ಆದಿತ್ಯನಾಥ್ ರನ್ನು 'ಉಪಯೋಗಿʼ ಎಂದ ಮೋದಿ: 'ಅನುಪಯೋಗಿʼ ಎಂದು ವ್ಯಂಗ್ಯವಾಡಿದ ಅಖಿಲೇಶ್ ಯಾದವ್

ಲಕ್ನೊ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯೋಗಿ ಆದಿತ್ಯನಾಥ್‌ರನ್ನು 'ಉಪಯೋಗಿ' ಎಂದು ಶನಿವಾರ ಬಣ್ಣಿಸಿದ್ದರು. ಮೋದಿ ಬಣ್ಣನೆಯನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಆದಿತ್ಯನಾಥ್‌ರನ್ನು 'ಅನುಪಯೋಗಿ(ನಿರುಪಯೋಗಿ)'ಎಂದು ನಿಂದಿಸಿರುವ ಅಖಿಲೇಶ್, ಯೋಗಿ ಆಡಳಿತದಲ್ಲಿ ದಲಿತರು ಹಾಗೂ ಮಹಿಳೆಯರ ಮೇಲೆ ನಡೆದಿರುವ ದಾಳಿಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
ಶಹಜಹಾನ್‌ಪುರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉತ್ತರಪ್ರದೇಶಲ್ಲಿ ಮಾಫಿಯಾಗಳನ್ನು ತೊಡೆದುಹಾಕಲಾಗಿದೆ. ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ UP + Yogi. Bahut hai Upyogi' ('ಯುಪಿ+ಯೋಗಿ' 'ತುಂಬಾ ಉಪಯೋಗಿ') ಎಂದು ಹೇಳಿದರು.
ಇದಕ್ಕೆ ತಿರುಗೇಟು ನೀಡಿದ ಅಖಿಲೇಶ್, ಹತ್ರಸ್‌ನ ಹೆಣ್ಣು ಮಗಳು, ಲಖಿಂಪುರದ ರೈತರು, ಗೋರಖ್‌ಪುರದ ವ್ಯಾಪಾರಿ, ಅಸುರಕ್ಷಿತ ಭಾವನೆಯಲ್ಲಿರುವ ಮಹಿಳೆಯರು, ನಿರುದ್ಯೋಗಿ ಯುವಕರು,ದಲಿತರು ಹಾಗೂ ಹಿಂದುಳಿದ ವರ್ಗದ ಜನರು ಈಗಿನ ಸರಕಾರ ನಿರುಪಯುಕ್ತ ಎಂದು ಹೇಳುತ್ತಿದ್ದಾರೆ ಎಂದರು.





