ಚಿಕಾಗೋ ಯುನಿವರ್ಸಿಟಿಯ 3 ಕೋಟಿ ರೂ. ಸ್ಕಾಲರ್ಶಿಪ್ ಗೆದ್ದ ತಮಿಳುನಾಡಿನ ರೈತನ ಪುತ್ರಿ

Photo | Twitter/@Sharad Sagar
ಚೆನ್ನೈ: ತಮಿಳುನಾಡಿನ ಈರೋಡ್ ಜಿಲ್ಲೆಯ 17 ವರ್ಷದ ಬಾಲಕಿಯೊಬ್ಬಳು ಅಮೆರಿಕದ ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು 3 ಕೋಟಿ ರೂ.ಗಳ ಸಂಪೂರ್ಣ ವಿದ್ಯಾರ್ಥಿವೇತನವನ್ನು ಗೆದ್ದುಕೊಂಡಿದ್ದಾಳೆ ಎಂದು newindianexpress.com ವರದಿ ಮಾಡಿದೆ.
ಈರೋಡ್ನ ಕಾಸಿಪಾಳ್ಯಂ ಗ್ರಾಮದ ನಿವಾಸಿಯಾಗಿರುವ ರೈತನ ಪುತ್ರಿ ಸ್ವೇಗಾ ಸಾಮಿನಾಥನ್ ಅವರು ಈ ವಿದ್ಯಾರ್ಥಿವೇತನ ಪಡೆದಿದ್ದಾಗಿ ಡೆಕ್ಸ್ಟರಿಟಿ ಗ್ಲೋಬಲ್ ಪ್ರಕಟಣೆ ಬಿಡುಗಡೆಗೊಳಿಸಿದ್ದು, ಸ್ವೇಗಾ ಅಲ್ಲಿ ನಾಯಕತ್ವ ಅಭಿವೃದ್ಧಿ ಮತ್ತು ವೃತ್ತಿ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ತರಬೇತಿ ಪಡೆದಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವೇಗಾ 14 ವರ್ಷದವಳಿದ್ದಾಗ ಡೆಕ್ಸ್ಟೆರಿಟಿ ಗ್ಲೋಬಲ್ನಿಂದ ಗುರುತಿಸಲ್ಪಟ್ಟಿದ್ದು, ಅಲ್ಲಿ ಸಂಪೂರ್ಣ ತರಬೇತಿ ಪಡೆದುಕೊಂಡಿದ್ದಳು. ತನಗೆ ಸಿಕ್ಕಿದ ವಿದ್ಯಾರ್ಥಿವೇತನದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ ಸ್ವೇಗಾ, ಡೆಕ್ಸ್ಟೆರಿಟಿ ಗ್ಲೋಬಲ್ ಸಂಸ್ಥೆ ಮತ್ತು ಅದರ ಸಂಸ್ಥಾಪಕ ಶರದ್ ಸಾಗರ್ ಅವರಿಗೆ ಧನ್ಯವಾದ ಹೇಳಿದ್ದಾರೆ.
THIS IS HUGE!! A 17-yr-old Dexterity to College fellow from Erode in Tamil Nadu, the daughter of a small farmer, Swega has been accepted to the University of Chicago (@UChicago), one of the top 10 universities in the world, on a full scholarship worth ₹3 crores. #ThisIsDexterity pic.twitter.com/hsSs4w4Djt
— Sharad Vivek Sagar (@SharadTalks) December 20, 2021