ಡಿಸಿ ಮನ್ನಾ ಭೂಮಿ ದಲಿತರಿಗೆ ಹಂಚುವಂತೆ ಆಗ್ರಹಿಸಿ ಮನವಿ

ಉಡುಪಿ, ಡಿ.20: ದಲಿತರಿಗೆ ಮೀಸಲಿರಿಸಿದ ಡಿಸಿ ಮನ್ನಾ ಭೂಮಿಯನ್ನು ತಕ್ಷಣ ದಲಿತ ಕುಟುಂಬಗಳಿಗೆ ಹಂಚಿಕೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘಷ ಸಮಿತಿ ಮತ್ತು ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಜನಪರ ಹೋರಾಟಗಾರ ಜಯನ್ ಮಲ್ಪೆ, ಭೂಮಿ ಒಡೆತನದಲ್ಲಿನ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಿ ದಲಿತ ಭೂ ವಂಚಿತರಿಗೆ ಭೂಮಿ ಕೊಡಬೇಕು. ಅನೇಕ ಜಿಲ್ಲಾಧಿಕಾರಿಗಳು ಹಲವಾರು ವರ್ಷಗಳ ಕಾಲ ಭರವಸೆ ನೀಡಿಯೇ ಕಾಲ ಕಳೆದರು ವಿನಹ: ಪ್ರಮಾಣಿಕ ಪ್ರಯತ್ನ ಮಾಡಿಲ್ಲ ಎಂದು ದೂರಿದರು.
ಮನವಿ ಸ್ವೀಕವಿಸಿದ ಜಿಲ್ಲಾಧಿಕಾರಿ ಕುರ್ಮಾರಾವ್ ಆದಷ್ಟು ಬೇಗ ಈ ಬಗ್ಗೆ ವಿಶೇಷ ಸಭೆ ಕರೆಯುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮಂಜುನಾಥ ಗಿಳಿಯಾರು, ವಾಸುದೇವ ಮುದೂರು, ರಾಜು ಬೆಟ್ಟಿನಮನೆ, ನಾಗರಾಜು ಉಪ್ಪುಂದ, ನಾರಾಯಣ ಗುಂಡ್ಮಿ, ಪುರಸಭಾ ಸದಸ್ಯ ಪ್ರಭಾಕರ ಕುಂದಾಪುರ, ಸುರೇಶ್ ಬಾರ್ಕೂರು, ನಾಗರಾಜು ಸಟ್ಚಾಡಿ, ಸುರೇಶ್ ಹಕ್ಲಾಡಿ, ಗೀತಾ ಸರೇಶ್, ಮಂಜುನಾಥ ನಾಗೂರು, ಸುರೇಶ್ ಅಂಪಾರು, ಲಕ್ಷ್ಮಣ ಬೈಂದೂರು, ಮಂಜುನಾಥ ಕಪ್ಪೆಟ್ಟು, ಸುರೇಶ್ ಕಪ್ಪೆಟ್ಟು, ಕೃಷ್ಣ ಶ್ರೀಯಾನ್ ಮಲ್ಪೆ, ಪ್ರಸಾದ್ ಮಲ್ಪೆ, ಬಿ.ಎನ್.ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.







