ಕನ್ನಡ ವಿರೋಧಿ ಚಟುವಟಿಕೆಗಳನ್ನು ಸಹಿಸಲು ಸಾಧ್ಯವಿಲ್ಲ: ಸಚಿವ ಸುನೀಲ್‍ಕುಮಾರ್

ಚಿಕ್ಕಮಗಳೂರು, ಡಿ.19: ಎಂಇಎಸ್ ಸೇರಿದಂತೆ ಇನ್ಯಾವುದೇ ಸಂಘಟನೆಗಳು ಕನ್ನಡ ವಿರೋಧಿ ಚಟುವಟಿಕೆಗಳನ್ನು ನಡೆಸಿದರೆ ಯಾವುದೇ ಕಾರಣಕ್ಕೂ ನಮ್ಮ ಸರಕಾರ ಸಹಿಸುವುದಿಲ್ಲ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನೀಲ್‍ಕುಮಾರ್ ಎಚ್ಚರಿಕೆ ನೀಡಿದರು.
ತಾಲೂಕಿನ ಐಡಿ ಪೀಠದಲ್ಲಿ ದತ್ತ ಪಾದುಕೆಗಳ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ವಿರೋಧಿ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಸೂಕ್ತ ಕ್ರಮವನ್ನು ಸರಕಾರ ತೆಗೆದುಕೊಳ್ಳುತ್ತದೆ. ಎಲ್ಲೋ ಒಂದು ಕಡೆ ಪಿತೂರಿ ನಡೆಸುವ ಮೂಲಕ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವನ್ನು ದುಷ್ಕರ್ಮಿಗಳು ನಡೆಸುತ್ತಿದ್ದಾರೆ. ಇಂತಹವರ ವಿರುದ್ಧ ಕಾನೂನು ಕ್ರಮವನ್ನು ಖಂಡಿತವಾಗಿಯೂ ಸರಕಾರ ತೆಗೆದುಕೊಳ್ಳಲಾಗುತ್ತದೆ ಎಂದರು
ಕನ್ನಡದ ನೆಲ, ಧ್ವಜ ಸಾಹಿತ್ಯವನ್ನು ಎಲ್ಲರೂ ಗೌರವಿಸಬೇಕು. ಅವರು ಎಷ್ಟೇ ದೊಡ್ಡವರಾದರೂ ಎಲ್ಲರೂ ಕನ್ನಡ ನಾಡು, ನುಡಿಗೆ ಗೌರವ ನೀಡಬೇಕು. ಯಾರು ಇದನ್ನು ಗೌರವಿಸುವುದಿಲ್ಲವೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸರಕಾರದ ಜವಬ್ದಾರಿ ಎಂದರು.
Next Story





