ಬಸ್ ತಂಗುದಾಣಕ್ಕೆ ನುಗ್ಗಿದ ಕಾರು: ಯುವತಿ ಅಪಾಯದಿಂದ ಪಾರು
ಮಂಗಳೂರು, ಡಿ.19: ಕಾರೊಂದು ರಸ್ತೆಯಿಂದ ಬಸ್ ನಿಲ್ದಾಣದತ್ತ ನುಗ್ಗಿದ ಘಟನೆ ರವಿವಾರ ರಾತ್ರಿ 7 ಗಂಟೆಯ ಸುಮಾರಿಗೆ ನಗರದ ಶಿವಭಾಗ್ ನಲ್ಲಿ ಸಂಭವಿಸಿದೆ.
ಕದ್ರಿ ಮಲ್ಲಿಕಟ್ಟೆ ಕಡೆಯಿಂದ ಅತೀ ವೇಗದಿಂದ ಬಂದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಪೆಟ್ರೋಲ್ ಪಂಪ್ ಎದುರಿನ ಬಸ್ ತಂಗುದಾಣದತ್ತ ನುಗ್ಗಿತು. ಬಸ್ ನಿಲ್ದಾಣದಲ್ಲಿದ್ದವರು ಓಡಿ ತಪ್ಪಿಸಿಕೊಂಡಿದ್ದಾರೆ. ಯುವತಿಯೋರ್ವಳನ್ನು ಓರ್ವರು ಮಹಿಳೆ ಪಕ್ಕಕ್ಕೆ ಎಳೆದು ರಕ್ಷಿಸಿದ್ದಾರೆ. ಇಲ್ಲದಿದ್ದರೆ ಭಾರಿ ಅನಾಹುತವಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕದ್ರಿ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿದ್ದಾರೆ.
Next Story





