ಕಾಪು ಪುರಸಭಾ ಚುನಾವಣೆ ಬಿಜೆಪಿ ಆಡಳಿತ ನಿಶ್ಚಿತ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ಕಾರ್ಯದರ್ಶಿಸಲೀಂ ಅಂಬಾಗಿಲು
ಉಡುಪಿ, ಡಿ.19: ಕಾಪು ಪುರಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 23 ವಾರ್ಡ್‌ಗಳಲ್ಲಿ ಕ್ರಿಯಾಶೀಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಈ ಬಾರಿ ಬಿಜೆಪಿ ಆಡಳಿತ ನಿಶ್ಚಿತ ಎಂದು ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚ ಕಾರ್ಯದರ್ಶಿ ಎಂ.ಸಲೀಂ ಅಂಬಾಗಿಲು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಡಳಿತಾತ್ಮಕ ಸುಧಾರಣೆ ಹೇಗೆ ಸಾಧ್ಯ ಎಂದು ಗ್ರಾಮ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೂ ತೋರಿಸಿಕೊಟ್ಟ ನಮ್ಮ ಸರಕಾರದ ಸಾಧನೆಗಳೇ ನಮ್ಮ ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಿದ್ದು ಎಲ್ಲೆಲ್ಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದರು.
Next Story





