ಕೊಪ್ಪ: ದ್ವಿಚಕ್ರ ವಾಹನಕ್ಕೆ ಅಗ್ನಿಶಾಮಕ ದಳದ ವಾಹನ ಢಿಕ್ಕಿ: ಮಹಿಳೆ ಮೃತ್ಯು

ಕೊಪ್ಪ, ಡಿ.18: ದ್ವಿಚಕ್ರ ವಾಹನವೊಂದಕ್ಕೆ ಅಗ್ನಿಶಾಮಕ ದಳದ ವಾಹನ ಢಿಕ್ಕಿ ಹೊಡೆದ ಪರಿಣಾಮ ಸವಾರೆ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕೊಪ್ಪ ಪಟ್ಟಣ ಮುಖ್ಯರಸ್ತೆಯಲ್ಲಿ ಶನಿವಾರ ನಡೆದಿದೆ.
ಮೃತರನ್ನು ಮುಮ್ತಾಝ್(46) ಎಂದು ಗುರುತಿಸಲಾಗಿದೆ. ಇವರು ತಮ್ಮ ದ್ವಿಚಕ್ರ ವಾಹನದಲ್ಲಿ ಪಟ್ಟಣದ ದೇವೇಗೌಡ ವೃತ್ತದಿಂದ ವಾಟರ್ ಟ್ಯಾಂಕ್ ವೃತ್ತದ ಕಡೆ ಸಾಗುತ್ತಿದ್ದಾಗ ಅಗ್ನಿಶಾಮಕದ ದಳದ ವಾಹನ ಢಿಕ್ಕಿಯಾಗಿದೆ ಎನ್ನಲಾಗಿದೆ. ಈ ವೇಳೆ ಅಗ್ನಿ ಶಾಮಕದ ದಳ ವಾಹನದ ಹಿಂಬದಿಯ ಚಕ್ರದಡಿಗೆ ಸಿಲುಕಿ ಸ್ಥಳದಲ್ಲಿಯೇ ಕೊನೆಯುಸಿರೆಳೆದ್ದಾರೆ. ಸ್ಥಳಕ್ಕೆ ಕೊಪ್ಪ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Next Story





