ಯುವತಿ ನಾಪತ್ತೆ
ಮಂಗಳೂರು, ಡಿ.18: ನಗರದ ಬೆಂದೂರ್ ವೆಲ್ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ 2 ವರ್ಷದಿಂದ ಕೆಲಸಕ್ಕಿದ್ದ ರಂಜಿತಾ (19) ಎಂಬಾಕೆ ಡಿ.17ರಂದು ಬೆಳಗ್ಗಿನಿಂದ ನಾಪತ್ತೆಯಾಗಿದ್ದಾರೆ ಎಂದು ಕದ್ರಿ ಪೊಲೀಸರಿಗೆ ದೂರು ನೀಡಲಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
4.9 ಅಡಿ ಎತ್ತರವಿದ್ದು ಗೋಧಿ ಮೈಬಣ್ಣ, ಸಪೂರ ಶರೀರ ಹೊಂದಿದ್ದಾರೆ. ಕನ್ನಡ ಮಾತನಾಡುತ್ತಾರೆ. ಗುಲಾಬಿ ಬಣ್ಣದ ಚೂಡಿದಾರ ಮತ್ತು ಪ್ಯಾಂಟ್ ಧರಿಸಿದ್ದರು. ಮಾಹಿತಿ ದೊರೆತವರು ಕದ್ರಿ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.
Next Story





