ವಿಟ್ಲ : ಡಿ.20ರಂದು ಎ.ಎಂ ನೌಶಾದ್ ಬಾಖವಿ ಕೆಲಿಂಜಕ್ಕೆ

ವಿಟ್ಲ : ಇಲ್ಲಿಗೆ ಸಮೀಪದ ಕೆಲಿಂಜ ಮುಹಿಯುದ್ದೀನ್ ಜುಮಾ ಮಸೀದಿ ಹಾಗೂ ಹಯಾತುಲ್ ಇಸ್ಲಾಂ ಮದರಸ ಇದರ ಜಂಟಿ ಆಶ್ರಯದಲ್ಲಿ ಮರ್ಹೂಂ ಮಿತ್ತಬೈಲ್ ಉಸ್ತಾದರ ಅನುಸ್ಮರಣೆ ಮತ್ತು ಧಾರ್ಮಿಕ ಪ್ರವಚನ ಡಿ. 20ರಂದು ನಡೆಯಲಿದ್ದು, ಎ.ಎಂ ನೌಶಾದ್ ಬಾಖವಿ ತಿರುವನಂತಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಕೆಲಿಂಜ ಮಸೀದಿ ಖತೀಬ್ ಅಬ್ಬಾಸ್ ದಾರಿಮಿ ಕೆಲಿಂಜ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೆಲಿಂಜ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಕರೀಂ ಕಂಪದಬೈಲು ಅಧ್ಯಕ್ಷತೆ ವಹಿಸಲಿದ್ದು ಇರ್ಷಾದ್ ದಾರಿಮಿ ಮಿತ್ತಬೈಲ್, ಶಾಸಕ ಯು.ಟಿ ಖಾದರ್, ಅಬೂಬಕ್ಕರ್ ಹಾಜಿ ಗೋಳ್ತಮಜಲು, ಕೆ.ಎಸ್ ಇಸ್ಮಾಯಿಲ್ ಹಾಜಿ ಕಲ್ಲಡ್ಕ, ಹಾಜಿ ಕೆಂಪಿ ಮುಸ್ತಫ ಹಾಗೂ ಹಲವಾರು ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಕರೀಂ ಕಂಪದಬೈಲ್, ಮಹಮ್ಮದ್ ಇಸ್ಮಾಯಿಲ್ ಮುನ್ನಾ, ರಾಝಿಕ್ ಕೆಲಿಂಜ, ಮಹಮ್ಮದ್ ಅಲಿ ಉಪಸ್ಥಿತರಿದ್ದರು.
Next Story





