Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮದುವೆ ವಯಸ್ಸು ಮತ್ತು ಲಿಂಗ ತಾರತಮ್ಯ

ಮದುವೆ ವಯಸ್ಸು ಮತ್ತು ಲಿಂಗ ತಾರತಮ್ಯ

ವಾರ್ತಾಭಾರತಿವಾರ್ತಾಭಾರತಿ21 Dec 2021 12:05 AM IST
share
ಮದುವೆ ವಯಸ್ಸು ಮತ್ತು ಲಿಂಗ ತಾರತಮ್ಯ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು ಹದಿನೆಂಟರಿಂದ ಇಪ್ಪತ್ತೊಂದಕ್ಕೆ ಏರಿಸಲು ಒಕ್ಕೂಟ ಸರಕಾರ ತೀರ್ಮಾನಿಸಿದೆ. ಮದುವೆಯ ವಯಸ್ಸನ್ನು ಹೆಚ್ಚಿಸಿರುವ ಬಗ್ಗೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರಿಂದ ಭಾರತದ ಮಹಿಳೆಯರು ಬದುಕಿನುದ್ದಕ್ಕೂ ಅನುಭವಿಸುವ ಕಷ್ಟ ಕಾರ್ಪಣ್ಯಗಳು ಒಮ್ಮಿಂದೊಮ್ಮ್ಮೆಲೇ ನಿವಾರಣೆಯಾಗುತ್ತವೆ ಎಂದು ಹೇಳಲು ಆಗುವುದಿಲ್ಲ.

 ಮಹಿಳೆಯರು ಪ್ರತಿನಿತ್ಯವೂ ಪುರುಷ ಪ್ರಧಾನ ಸಮಾಜದ ಲಿಂಗ ತಾರತಮ್ಯದ ಕಹಿಯನ್ನು ಉಣ್ಣುತ್ತಲೇ ಇರುತ್ತಾರೆ. ವಿದ್ಯೆ, ಊಟ, ಬಟ್ಟೆ ಎಲ್ಲಕ್ಕಿಂತ ಮುಖ್ಯವಾಗಿ ಸ್ವಾತಂತ್ರ್ಯದ ಪ್ರಶ್ನೆಗಳಲ್ಲಿ ಹೆಣ್ಣುಮಕ್ಕಳು ಅನುಭವಿಸುವ ತಾರತಮ್ಯ ಅಷ್ಟಾಗಿ ಬೆಳಕಿಗೆ ಬರುವುದಿಲ್ಲ. ಮದುವೆಯ ವಯಸ್ಸನ್ನು 21ಕ್ಕೆ ಹೆಚ್ಚಿಸುವುದರಿಂದ ಬಾಲ್ಯ ವಿವಾಹಗಳು ಒಮ್ಮಿಂದೊಮ್ಮೆಲೆ ನಿಂತು ಹೋಗುತ್ತವೆ ಎಂದು ಹೇಳಲು ಆಗುವುದಿಲ್ಲ. ಅಧಿಕೃತ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿವರ್ಷ 18ನೇ ವಯಸ್ಸಿನೊಳಗಿನ 15 ಲಕ್ಷ ಹೆಣ್ಣು ಮಕ್ಕಳನ್ನು ವೈವಾಹಿಕ ಜೀವನಕ್ಕೆ ದೂಡಲಾಗುತ್ತದೆ. ಯಾವ ಕಾನೂನಿಗೂ ಈ ಬಾಲ್ಯ ವಿವಾಹವನ್ನು ತಡೆಯಲು ಸಾಧ್ಯವಾಗಿಲ್ಲ. ವಾಸ್ತವಾಂಶ ಹೀಗಿರುವಾಗ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18 ರಿಂದ 21ಕ್ಕೆ ಹೆಚ್ಚಿಸುವುದರಿಂದ ಹೆಣ್ಣು ಹೆತ್ತ ತಾಯಿ ತಂದೆ (ಹೆಣ್ಣನ್ನು ಹೊರೆ ಎಂದು ಭಾವಿಸಿದವರು) ತಮ್ಮ ಹೊರೆಯನ್ನು ಕಳಚಿಕೊಳ್ಳಲು ಕದ್ದು ಮುಚ್ಚಿ ಬಾಲ್ಯವಿವಾಹ ಮಾಡಿ ಕೈ ತೊಳೆದುಕೊಂಡರೆ ಅಚ್ಚರಿ ಪಡಬೇಕಾಗಿಲ್ಲ.

ಬಾಲ್ಯ ವಿವಾಹಕ್ಕೆ ಮುಖ್ಯ ಕಾರಣ ಬಡತನ ಮತ್ತು ಅಜ್ಞಾನ. ಮದುವೆಯ ವಯಸ್ಸನ್ನು 18 ರಿಂದ 21 ಮಾಡುವುದರಿಂದಷ್ಟೇ ಬಾಲ್ಯವಿವಾಹವನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಬಾಲ್ಯ ವಿವಾಹಗಳನ್ನು ನಿಲ್ಲಿಸಬೇಕೆಂದರೆ ವ್ಯಾಪಕವಾದ ಜನ ಜಾಗೃತಿ ಆಂದೋಲನ ನಡೆಯಬೇಕಾಗಿದೆ. ಹೆಣ್ಣು ಮಕ್ಕಳಿಗೆ ವಿದ್ಯೆ ಮತ್ತು ವೃತ್ತಿ ಜೀವನದಲ್ಲಿ ಸಮಾನಾವಕಾಶ ಒದಗಿಸುವ ಖಾತರಿ ನೀಡಿದರೆ ಬಾಲ್ಯವಿವಾಹಗಳನ್ನು ತಡೆಯಲು ಒಂದಿಷ್ಟು ನೆರವಾಗಬಹುದು.

ಆದರೆ ಈಗ ಒಕ್ಕೂಟ ಸರಕಾರದ ಸೂತ್ರ ಹಿಡಿದಿರುವ ಪಕ್ಷ ಮತ್ತು ಅದನ್ನು ನಿಯಂತ್ರಿಸುವ ಸಂಘ ಪರಿವಾರ ಮಹಿಳೆಯರ ಸಮಾನತೆಯ ಬಗ್ಗೆ ತಮ್ಮ ನಿಲುವುಗಳನ್ನು ಬದಲಿಸಿಕೊಳ್ಳಬೇಕಾಗಿದೆ. ವಿಭಿನ್ನ ಸಮುದಾಯಗಳಿಗೆ ಸೇರಿದ ಯುವಕರು ಮತ್ತು ಯುವತಿಯರು ಪರಸ್ಪರ ಮಾತಾಡಿದರೆ ಅವರ ಮೇಲೆ ನಡು ಬೀದಿಯಲ್ಲಿ ಹಲ್ಲೆ ಮಾಡುವವರು ಅಧಿಕಾರದಲ್ಲಿರುವ ಪಕ್ಷದ ಬೆಂಬಲಿಗರೆಂಬುದನ್ನು ಅಲ್ಲಗಳೆಯಲು ಆಗುವುದಿಲ್ಲ.

ಭಾರತೀಯ ಸಮಾಜ ಇನ್ನೂ ಆಧುನಿಕತೆಗೆ ತೆರೆದುಕೊಂಡಿಲ್ಲ. ಹೈಟೆಕ್ ತಂತ್ರಜ್ಞಾನದ ಸಾಧನೆಗಳ ಬಗ್ಗೆ ನಾವೆಷ್ಟೇ ಹೆಮ್ಮೆ ಪಟ್ಟು ಕೊಂಡರೂ ಮಹಿಳೆಯರನ್ನು ಎರಡನೇ ದರ್ಜೆಗೆ ಸೇರಿದವಳೆಂದು ತಾರತಮ್ಯದಿಂದ ಕಾಣುವ ಮನೋಭಾವ ಬದಲಾಗಿಲ್ಲ. ಭಾರತೀಯ ಸಮಾಜ ಹೆಣ್ಣನ್ನು ಒಂದು ಹೊರೆ ಎಂದು ಈಗಲೂ ಭಾವಿಸಿದೆ. ನಗರ ಪ್ರದೇಶದಲ್ಲಿ ಒಂದಿಷ್ಟು ಬದಲಾವಣೆಯಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಊಳಿಗ ಮಾನ್ಯ ಸಮಾಜದ ಮೌಲ್ಯಗಳು ಇಂದಿಗೂ ಜೀವಂತವಾಗಿವೆ. ಹೆಣ್ಣನ್ನು ಹೊರೆ ಎಂದು ಭಾವಿಸುವ ಕೆಲವರು ಹೆಣ್ಣು ಮಗು ಜನಿಸುವುದನ್ನು ವೈದ್ಯಕೀಯ ತಂತ್ರಜ್ಞಾನದಿಂದ ಪತ್ತೆ ಹಚ್ಚಿ ಭ್ರೂಣದಲ್ಲೇ ಹೆಣ್ಣನ್ನು ಹೊಸಕಿ ಹಾಕಲು ಯತ್ನಿಸಿದ ಹಾಗೂ ಹೊಸಕಿ ಹಾಕಿದ ಸಾವಿರಾರು ಉದಾಹರಣೆಗಳಿವೆ. ಇದರ ಪರಿಣಾಮವಾಗಿ ಒಟ್ಟು ಜನಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಾರತಮ್ಯವನ್ನು ನಿವಾರಿಸುವ ಉದ್ದೇಶದಿಂದ ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸಲು ಒಕ್ಕೂಟ ಸರಕಾರ ತೀರ್ಮಾನಿಸಿದೆ. ಆದರೆ ಮದುವೆಯ ವಯಸ್ಸನ್ನು ಏರಿಸುವುದರಿಂದ ಮಾತ್ರ ಮಹಿಳೆಯರನ್ನು ತಾರತಮ್ಯದಿಂದ ಕಾಪಾಡಲು ಸಾಧ್ಯವಿಲ್ಲ.

ಲಿಂಗ ತಾರತಮ್ಯ ಭಾರತದಲ್ಲಿ ಮಾತ್ರವಲ್ಲ ಇದೊಂದು ಜಾಗತಿಕ ಸಮಸ್ಯೆ. ಆದರೆ ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಇದು ವ್ಯಾಪಕವಾಗಿದೆ. ಭ್ರೂಣಲಿಂಗ ಪತ್ತೆ ಮಾಡುವುದನ್ನು ಸರಕಾರ ಅಪರಾಧ ಎಂದು ಪರಿಗಣಿಸಿದ್ದರೂ ಅಕ್ರಮವಾಗಿ ಇದು ನಡೆಯುತ್ತಲೇ ಇದೆ.

2019-2020ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷಾ ವರದಿಯ ಪ್ರಕಾರ ದೇಶದಲ್ಲಿ 15ರಿಂದ 45 ವಯೋಮಾನದ ಮಹಿಳೆಯರಲ್ಲಿ ಶೇಕಡಾ 57ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಪೌಷ್ಟಿಕಾಂಶವುಳ್ಳ ಆಹಾರದ ಲಭ್ಯತೆಯಿಂದ ಬಡ ಮತ್ತು ಕೆಳ ಮಧ್ಯಮ ವರ್ಗದ ಹೆಣ್ಣು ಮಕ್ಕಳು ವಂಚಿತರಾಗಿದ್ದಾರೆ.ಹೆಣ್ಣು ಮಕ್ಕಳ ಮದುವೆಯ ವಯಸ್ಸನ್ನು ಏರಿಸುವುದರಿಂದ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ.

ಸಾಮಾಜಿಕ ಜೀವನದ ಇಂತಹ ತಾರತಮ್ಯಗಳನ್ನು ಸರಕಾರ ಕಾನೂನುಗಳ ಮೂಲಕ ಮಾತ್ರ ನಿವಾರಿಸಲು ಸಾಧ್ಯವಿಲ್ಲ. ಇದಕ್ಕಾಗಿ ಜನಸಾಮಾನ್ಯರಲ್ಲಿ ಅರಿವು ಮತ್ತು ತಿಳುವಳಿಕೆ ಉಂಟು ಮಾಡಲು ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆಗಳು, ಸ್ವಯಂ ಸೇವಾ ಸಂಘಟನೆಗಳು ಹಾಗೂ ಧಾರ್ಮಿಕ ಸಂಘಟನೆಗಳು ಕೂಡ ಶ್ರಮಿಸಬೇಕಾಗಿದೆ. ಸರಕಾರದ ಕಾಯ್ದೆಗಳಿಗೆ ಪೂರಕವಾಗಿ ಸಮಾಜದಲ್ಲೂ ಅರಿವು ಮೂಡಿಸುವ ಕಾರ್ಯ ಚುರುಕಾಗಿ ನಡೆಯಬೇಕು.
ಮಹಿಳೆಯರ ಬಗ್ಗೆ ನಮ್ಮ ಸಾಮಾಜಿಕ ಜೀವನದಲ್ಲಿ ಯಾವ ರೀತಿ ತಾರತಮ್ಯ ಇದೆ ಎಂಬುದಕ್ಕೆ ಪ್ರತ್ಯಕ್ಷ ಉದಾಹರಣೆ ಮಹಿಳಾ ಮೀಸಲು ಪ್ರಶ್ನೆ. ಪಂಚಾಯತ್, ನಗರ ಪಾಲಿಕೆ ಮುಂತಾದ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ವ್ಯವಸ್ಥೆ ಇದ್ದರೂ ಲೋಕಸಭೆಯಲ್ಲಿ ಅದು ಇನ್ನೂ ಕನ್ನಡಿಯ ಗಂಟಾಗಿ ಉಳಿದಿದೆ. ಉಳಿದೆಲ್ಲ ವಿಧೇಯಕಗಳು ಸರ್ವಾನುಮತದಿಂದ ಅಂಗೀಕಾರವಾದರೂ ಮಹಿಳಾ ಮೀಸಲಾತಿ ವಿಧೇಯಕ ಪಾಸಾಗದಿರುವುದಕ್ಕೆ ರಾಜಕೀಯ ಪಕ್ಷಗಳಲ್ಲಿನ ಇಚ್ಛಾಶಕ್ತಿಯ ಕೊರತೆಯೇ ಕಾರಣ.
ಮಹಿಳಾ ಮೀಸಲು ಪ್ರಶ್ನೆಗೆ ಲಾಲೂ ಪ್ರಸಾದ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಮುಂತಾದವರು ಹಿಂದೆ ವಿರೋಧಿಸಲು ಕಾರಣ ಈ ಮೀಸಲಾತಿ ಬಳಸಿಕೊಂಡು ಮೇಲ್ಜಾತಿಯ, ಮೇಲ್ವರ್ಗದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿ ಬರುತ್ತಾರೆ. ಹಾಗಾಗಿ ಮಹಿಳಾ ಮೀಸಲಾತಿಯಲ್ಲಿ ತಳ ಸಮುದಾಯದ ಮತ್ತು ಹಿಂದುಳಿದ ಸಮುದಾಯದ ಮಹಿಳೆಯರಿಗೆ ಉಪ ಮೀಸಲಾತಿ ನೀಡಬೇಕೆಂಬುದು ಹಿಂದುಳಿದ ವರ್ಗಗಳ ನಾಯಕರ ಆಗ್ರಹವಾಗಿದೆ. ಸರಕಾರ ಇದಕ್ಕೆ ಸ್ಪಂದಿಸಿ ಉಪ ಮೀಸಲು ವ್ಯವಸ್ಥೆ ಸಹಿತ ಮಹಿಳಾ ಮೀಸಲಾತಿಯ ಅವಕಾಶ ಕಲ್ಪಿಸಬೇಕು.
ಮದುವೆಯ ವಯಸ್ಸನ್ನು ಹೆಚ್ಚಿಸುವುದರ ಜೊತೆಗೆ ಸಾಮಾಜಿಕ ಜೀವನದಲ್ಲಿ ಲಿಂಗ ತಾರತಮ್ಯವನ್ನು ನಿವಾರಿಸಲು ಆದ್ಯತೆ ನೀಡಿದರೆ ಮಹಿಳೆಯರ ಪರಿಸ್ಥಿತಿ ಸುಧಾರಿಸೀತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X