಂಗೀಕಾರ ಗೊಳ್ಳುತ್ತಿದ್ದಂತೆಯೇ, ಪ್ರತಿಭಟನೆಗಳು ದಿಲ್ಲಿಯ ಜಾಮಿಯಾ ಸೇರಿದಂತೆ ಇತರ ಕ್ಯಾಂಪಸ್‌ಗಳಿಗೂ ಹರಡಿತು. ಡಿಸೆಂಬರ್ 15ರಂದು ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯ ಮತ್ತು ದಿಲ್ಲಿಯ ಜಾಮಿಯಾ ಮಿಲ್ಲಿಯ ವಿಶ್ವವಿದ್ಯಾನಿಲಯ- ಈ ಎರಡೂ ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳಿಗೆ ಪೊಲೀಸರು ನುಗ್ಗಿದರು. ಅದು ಜಾಮಿಯಾದಲ್ಲಿ ಆರಂಭಗೊಂಡಿತು. ಆಗ ಪೊಲೀಸ್ ಹಿಂಸಾಚಾರದ ಸುದ್ದಿ ಮತ್ತು ವೀಡಿಯೊಗಳು ಅಲಿಗಢ ತಲುಪಿದವು.’’

‘‘ನನ್ನ ಸ್ನೇಹಿತ ಜಾಮಿಯಾದಲ್ಲಿದ್ದರು, ಬಹುಷಃ ಬಚ್ಚಲುಕೋಣೆಯಲ್ಲಿದ್ದರು ಎಂದನಿಸುತ್ತದೆ’’ ಎಂದು ಉಸ್ಮಾನಿ ಹೇಳಿದರು. ಪೊಲೀಸರು ಬಚ್ಚಲುಕೋಣೆಗಳಿಗೆ ನುಗ್ಗುತ್ತಿರುವುದನ್ನು ಹಾಗೂ ವಿದ್ಯಾರ್ಥಿಗಳು ಭಯಭೀತರಾಗಿರು ವುದನ್ನು ಅಂದಿನ ರಾತ್ರಿಯ ವೀಡಿಯೊಗಳು ತೋರಿಸಿವೆ. ಅವರು ನನಗೆ ಕರೆ ಮಾಡಿ ಅಳುತ್ತಾ ಹೇಳಿದರು- ‘ಎಲ್ಲವೂ ಮುಗಿಯಿತು. ನನ್ನ ಹೆತ್ತವರಿಂದ ನನ್ನ ಪರವಾಗಿ ಕ್ಷಮೆ ಕೇಳಿ’ ಎಂದು. ಎಎಮ್‌ಯುನ ವಿದ್ಯಾರ್ಥಿಗಳ ಗುಂಪೊಂದಕ್ಕೆ ನಾನು ಆ ಆಡಿಯೊವನ್ನು ಕೇಳಿಸಿದೆ. ಕೊನೆಗೆ, ನಾವು ಏನಾದರೂ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದೆವು. ನಾವು ಪ್ರತಿಭಟನೆ ನಡೆಸಬೇಕಾದ ಅಗತ್ಯವಿತ್ತು. ಎಲ್ಲರಿಗೂ ತುರ್ತು ಕರೆಗಳು ಬರುತ್ತಿದ್ದವು ಹಾಗೂ ಜಾಮಿಯಾದಲ್ಲಿ ಏನು ನಡೆಯುತ್ತಿದೆ ಎಂಬುದಾಗಿ ಅವರು ನಮ್ಮನ್ನು ಕೇಳುತ್ತಿದ್ದರು. ಕೆಲವೇ ಗಂಟೆಗಳಲ್ಲಿ ಎಎಮ್‌ಯುನಲ್ಲೂ ಹಿಂಸಾಚಾರ ನಡೆಯಿತು. ಆ ಹಿಂಸಾಚಾರವು ಈಗಲೂ ಮುಂದುವರಿದಿದ್ದು ನಮ್ಮನ್ನು ಕಾಡುತ್ತಿದೆ’’ ಎಂದರು.

ಉತ್ತರಪ್ರದೇಶ ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ದಮನ ಕಾರ್ಯಾಚರಣೆ ಆರಂಭಿಸಿದರು. ಅದು ದಿಲ್ಲಿಯಲ್ಲಿ ನಡೆದ ಕಾರ್ಯಾಚರಣೆಗಿಂತಲೂ ಹೆಚ್ಚು ಉಗ್ರವಾಗಿತ್ತು. ಅಲಿಗಢದಲ್ಲಿ ಪೊಲೀಸ್ ಹಿಂಸಾಚಾರದಿಂದಾಗಿ ಓರ್ವ ವಿದ್ಯಾರ್ಥಿಯ ಕೈಗೆ ತೀವ್ರ ಗಾಯವಾಗಿದ್ದು, ಬಳಿಕ ಕೈಯನ್ನೇ ತೆಗೆಯಬೇಕಾಯಿತು.

‘‘ನನಗೆ ಸ್ವಲ್ಪಗಾಯವಾಯಿತಾದರೂ ನಾನು ಪೊಲೀಸರಿಂದ ತಪ್ಪಿಸಿಕೊಂಡೆ’’ ಎಂದು ಉಸ್ಮಾನಿ ಹೇಳಿದರು. ಆದರೆ, ಮರುದಿನ ನಾನು ಎದ್ದಾಗ ನನ್ನನ್ನು ‘ಸೂತ್ರಧಾರಿ’ ಎಂಬುದಾಗಿ ಕರೆಯಲಾಯಿತು’’ ಎಂದು ಅವರು ಹೇಳುತ್ತಾರೆ.

ಎರಡು ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ಗಳಲ್ಲಿ ನಡೆದ ಹಿಂಸಾಚಾರದ ಬಳಿಕ, ಹೊಸ ಪ್ರತಿಭಟನೆಗಳು ನಡೆದವು. ಜಾಮಿಯಾ ವಿದ್ಯಾರ್ಥಿಗಳನ್ನು ನಡೆಸಿಕೊಂಡ ರೀತಿಯನ್ನು ವಿರೋಧಿಸಿ ದಿಲ್ಲಿಯ ಶಾಹೀನ್‌ಬಾಗ್‌ನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಲು ಮುಂದಾದರು. ಧರಣಿಯೊಂದಿಗೆ ಅವರ ಪ್ರತಿಭಟನೆ ಆರಂಭಗೊಂಡಿತು. ಆ ಪ್ರತಿಭಟನೆ ಬಳಿಕ ಹಲವು ತಿಂಗಳುಗಳ ಕಾಲ ಮುಂದುವರಿದು ಸಿಎಎ ವಿರುದ್ಧದ ಹೋರಾಟದ ಪ್ರಧಾನ ಕೇಂದ್ರವಾಯಿತು.

ಅಲಿಗಢ ಮತ್ತು ಲಕ್ನೋಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಇಷ್ಟೊಂದು ಭಾರೀ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಹೋರಾಟಗಾರರ ಮುಖಂಡರು ಹೇಳುತ್ತಾರೆ. ‘‘ಲಕ್ನೋದಲ್ಲಿ ಡಿಸೆಂಬರ್ 19ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಎಷ್ಟು ಮಂದಿ ಭಾಗವಹಿಸುತ್ತಾರೆ ಎಂಬುದಾಗಿ ನನ್ನ ಸಂಗಡಿಗರು ಕೇಳಿದಾಗ, ಸುಮಾರು 1,000 ಮಂದಿ ಭಾಗವಹಿಸಬಹುದು ಎಂದು ನಾನು ಹೇಳಿದೆ. ಆದರೆ ಬಳಿಕ ಸಾವಿರಾರು ಮಂದಿ ಅದರಲ್ಲಿ ಭಾಗವಹಿಸಿದರು’’ ಎಂದು ರಿಹಾಯ್ ಏಕತಾ ಮಂಚ್‌ನ ಸ್ಥಾಪಕ ಹಾಗೂ ಹಿರಿಯ ಹೋರಾಟ ಗಾರ 74 ವರ್ಷದ ಮುಹಮ್ಮದ್ ಶುಐಬ್ ಹೇಳಿದರು. ಇಲ್ಲಿಯೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಗಳಲ್ಲಿ ಪಾಲ್ಗೊಂಡರು.

ಆದರೆ, ಪ್ರತಿಭಟನೆಗಳು ದುರಂತ ತಿರುವನ್ನು ಕಂಡವು. ಪ್ರತಿಭಟನಾಕಾರರ ಮೇಲಿನ ಉತ್ತರಪ್ರದೇಶ ಪೊಲೀಸರ ದಮನ ಕಾರ್ಯಾಚರಣೆ ಹೆಚ್ಚಿತು ಹಾಗೂ 23 ಪ್ರತಿಭಟನಾಕಾರರು ಮೃತಪಟ್ಟರು. ಹಲವು ಯುವ ಪ್ರತಿಭಟನಾಕಾರರಿಗೆ ಪೊಲೀಸರು ಚಿತ್ರಹಿಂಸೆ ನೀಡಿದರು ಎನ್ನಲಾಗಿದೆ. ಬಳಿಕ ಹಿಂಸಾಚಾರವು ಇತರ ಹಲವಾರು ಜಿಲ್ಲೆಗಳಿಗೆ ಹರಡಿತು.

ಪ್ರತಿಭಟನೆಗಳ ಚಿತ್ರಗಳ ಮೇಲೆ ಬಣ್ಣ

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳಿಗೆ ಸಂಬಂಧಿಸಿದ ಹಲವು ಚಿತ್ರಗಳನ್ನು ಜಾಮಿಯಾ ಮಿಲ್ಲಿಯ ವಿಶ್ವವಿದ್ಯಾನಿಲಯದ ಗೋಡೆಯಲ್ಲಿ ಬಿಡಿಸಲಾಗಿತ್ತು. ಈಗ ಅವುಗಳೆಲ್ಲದರ ಮೇಲೆ ಬಣ್ಣ ಬಳಿದು ಅವುಗಳು ಕಾಣದಂತೆ ಮಾಡಲಾಗಿದೆ. ಶಾಹೀನ್‌ಬಾಗ್‌ನಲ್ಲೂ, ಸಾಂವಿಧಾನಿಕ ಮೌಲ್ಯಗಳನ್ನು ಬಿಂಬಿಸುವ ಭಿತ್ತಿಪತ್ರಗಳನ್ನು ಹಾಕಲಾಗಿತ್ತು ಹಾಗೂ ಹಂಗಾಮಿ ಗ್ರಂಥಾಲಯವೊಂದನ್ನು ತೆರೆಯಲಾಗಿತ್ತು. ಅವುಗಳನ್ನು ಯಾವತ್ತೋ ತೆರವುಗೊಳಿಸಲಾಗಿದೆ. ಹಾಡುಗಳನ್ನು ಹಾಡಿದ, ಭಾಷಣಗಳನ್ನು ಮಾಡಿದ ಮತ್ತು ಸಂವಿಧಾನದ ಪೀಠಿಕೆಯನ್ನು ಓದಿಹೇಳಲಾದ ಸ್ಥಳಗಳಲ್ಲಿ ಈಗ ವಾಹನಗಳ ಸದ್ದು ತುಂಬಿದೆ.

‘ಇದು ಕಲೆಯ ಮೇಲೆ ನಡೆಸಲಾದ ದಾಂಧಲೆ’’ ಎಂಬುದಾಗಿ ‘ಯುನೈಟೆಡ್ ಅಗೆನ್‌ಸ್ಟ್ ಹೇಟ್’ ಕಾರ್ಯಕಾರಿ ಸಮಿತಿ ಸದಸ್ಯರ ಪೈಕಿ ಒಬ್ಬರಾದ 39 ವರ್ಷದ ಬಾನುಜ್ಯೋತ್ಸ್ನಾ ಲಾಹಿರಿ ಹೇಳುತ್ತಾರೆ. ಈ ಸಂಘಟನೆಯು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು. ‘‘ಅದನ್ನು ಯಾರು ಮಾಡುತ್ತಾರೆ? ಅದು ದಿಲ್ಲಿಯಲ್ಲಿ ಈವರೆಗೆ ನಡೆದಿರುವ ಅತ್ಯಂತ ಸುಂದರ ವಿದ್ಯಮಾನಗಳ ಪೈಕಿ ಒಂದಾಗಿದೆ’’ ಎಂದು ಅವರು ಹೇಳಿದರು.

ಹಾಗಾದರೆ, ಹಿಂಸಾ ಸರಣಿಗಳು, ಬಂಧನಗಳು ಮತ್ತು ಸಾಂಕ್ರಾಮಿಕದ ಲಾಕ್‌ಡೌನ್‌ನಿಂದಾಗಿ ಪ್ರತಿಭಟನೆಗಳು ಮರೆಯಾದರೆ, ಅವರು ಸಾಧಿಸಿದ್ದಾದರೂ ಏನು?

ಪೌರತ್ವ ತಿದ್ದುಪಡಿ ಕಾಯ್ದೆ ಈಗ ನನೆಗುದಿಗೆ ಬಿದ್ದಿದೆ. ಅದನ್ನು ಜಾರಿಗೊಳಿಸಲು ಅಗತ್ಯವಾದ ನಿಯಮಗಳನ್ನು ಇನ್ನೂ ರೂಪಿಸಲಾಗಿಲ್ಲ. ಕಾನೂನನ್ನು ಅನುಷ್ಠಾನಕ್ಕೆ ತರುವುದು ಮುಖ್ಯ. ಅವರು ನಿಯಮಗಳನ್ನು ರೂಪಿಸಲಿ, ಬಳಿಕ ನಾವು ಅದನ್ನು ಪರಿಶೀಲಿಸುತ್ತೇವೆ’’ ಎಂದು ಲಾಹಿರಿ ಹೇಳಿದರು.

ಮುಸ್ಲಿಮ್ ಸಮುದಾಯದ ಹೆಚ್ಚಿನ ಸದಸ್ಯರಿಗೆ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯು ಕೇವಲ ಜಾತ್ಯತೀತ �

share
ಐಶ್ವರ್ಯ ಅಯ್ಯರ್
ಐಶ್ವರ್ಯ ಅಯ್ಯರ್
Next Story
X