'ಮನೆಯಲ್ಲೇ ಆಕ್ಸಿಜನ್ ತಯಾರಿಸುವುದು ಹೇಗೆ?ʼ: 2021 ರ ಟಾಪ್-10 ಗೂಗಲ್ ಹುಡುಕಾಟಗಳ ಪಟ್ಟಿ

ಹೊಸದಿಲ್ಲಿ: ಸರ್ಚ್ ಇಂಜಿನ್ ದೈತ್ಯ ಗೂಗಲ್ 2021ರ ವಾರ್ಷಿಕ ರಿಕ್ಯಾಪ್ ಅನ್ನು ಬಿಡುಗಡೆ ಮಾಡಿದ್ದು, ಫಲಿತಾಂಶಗಳು ಆಸಕ್ತಿದಾಯಕವಾಗಿದೆ. ಈ ವರ್ಷದಲ್ಲಿ ಕೋವಿಡ್-19 ಹಾಗೂ ಕೋವಿಡ್ ಲಸಿಕೆಗೆ ನೋಂದಾಯಿಸಿಕೊಳ್ಳುವುದು ಹೇಗೆ? ಎಂಬ ವಿಚಾರಗಳಿಗೆ ಸಂಬಂಧಿಸಿ ಹೆಚ್ಚಿನ ಹುಡುಕಾಟಗಳನ್ನು ಮಾಡಲಾಗಿದೆ ಎಂದು ಗೂಗಲ್ ತಿಳಿಸಿದೆ. ಇನ್ನು ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಭಾರತದಲ್ಲಿ ಡಾಜ್ ಕಾಯಿನ್ ಖರೀದಿ ಮತ್ತು ಬಿಟ್ ಕಾಯಿನ್ ಹೂಡಿಕೆ ಹೇಗೆ ?ಎಂಬ ಪ್ರಶ್ನೆಗಳೂ ಪಟ್ಟಿಯಲ್ಲಿವೆ.
ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ವಿಷಯವೆಂದರೆ 'ಕೋವಿಡ್ ಲಸಿಕೆಗಾಗಿ ನೋಂದಾಯಿಸುವುದು ಹೇಗೆ' ಎಂಬ ಪ್ರಶ್ನೆಯಾಗಿದೆ. ದೇಶದಲ್ಲಿ ಕೋವಿಡ್ ವಿರುದ್ಧ ಭಾರತವು ತನ್ನ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದಂತೆಯೇ ಇದು ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿತ್ತು. ಎರಡನೇ ಅತಿ ಹೆಚ್ಚು ಹುಡುಕಲಾದ ವಿಷಯವೆಂದರೆ 'ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುವುದಾಗಿದೆ.
ಇನ್ನು, ಭಾರತದಲ್ಲಿ ಬಳಕೆದಾರರು ಹುಡುಕುತ್ತಿರುವ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ 'ಮನೆಯಲ್ಲಿ ಆಮ್ಲಜನಕವನ್ನು ಹೇಗೆ ತಯಾರಿಸುವುದು?.' ‘ಪ್ಯಾನ್ ಮತ್ತು ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು’ ಎಂಬುದನ್ನು ಕಲಿಯುವ ಕುತೂಹಲವನ್ನೂ ಹೊಂದಿದ್ದರು ಎಂದು ಗೂಗಲ್ ತಿಳಿಸಿದೆ.
ಭಾರತದಲ್ಲಿ 2021 ರ ಟಾಪ್ 10 'ಹೇಗೆ (How to)' ಟ್ರೆಂಡ್‌ಗಳು ಇಲ್ಲಿವೆ:
1) ಕೋವಿಡ್ ಲಸಿಕೆಗಾಗಿ ನೋಂದಾಯಿಸುವುದು ಹೇಗೆ?
2) ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ?
3) ಆಮ್ಲಜನಕದ ಮಟ್ಟವನ್ನು ಹೇಗೆ ಹೆಚ್ಚಿಸುವುದು?
4) ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡುವುದು ಹೇಗೆ?
5) ಮನೆಯಲ್ಲಿ ಆಮ್ಲಜನಕವನ್ನು ಹೇಗೆ ತಯಾರಿಸುವುದು?
6) ಭಾರತದಲ್ಲಿ Dogecoin ಅನ್ನು ಹೇಗೆ ಖರೀದಿಸುವುದು?
7) ಬಾಳೆಹಣ್ಣಿನ ಬ್ರೆಡ್ ಮಾಡುವುದು ಹೇಗೆ?
8) IPO ಹಂಚಿಕೆ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು?
9) ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ?
10) ಶೇಕಡಾವಾರು ಅಂಕಗಳನ್ನು ಹೇಗೆ ಲೆಕ್ಕ ಹಾಕುವುದು?
ಪ್ರತಿ ವರ್ಷ, ಗೂಗಲ್ ವಿವಿಧ ವರ್ಗಗಳಲ್ಲಿ ವರ್ಷದ ಟಾಪ್ ಸರ್ಚ್ ಮಾಡಿದ ಟ್ರೆಂಡ್‌ಗಳ ಪಟ್ಟಿಗಳನ್ನು ಬಿಡುಗಡೆ ಮಾಡುತ್ತದೆ. ಸುದ್ದಿ, ಕ್ರೀಡೆ, ಮನರಂಜನೆ ಮತ್ತು ಇತರ ವರ್ಗಗಳಾದ್ಯಂತ ಭಾರತೀಯರು ವರ್ಷವಿಡೀ ಹೆಚ್ಚು ಹುಡುಕಿರುವ ವಿಷಯಗಳ ಕುರಿತು ಪಟ್ಟಿಯು ವಿವರ ನೀಡುತ್ತದೆ.