ಮುಖ್ಯಮಂತ್ರಿಯ ಕಣ್ಣೀರು ಜಾಗ ಖಾಲಿ ಮಾಡುವ ಮುನ್ಸೂಚನೆ: ಸಿ.ಎಂ. ಇಬ್ರಾಹಿಮ್

ಬೆಳಗಾವಿ, ಡಿ.20: ತಮ್ಮ ತವರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾವುಕರಾಗಿ ಕಣ್ಣೀರು ಹಾಕಿರುವುದು ಮುಂದೆ ಜಾಗ ಖಾಲಿ ಮಾಡುವ ಮುನ್ಸೂಚನೆ ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಎಂ.ಇಬ್ರಾಹಿಮ್ ಹೇಳಿದರು.
ಸೋಮವಾರ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರು ಅಧಿಕಾರ ಶಾಶ್ವತವಲ್ಲ ಎಂದಿದ್ದಾರೆ. ಅದನ್ನು ನೋಡಿ ಬಸವಕೃಪದವರು ಬಸವಕೃಪದಲ್ಲೇ ಇರಿ. ಕೇಶವ ಕೃಪ ನಂಬಿಹೋದರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವಂತಿದೆ ಎಂದರು.
ಬೆಳಗಾವಿಯಲ್ಲಿ ಎಂಇಎಸ್ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಎಂಇಎಸ್ ಬಗ್ಗೆ ಮಾತನಾಡಲು ಧೈರ್ಯವಿಲ್ಲ. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರಿಗೆ ಇರುವ ಧೈರ್ಯವೂ ಇಲ್ಲಿನ ನಾಯಕರಿಗಿಲ್ಲ ಎಂದು ಹೇಳಿದರು.
Next Story





