2014 ರ ಮೊದಲು 'ಲಿಂಚಿಂಗ್' ಎಂಬ ಪದವನ್ನೇ ಕೇಳಿರಲಿಲ್ಲ, 'ಧನ್ಯವಾದಗಳು ಮೋದಿಜೀ' ಎಂದ ರಾಹುಲ್ ಗಾಂಧಿ

ಹೊಸದಿಲ್ಲಿ: ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹಲ್ಲೆ ಪ್ರಕರಣಗಳ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಲಿಂಚಿಂಗ್" ಎಂಬ ಪದವು 2014 ರ ಮೊದಲು ಪ್ರಾಯೋಗಿಕವಾಗಿ ಕೇಳಿರಲಿಲ್ಲ, ಪ್ರಸ್ತುತ ಸರಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ಘಟನೆಗಳು ಹೆಚ್ಚಾಗುತ್ತಿವೆ’’ ಎಂದು #ThankYouModiJi ಜೊತೆಗಿನ ಒಂದು ಸಾಲಿನ ಟ್ವೀಟ್‌ನಲ್ಲಿ ರಾಹುಲ್ ಬರೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಆಡಳಿತವಿರುವ ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದ ಗುಂಪು ಹತ್ಯೆಯ ಘಟನೆಗಳ ನಡುವೆ ಕಾಂಗ್ರೆಸ್ ನಾಯಕನಿಂದ ಈ ಹೇಳಿಕೆಗಳು ಬಂದಿವೆ. ‘ಸಿಖ್ ಧಾರ್ಮಿಕ ಭಾವನೆಗಳನ್ನು ಅಪವಿತ್ರಗೊಳಿಸಿದ್ದಾರೆ’ ಎಂದು ಆರೋಪಿಸಿ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಇಬ್ಬರನ್ನು ಹೊಡೆದು ಕೊಂದ ನಂತರ ಹತ್ಯೆ ಪ್ರಕರಣಗಳಲ್ಲಿ ಕಠಿಣ ಶಿಕ್ಷೆಗಾಗಿ ಎರಡು ರಾಜ್ಯ ಮಸೂದೆಗಳಿಗೆ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯುವಂತೆ ರಾಜ್ಯವು ಕೇಂದ್ರವನ್ನು ಒತ್ತಾಯಿಸಿದೆ.
ಹಲವು ರಾಜ್ಯಗಳಲ್ಲಿ ಹೆಚ್ಚಾಗಿ ಉತ್ತರ ಪ್ರದೇಶ ಹಾಗೂ ಅಸ್ಸಾಂನಂತಹ ಬಿಜೆಪಿ ಆಳ್ವಿಕೆಯಲ್ಲಿ ಈ ಹಿಂದೆ ಗುಂಪು ಹತ್ಯೆಯ ಘಟನೆಗಳನ್ನು ವರದಿ ಆಗಿದ್ದವು. ಅಂತಹ ಘಟನೆಗಳನ್ನು ಪರಿಶೀಲಿಸಲು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ಸಲಹೆಯನ್ನೂ ನೀಡಿತ್ತು.
ರಾಜಸ್ಥಾನ ಹಾಗೂ ಮಣಿಪುರವು ಲಿಂಚಿಂಗ್ ಅನ್ನು ತಡೆಯಲು ಮಸೂದೆಗಳನ್ನು ಅಂಗೀಕರಿಸಿದ್ದರೆ, ಅಸ್ಸಾಂನಂತಹ ಇತರ ರಾಜ್ಯಗಳು ಅದೇ ಪ್ರಸ್ತಾಪವನ್ನು ಪರಿಗಣಿಸುತ್ತಿವೆ.
2014 से पहले ‘लिंचिंग’ शब्द सुनने में भी नहीं आता था।
— Rahul Gandhi (@RahulGandhi) December 21, 2021
Before 2014, the word ‘lynching’ was practically unheard of. #ThankYouModiJi