ಕಾರ್ಕಳ: ಕೋವಿಡ್ ಪರಿಹಾರ ವಿತರಣೆ

ಕಾರ್ಕಳ, ಡಿ.18: ಕೋವಿಡ್‌ನಿಂದ ಮೃತಪಟ್ಟ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳ 38 ಮಂದಿ ಬಿಪಿಎಲ್ ಕುಟುಂಬ ಹಿನ್ನೆಲೆಯ 38 ಮಂದಿ ಮೃತ ವ್ಯಕ್ತಿಗಳ ವಾರಸುದಾರರಿಗೆ ತಲಾ 1 ಲಕ್ಷ ರೂ. ಪರಿಹಾರ ಚೆಕ್‌ನ್ನು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಸಚಿವ ವಿ.ಸುನಿಲ್ ಕುಮಾ್ ಇಂದು ಕಾರ್ಕಳದಲ್ಲಿ ವಿತರಿಸಿದರು.
ಕಾರ್ಕಳ ಸಾಮರ್ಥ್ಯ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪುರಂದರ ಕೆ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಗುರುದತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರವಿಚಂದ್ರ ಕಾರ್ಯಕ್ರಮ ನಿರ್ವಹಿಸಿದರು.

Next Story





