ಇಸ್ಪೀಟ್ ಜುಗಾರಿ: 13 ಮಂದಿ ಬಂಧನ
ಮಲ್ಪೆ, ಡಿ.20: ಮಲ್ಪೆಬಂದರಿನ ಬೇಬಿ ಮೇರಿನ ಫ್ಯಾಕ್ಟರಿ ಬಳಿ ಡಿ.19ರಂದು ಇಸ್ಪೀಟು ಜುಗಾರಿ ಆಡುತ್ತಿದ್ದ 13 ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ವೀರಪ್ಪ, ಯಮನೂರು, ಷಣ್ಮುಗ, ಬೀರಪ್ಪ, ಮರಿಸ್ವಾಮಿ, ಬಸವರಾಜ್, ಲಿಂಗರಾಜು, ರಮೇಶ, ಫಜೀಲ್, ರಫೀಕ್, ಹನುಮಗೌಡ, ಮೊಹಮ್ಮದ್ ರಫೀಕ್, ರಮೇಶ ಬಂಧಿತ ಆರೋಪಿಗಳು. ಬಂಧಿತರಿಂದ 7,600ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





