ಡಿ.21ರಂದು ಮುನ್ಸಿಪಲ್ ಕಾರ್ಮಿಕರಿಂದ ಬೆಳಗಾವಿ ಚಲೋ
ಉಡುಪಿ, ಡಿ.20: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ, ನೇರ ಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನದ ಅಡಿಯಲ್ಲಿ ದುಡಿಯುತ್ತಿರುವ ಎಲ್ಲಾ ಪೌರ ಕಾರ್ಮಿಕರು ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕ ಸಂಘ ಸಿಐಟಿಯು ರಾಜ್ಯ ಸಮಿತಿಯ ನೇತೃತ್ವದಲ್ಲಿ ಡಿ.21ರ ಮಂಗಳವಾರ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿ ಚಲೋ ಳುವಳಿ ನಡೆಸಲಿದ್ದಾರೆ.
ಎಲ್ಲಾ ಕಾರ್ಮಿಕರ ಖಾಯಂಮಾತಿ, ಸಮಾನ ವೇತನ, ಗುತ್ತಿಗೆ ಪದ್ಧತಿ ನಿಷೇಧ ಇವರ ಪ್ರಮುಖ ಬೇಡಿಕೆ ಗಳಾಗಿವೆ. ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುನ್ಸಿಪಲ್ ಕಾರ್ಮಿಕರು ನಾಳೆ ಬೆಳಗಾವಿ ಚಲೋ ನಡೆಸುವರು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
Next Story