ಸಾಗರ: ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿ ಪೊಲೀಸ್ ವಶ

ಸಾಗರ: ಇಲ್ಲಿನ ವರದಾ ರಸ್ತೆಯಲ್ಲಿ ಟಾಟಾ 407 ವಾಹನದಲ್ಲಿ ಗೋದಾಮಿನಿಂದ ಅಕ್ರಮವಾಗಿ ತುಂಬಿಸಲಾಗುತ್ತಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ತಹಶೀಲ್ದಾರ್ ದಾಳಿ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ತಹಶಿಲ್ದಾರ್ ವಾಹನವನ್ನು ಪರಿಶೀಲಿಸಿದಾಗ ಅನ್ನಭಾಗ್ಯ ಯೋಜನೆಯ 15 ಕ್ವಿಂಟಾಲಿಗೂ ಹೆಚ್ಚು ಅಕ್ಕಿ ಪತ್ತೆಯಾಗಿದೆ.
ಆಹಾರ ಇಲಾಖೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿ ಪಡಿತರ ಅಕ್ಕಿ ತುಂಬಿದ ವಾಹನವನ್ನು ಅವರ ವಶಕ್ಕೆ ಒಪ್ಪಿಸಲಾಗಿದೆ. ಅಕ್ಕಿಯನ್ನು ಪಡಿತರ ಅಕ್ಕಿ ಖಚಿತಪಡಿಸಿದ್ದು, ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ತಹಶಿಲ್ದಾರ್ ಚಂದ್ರಶೇಖರ್ ನಾಯ್ಕ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಹಾರ ಇಲಾಖೆ ನಿರೀಕ್ಷಕಿ ಪುಷ್ಪಲತಾ,ರಾಜಸ್ವ ನಿರೀಕ್ಷಕ ಆನಂದ್ ನಾಯ್ಕ್,ಸಂದೇಶ್ ಪೇಟೆ ಪೋಲೀಸ್ ಠಾಣೆಯ ಎ.ಎಸ್.ಐ ರಂಗನಾಥ್, ದಫೇದಾರ್ ಗಣಪತಿ ರಾವ್,ಪೇದೆಗಳಾದ ಅಬ್ದುಲ್ ಶುಕೂರ್, ಶಿವಾನಂದ್ ಮತ್ತಿತರರು ಇದ್ದರು.
Next Story





