ಬೆಂಗಳೂರು ಸಂಚಯ ತಂಡದ ‘ಕಾಮರೂಪಿಗಳ್’ಗೆ ಪ್ರಥಮ ಬಹುಮಾನ
ರಂಗಭೂಮಿ ಉಡುಪಿ 42ನೆ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ

ಉಡುಪಿ, ಡಿ.21: ಉಡುಪಿಯ ರಂಗಭೂಮಿ ಸಂಸ್ಥೆ ನಡೆಸಿದ 42ನೇ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯಲ್ಲಿ ಬೆಂಗಳೂರಿನ ಸಂಚಯ ತಂಡ ಪ್ರದರ್ಶಿಸಿದ ‘ಕಾಮರೂಪಿಗಳ್’ ಪ್ರಥಮ ಬಹುಮಾನದೊಂದಿಗೆ 35,000ರೂ.ನಗದು, ಸ್ಮರಣಿಕೆ ಹಾಗೂ ಡಾ.ಟಿ.ಎಂ..ಎ.ಪೈ ಸ್ಮಾರಕ ಪರ್ಯಾಯ ಫಲಕ ಹಾಗೂ ಎಸ್. ಎಲ್. ನಾರಾಯಣ ಭಟ್ ಸ್ಮಾರಕ ಸ್ಮರಣಿಕೆಯನ್ನು ತನ್ನದಾಗಿಸಿಕೊಂಡಿದೆ.
ಧಾರವಾಡ ಸಮುದಾಯ ತಂಡದ ‘ಬುದ್ಧ-ಪ್ರಬುದ್ಧ’ ನಾಟಕ ದ್ವಿತೀಯ ಬಹುಮಾನದೊಂದಿಗೆ 25,000ರೂ. ನಗದು, ಸ್ಮರಣಿಕೆ ಹಾಗೂ ಡಾ.ಆರ್.ಪಿ. ಕೊಪ್ಪೀಕರ್ ಸ್ಮಾರಕ ಪರ್ಯಾಯ ಫಲಕ ಮತ್ತು ಯು.ಪಿ.ಶೆಣೈ ಸ್ಮಾರಕ ಸ್ಮರಣಿಕೆಯನ್ನು ಗೆದ್ದುಕೊಂಡಿದೆ.
ತೃತೀಯ ಬಹುಮಾನವನ್ನು ಮಂಗಳೂರಿನ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ‘ದಾಟ್ಸ್ ಆಲ್ ಯುವರ್ ಆನರ್’ ನಾಟಕ ಪಡೆದುಕೊಂಡಿದ್ದು, 15,000ರೂ. ನಗದು ಬಹುಮಾನ ಹಾಗೂ ಸಖೂಬಾಯಿ ಶ್ರೀಧರ ನಾಯಕ್ ಕೊಕ್ಕರ್ಣೆ ಸ್ಮಾರಕ ಸ್ಮರಣಿಕೆಗೆ ಪಾತ್ರವಾಗಿದೆ.
ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಶನ್, ಪಿವಿಎಸ್ ಗ್ರೂಪ್ಸ್ ಮಂಗಳೂರು, ಎಂಜಿಎಂ ಕಾಲೇಜು ಉಡುಪಿ ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ 10ದಿನಗಳ ಕಾಲ ನಡೆದ ನಾಟಕ ಸ್ಪರ್ಧೆಯ ತೀರ್ಪು ಗಾರರಾಗಿ ಗುಂಡಣ್ಣ ಚಿಕ್ಕಮಗಳೂರು, ಎನ್.ಆರ್.ಬಲ್ಲಾಳ್, ಸರೋಜಾ ಹೆಗಡೆ, ಪ್ರಸನ್ನ ಹುಣಸೇಕೊಪ್ಪ, ಲಕ್ಷ್ಮಿನಾರಾಯಣ ಭಟ್ ಸಹಕರಿಸಿದ್ದರು.
ಉಳಿದಂತೆ ವೈಯಕ್ತಿಕ ಬಹುಮಾನಗಳ ವಿವರ:
ಶ್ರೇಷ್ಠ ನಿರ್ದೇಶನ: ಪ್ರಥಮ: ಗಣೇಶ್ ಮಂದಾರ್ತಿ, ನಾಟಕ: ಸಂಚಯ ಬೆಂಗಳೂರಿನ ‘ಕಾಮರೂಪಿಗಳ್’ (10,000ರೂ.ನಗದು, ಪರ್ಯಾಯ ಫಲಕ), ದ್ವಿತೀಯ: ಶಶಿರಾಜ್ ರಾವ್ ಕಾವೂರು, ನಾಟಕ ರಂಗ ಸಂಗಾತಿ ಮಂಗಳೂರು ‘ದಾಟ್ಸ್ ಆಪ್ ಯುವರ್ ಆನರ್’ (6,000ರೂ., ಸ್ಮರಣಿಕೆ), ತೃತೀಯ: ವಾಸುದೇವ ಗಂಗೇರ, ನಾಟಕ: ಸಮುದಾಯ ಧಾರವಾಡ ‘ಬುದ್ಧ -ಪ್ರಬುದ್ಧ (4,000ರೂ., ಸ್ಮರಣಿಕೆ).
ಶ್ರೇಷ್ಠ ನಟ: ಪ್ರಥಮ- ಸಂಚಯ ಬೆಂಗಳೂರು ತಂಡ ಕಾಮರೂಪಿಗಳ್ ನಾಟಕದ ರಾಮ ಪಾತ್ರಧಾರಿ ಕಿರಣ್ ಗೌಡ, ದ್ವಿತೀಯ: ರಂಗ ಸಂಗಾತಿ ಮಂಗಳೂರು ತಂಡದ ದಾಟ್ಸ್ ಆಲ್ ಯುವರ್ ಆನರ್ ನಾಟಕದ ಮದನ್ ಮೋಹನ್‌ರಾವ್ ಪಾತ್ರಧಾರಿ ಗೋಪಿನಾಥ್ ಭಟ್, ತೃತೀಯ: ಸುಮುದಾಯ ಧಾರವಾಡ ತಂಡದ ಬುದ್ಧ ಪ್ರಬುದ್ಧ ನಾಟಕದ ಅಂಗೂಲಿಮಾಲಾ ಪಾತ್ರಧಾರಿ ಈರಣ್ಣ ಐನಾಪೂರ್.
ಶ್ರೇಷ್ಠ ನಟಿ: ಪ್ರಥಮ: ಸಂಚಯ ಬೆಂಗಳೂರು ತಂಡದ ಕಾಮರೂಪಿಗಳ್ ನಾಟಕದ ಸೀತೆ ಪಾತ್ರಧಾರಿಣಿ ವೈಷ್ಣವಿ ಚಕ್ರಪಾಣಿ, ದ್ವಿತೀಯ: ಶಿವಮೊಗ್ಗ ಮಲೆನಾಡು ಕಲಾತಂಡದ ಮಾತೆ ಮಂಡೋದರಿ ನಾಟಕದ ಅನಲೆ ಪಾತ್ರಧಾರಿ ದೀಪಿಕಾ, ತೃತೀಯ: ಸಂಚಯ ಬೆಂಗಳೂರು ತಂಡದ ಕಾಮರೂಪಿಗಳ್ ನಾಟಕದ ಮಾಯಾ ಶೂರ್ಪನಖಿ ಪಾತ್ರಧಾರಿಣಿ ವಸಂತಾ ಕೃಷ್ಣಮೂರ್ತಿ.
ಶ್ರೇಷ್ಠ ಸಂಗೀತ: ಪ್ರಥಮ: ಕಾಮರೂಪಿಗಳ್, ಸಂಚಯ ಬೆಂಗಳೂರು, ದ್ವಿತೀಯ: ಬುದ್ದ _ ಪ್ರಬುದ್ಧ, ಸಮುದಾಯ ಧಾರಾವಾಡ, ತೃತೀಯ: ಸಂಕ್ರಾಂತಿ, ನಾಲ್ವಡಿ ಶೋಷಿಯಲ್ ಕಲ್ಚರಲ್ ಆಂಡ್ ಎಜುಕೇಷನಲ್ ಟ್ಟಸ್ಟ್ ಮೈಸೂರು.
ಶ್ರೇಷ್ಠ ರಂಗಸಜ್ಜಿಕೆ ಮತ್ತು ರಂಗಪರಿಕರ: ಪ್ರಥಮ: ಕಾಮರೂಪಿಗಳ್,ಸಂಚಯ ಬೆಂಗಳೂರು, ದ್ವಿತೀಯ: ದಾಟ್ಸ್ ಆಲ್ ಯುವರ್ ಆನರ್, ರಂಗ ಸಂಗಾತಿ ಮಂಗಳೂರು, ತೃತೀಯ: ಬುದ್ಧ - ಪ್ರಬುದ್ಧ, ಸಮುದಾಯ, ಧಾರವಾಡ.
ಶ್ರೇಷ್ಠ ಪ್ರಸಾಧನ: ಪ್ರಥಮ: ಕಾಮರೂಪಿಗಳ್, ಸಂಚಯ ಬೆಂಗಳೂರು, ದ್ವಿತೀಯ: ಬುದ್ಧ ಪ್ರಬುದ್ಧ, ಸಮುದಾಯ ಧಾರವಾಡ, ತೃತೀಯ: ಸಂಕ್ರಾಂತಿ, ನಾಲ್ಮಡಿ ಸೋಶಿಯಲ್ ಕಲ್ಚರಲ್ ಆಂಡ್ ಎಜ್ಯುಕೇಶನಲ್ ಟ್ರಸ್ಟ್ ಮೈಸೂರು.
ಶ್ರೇಷ್ಠ ರಂಗಬೆಳಕು : ಪ್ರಥಮ: ಕಾಮರೂಪಿಗಳ್ ಸಂಚಯ ಬೆಂಗಳೂರು, ದ್ವಿತೀಯ: ಬುದ್ಧ-ಪ್ರಬುದ್ಧ, ಸಮುದಾಯ ಧಾರಾವಾಡ, ತೃತೀಯ: ಸಂಕ್ರಾಂತಿ, ನಾಲ್ವಡಿ ಶೋಷಿಯಲ್ ಕಲ್ಚರಲ್ ಎಜುಕೇಶನಲ್ ಟ್ರಸ್ಟ ಮೈಸೂರು.
ಶ್ರೇಷ್ಠ ಹಾಸ್ಯ ನಟನೆ: ಲಾವಣ್ಯ ಬೈಂದೂರು ತಂಡದ ಶ್ರೀಕೃಷ್ಣ ಸಂಧಾನ ನಾಟಕದ ಶ್ರೀಕೃಷ್ಣ ಪಾತ್ರಧಾರಿ ನಾಗೇಂದ್ರ ಕುಮಾರ ಬಂಕೇಶ್ವರ. ಶ್ರೇಷ್ಠ ಬಾಲ ನಟನೆ: ಸಂಚಯ ಬೆಂಗಳೂರು ತಂಡದ ಕಾಮರೂಪಿಗಳ್ ನಾಟಕದ ಮಾಯಾ ಜಿಂಕೆ ಪಾತ್ರಧಾರಿ ವನಿತಾ.
ಮೆಚ್ಚುಗೆ ಬಹುಮಾನಗಳು: ಸುಮನಸಾ ಕೊಡವೂರು ತಂಡದ ವಾಹ್ ತಾಜ್ ನಾಟಕದ ಷಾಹಜಾನ್ ಪಾತ್ರಧಾರಿ ಎಂ.ಎಸ್. ಭಟ್, ಸಂಚಯ ಬೆಂಗಳೂರು ತಂಡದ ಕಾಮರೂಪಿಗಳ್ ನಾಟಕದ ಮಾಯಾ ರಾವಣ ಪಾತ್ರಧಾರಿ ಸಂದೀಪ್ ಜೈನ್, ಕಾಮರೂಪಿಗಳ್ ನಾಟಕದ ಶೂರ್ಪನಖಿ ಪಾತ್ರಧಾರಿ ಪ್ರತಿಕ್ಷಾ ರಮೇಶ್, ಶಿವಮೊಗ್ಗ ಮಲೆನಾಡು ಕಲಾವಿದರ ತಂಡದ ಮಾತೆ ಮಂಡೋದರಿ ನಾಟಕದ ಮಂಡೋದರಿ ಪಾತ್ರಧಾರಿ ಲಕ್ಷ್ಮೀ ಹಾಗೂ ಬ್ಯಾಕ್ (ಆನ್) ಸ್ಟೇಜ್ ತಂಡದ ಶ್ಮಶಾನ ಕುರುಕ್ಷೇತ್ರ ನಾಟಕದ ದುರ್ಯೋಧನ ಪಾತ್ರಧಾರಿ ಪವನ್ ರಾಜ್.
ರಂಗಭೂಮಿ ಪ್ರಶಸ್ತಿ ಪ್ರದಾನ ಸಮಾರಂಭ 2022ರ ಫೆಬ್ರವರಿ 5ರಂದು ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ. ಅಂದು ಪ್ರಥಮ ಪ್ರಶಸ್ತಿ ಪುರಸ್ಕೃತ ಸಂಚಯ ಬೆಂಗಳೂರು ತಂಡದ ಕಾಮರೂಪಿಗಳ್ ನಾಟಕದ ಮರು ಪ್ರದರ್ಶನ ಇರುವುದು ಎಂದು ರಂಗಭೂಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.










