ಪಾಲ್ದನೆ ಚರ್ಚ್: ಕ್ರಿಸ್‌ಮಸ್ ಕ್ಯಾರಸ್ ಸ್ಪರ್ಧೆ

ಮಂಗಳೂರು, ಡಿ.20: ನಗರದ ಪಾಲ್ದನೆಯಲ್ಲಿರುವ ಸಂತ ತೆರೆಜಾ ಚರ್ಚಿನಲ್ಲಿ ಕ್ರಿಸ್ಮಸ್ ಪ್ರಯುಕ್ತ ಚರ್ಚಿನ ವ್ಯಾಪ್ತಿಯಲ್ಲಿ ಬರುವ ಅಂತರ್ ವಾರ್ಡ್ ಮಟ್ಟದ ಕ್ರಿಸ್ಮಸ್ ಕ್ಯಾರಲ್ (ಕ್ರಿಸ್ಮಸ್ ಹಾಡುಗಳು)ನ ಸ್ಪರ್ಧೆ ನಡೆಯಿತು.
ಹಾಡುಗಳ ಸ್ಪರ್ಧೆಯನ್ನು ಚರ್ಚಿನ ಐಸಿವೈಎಂ ಘಟಕದ ಸದಸ್ಯರ ನಾಯಕತ್ವದಲ್ಲಿ ನಡೆಯಿತು. 18 ವರ್ಷದ ಕೆಳಗಿನ ಹಾಗೂ 18 ವರ್ಷದ ಮೇಲಿನ ವಯಸ್ಸಿನ ಎರಡು ಗುಂಪುಗಳಾಗಿ ನಡೆಸಲಾಯಿತು. ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ಆಲ್ಬನ್ ಡಿಸೋಜ ಸ್ಪರ್ಧೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಐ.ಸಿ.ವೈ.ಎಂ. ಘಟಕದ ಅಧ್ಯಕ್ಷ ಆ್ಯಶ್ಲಿ ಡಿಸೋಜ, ಕಾರ್ಯದರ್ಶಿ ಆ್ಯರನ್ ಲೋಬೋ, ಐ.ಸಿ.ವೈ.ಎಂ. ನ ಸಿಟಿ ವಲಯ ಅಧ್ಯಕ್ಷರು ಮೆಲ್ಸ್‌ಟನ್ ನೊರೊನ್ಹಾ, ಬಂಟ್ವಾಲ ವಲಯ ಅಧ್ಯಕ್ಷೆ ವಿಯೊಲ್ಲಾ, ಸಚೇತಕಿ ಎವ್ಲಿನ್ ಸೆರಾವೊ, ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲಿಯಂ ಲೋಬೋ ಹಾಗೂ ಕಾರ್ಯದರ್ಶಿ ಆಸ್ಟಿನ್ ಮೊಂತೆರೋ ಉಪಸ್ಥಿತರಿದ್ದರು. ತೀರ್ಪುದಾರರಾಗಿ ಗಾಯಕಿ ಜೆನೀಶ ಡಿಸೋಜ ಹಾಗೂ ಆ್ಯಶಲ್ ಮಸ್ಕರೇಂಜಸ್ ಕಾರ್ಯ ನಿರ್ವಹಿಸಿದರು.
ವೀಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮವನ್ನು ಶಾನ್ ಡಿಸೋಜ ನಿರ್ವಹಿಸಿದರು.





