ಟಿಎಂಸಿ ಸಂಸದ ಡರೆಕ್ ಒ'ಬ್ರಿಯಾನ್ ಸಂಸತ್ತಿನಿಂದ ಅಮಾನತು

ಹೊಸದಿಲ್ಲಿ: ಅಶಿಸ್ತಿನಿಂದ ವರ್ತಿಸಿದ್ದಾರೆಂಬ ಕಾರಣಕ್ಕೆ ತೃಣಮೂಲ ಕಾಂಗ್ರೆಸ್ ನ ರಾಜ್ಯಸಭಾ ಸಂಸದ ಡರೆಕ್ ಒ’ಬ್ರಿಯಾನ್‌ರನ್ನು ಸಂಸತ್ತಿನ ಉಳಿದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಚುನಾವಣಾ ಸುಧಾರಣಾ ವಿಧೇಯಕ ಹಾಗೂ 12 ಸಂಸದರ ಅಮಾನತು ಕುರಿತು ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯಸಭೆಯಿಂದ ಹೊರ ನಡೆಯುತ್ತಿರುವಾಗ ತೃಣಮೂಲ ಸದಸ್ಯ ಒಬ್ರಿಯಾನ್ ನಿಯಮ ಪುಸ್ತಕವನ್ನು ಸಭಾಧ್ಯಕ್ಷರ ಮೇಲೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ಬಾರಿ ಸರಕಾರವು ಕೃಷಿ ಕಾಯ್ದೆಯನ್ನು ಜಾರಿ ಮಾಡಿದಾಗ ನನ್ನನ್ನು ರಾಜ್ಯಸಭೆಯಿಂದ ಅಮಾನತು ಮಾಡಲಾಗಿತ್ತು. ಆ ನಂತರ ಏನಾಯಿತು ಎಂದು ಎಲ್ಲರಿಗೂ ಗೊತ್ತು. ಸಂಸತ್ತನ್ನು ಅಣಕಿಸುತ್ತಿರುವ ಬಿಜೆಪಿ ಹಾಗೂ ಚುನಾವಣಾ ಕಾನೂನು ಮಸೂದೆ 2021 ವಿರುದ್ಧ ಇಂದು ಪ್ರತಿಭಟಿಸುತ್ತಿದ್ದಾಗ ನನ್ನನ್ನು ಅಮಾನತುಗೊಳಿಸಲಾಗಿದೆ ಈ ಮಸೂದೆ ಕೂಡ ಶೀಘ್ರವೇ ರದ್ದಾಗಲಿದೆ ಎಂಬ ವಿಶ್ವಾಸವಿದೆ'' ಎಂದು ತೃಣಮೂಲ ನಾಯಕ ಒ'ಬ್ರಿಯಾನ್ ಟ್ವೀಟಿಸಿದ್ದಾರೆ.
Next Story