Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕರಾವಳಿಯ ಆಕಾಶದಲ್ಲಿ ಕಂಡಿದೆ ತೇಲುವ...

ಕರಾವಳಿಯ ಆಕಾಶದಲ್ಲಿ ಕಂಡಿದೆ ತೇಲುವ ಬೆಳಕಿನ ಮಾಲೆ!

ವಾರ್ತಾಭಾರತಿವಾರ್ತಾಭಾರತಿ21 Dec 2021 8:59 PM IST
share
ಕರಾವಳಿಯ ಆಕಾಶದಲ್ಲಿ ಕಂಡಿದೆ ತೇಲುವ ಬೆಳಕಿನ ಮಾಲೆ!

ಉಡುಪಿ, ಡಿ.21:ಕಳೆದೆರಡು ದಿನಗಳಿಂದ ಸಂಜೆಯ ವೇಳೆಗೆ ಆಕಾಶ ವೀಕ್ಷಿಸುವ ಅಭ್ಯಾಸವಿರುವವರಿಗೆ ಕರಾವಳಿಯ ಹಲವು ಕಡೆಗಳಲ್ಲಿ ಆಗಸದಲ್ಲಿ ನಕ್ಷತ್ರಗಳ ಸರಮಾಲೆ ಅಥವಾ ಆಕಾಶದಲ್ಲಿ ತೇಲುವ ಬೆಳಕಿನ ಮಾಲೆಯನ್ನು ನೋಡಿ ಅಚ್ಚರಿ ಮೂಡಿರಬಹುದು. ಬಾಹ್ಯಾಕಾಶದಲ್ಲಿ ಏಕಾಏಕಿ ಬೆಳಕಿನ ಸಾಲು ಹರಿದು ಹೋಗುತ್ತಿರುವುದನ್ನು ಕಂಡು ಖಗೋಳ ವೀಕ್ಷಕರು ಒಂದು ಕ್ಷಣ ಪುಳಕೊಂಡಿರಬಹುದು.

ಇದೇನಿದು ತೇಲುವ ತಟ್ಟೆಗಳೇ... ಅನ್ಯ ಲೋಕದಿಂದ ಯಾರಾದರೂ ಬಂದಿರಬಹುದೇ... ಧೂಮಕೇತುವೇ ಅಥವಾ ಹಠಾತ್ತನೆ ಯುದ್ಧವೇನಾದರೂ ಆರಂಭಗೊಂಡಿರಬಹುದೇ ಎಂಬ ಹತ್ತಾರು ಜಿಜ್ಞಾಸೆಗಳು, ಸರಳರೇಖೆಯಲ್ಲಿ ಹಾದುಹೋದ ನೂರಾರು ಬೆಳಕಿನ ಚುಕ್ಕಿಗಳನ್ನು ನೋಡಿ ಕರಾವಳಿಯಾದ್ಯಂತ ಎಲ್ಲ ಮನದಲ್ಲಿ ಮೂಡಿರಲು ಸಾಧ್ಯವಿದೆ.

ಸೋಮವಾರ ಸಂಜೆ ಸುಮಾರು 7:25ಕ್ಕೆ ನೈರುತ್ಯ ಆಕಾಶದಿಂದ ಉತ್ತರಕ್ಕೆ ನಾಲ್ಕು ನಿಮಿಷಗಳ ಕಾಲ ಹಾರಾಟವಾಡುತ್ತಾ ತೇಲುವ ಬೆಳಕಿನ ಮಾಲೆಗಳು ಕಂಡುಬಂದವು. ಇದನ್ನು ಕುಂದಾಪುರ, ಮಲ್ಪೆ ,ಉಡುಪಿ ಮೊದಲಾದ ಪ್ರದೇಶ ಜನರು ಬರಿಗಣ್ಣಿನಿಂದ ವೀಕ್ಷಿಸಿದ್ದರು.

ಆದರೆ ಬಾಹ್ಯಾಕಾಶದಲ್ಲಿ ನಿಜವಾಗಿಯೂ ಹಾದು ಹೋಗಿರುವುದು ಏನು ಎಂಬುದನ್ನು ಖಗೋಳಶಾಸ್ತ್ರಜ್ಞರು ಇದೀಗ ಬಹಿರಂಗ ಪಡಿಸಿದ್ದಾರೆ. ಇದು ತೇಲು ಬೆಳಕಿನ ಮಾಲೆಯಲ್ಲ. ಅದೇ ರೀತಿ ಕಾಣುವ ಸುಮಾರು 60 ಕೃತಕ ಉಪಗ್ರಹಗಳ ಸಾಲು ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಖಗೋಳಶಾಸ್ತ್ರಜ್ಞ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಇದು ಅಲನ್ ಮಸ್ಕ್ ಅವರ ಹೊಸ ಸಾಹಸ. ಸ್ಪೇಸ್‌ಎಕ್ಸ್ ಕಂಪೆನಿಯ ಮೂಲಕ ಭೂಮಿಯ ಎಲ್ಲಾ ಭಾಗದವರಿಗೂ ನೆಟ್‌ವರ್ಕ್ ಸಂಪರ್ಕವನ್ನು ಕಲ್ಪಿಸಲು ಮಾಡುತ್ತಿರುವ ಹೊಸ ತಂತ್ರಜ್ಞಾನ. ಇನ್ನು ನಾಲ್ಕು ವರ್ಷಗಳಲ್ಲಿ ಆಕಾಶದಲ್ಲಿ ಸುಮಾರು 60 ಸಾವಿರ ಕೃತಕ ಉಪಗ್ರಹಗಳಿಂದ ಇಡೀ ಭೂಮಿಯ ಎಲ್ಲಾ ಸ್ಥಳಗಳಲ್ಲಿ ಸಂಪರ್ಕವನ್ನು ಹೊಂದಿಸಲು ಕೃತಕ ಉಪಗ್ರಹಗಳಿಂದ ಮಾಡುತ್ತಿರುವ ವ್ಯವಸ್ಥೆ ಸ್ಟಾರ್‌ ಲಿಂಕ್ ಸ್ಯಾಟಲೈಟ್ಸ್. ಇವುಗಳು ಕೆಳಸ್ತರದ ಕೃತಕ ಉಪಗ್ರಹಗಳು ಎಂದು ಡಾ.ಎ.ಪಿ.ಭಟ್ ವಿವರಿಸಿದ್ದಾರೆ.

ಭೂಮಿಯಿಂದ ಸುಮಾರು 550 ಕಿಮೀ ಎತ್ತರದ ಆಕಾಶದಲ್ಲಿ 60 ಕೃತಕ ಉಪಗ್ರಹಗಳ ಮಾಲೆ ಅತೀ ವೇಗವಾಗಿ ತೇಲುತ್ತಿವೆ. ಪ್ರತಿ ಉಪಗ್ರಹ ಸುಮಾರು 260 ಕೆಜಿಗಳಷ್ಟು ಭಾರವಿದ್ದು, ಒಂದು ಮೀಟರ್‌ನಷ್ಟು ದೊಡ್ಡದಿದೆ. ಈ ಕೃತಕ ಉಪಗ್ರಹಗಳು ಬರೇ ಕಣ್ಣಿಗೆ ಕಾಣುತ್ತವೆಯೇ ? ಎಂದು ಪ್ರಶ್ನಿಸಿದರೆ ಉತ್ತರ ಇಲ್ಲ ಎಂಬುದಾಗಿದೆ ಎಂದು ಅವರು ಹೇಳುತ್ತಾರೆ.

ಆದರೆ ಇವುಗಳ ಚಲನವಲನಗಳನ್ನು ಸಂಜೆ ಮತ್ತು ಬೆಳಗಿನ ಜಾವ ಗಮನಿಸಬಹುದು. ಸಂಜೆ ನಮಗೆ ಕತ್ತಲಾದರೂ 550 ಕೀಮೀ ಎತ್ತರದಲ್ಲಿರುವ ಈ ಕೃತಕ ಉಪಗ್ರಹಗಳಿಗೆ ಸೂರ್ಯನ ಬೆಳಕು ಬೀಳುತ್ತಿರುತ್ತದೆ. ಇವುಗಳಲ್ಲಿರುವ ಸೌರ ಫಲಕಗಳಿಂದ ಪ್ರತಿಫಲಿಸಿದ ಈ ಬೆಳಕು ನಮ್ಮ ಕಣ್ಣಿಗೆ ಬಿದ್ದು ಈ ಕೃತಕ ಉಪಗ್ರಹಗಳ ದರ್ಶನವಾಗುತ್ತದೆ ಎಂದು ನಿನ್ನೆ ಮತ್ತು ಇಂದು ಕರಾವಳಿಯ ಆಕಾಶದಲ್ಲಿ ಕಾಣಿಸಿಕೊಂಡ ಬೆಳಕಿನ ಮೆರವಣಿಗೆಯ ರಹಸ್ಯವನ್ನು ಅವರು ಬಹಿರಂಗ ಪಡಿಸಿದರು.

ಇವುಗಳ ಉಪಯೋಗ, ತೊಂದರೆ: ಓಪ್ಟಿಕಲ್ ಫೈಬರ್‌ನಿಂದ ಹಳ್ಳಿ ಹಳ್ಳಿಗೂ ಸಂಪರ್ಕ ಬಹು ಕಷ್ಟ. ಆದರೆ ಈ ಕೃತಕ ಉಪಗ್ರಹಗಳಿಂದ ಇದು ಅತೀ ಸುಲಭ ಎನ್ನಲಾಗುತ್ತಿದೆ. ಆದರೆ ಇವುಗಳಿಂದ ತೊಂದರೆಯೂ ಇದೆ ಎಂಬುದು ಖಗೋಳ ವೀಕ್ಷಕರ ದೂರು.

ಇವುಗಳಿಂದ ಆಕಾಶ ನಕ್ಷತ್ರ ವೀಕ್ಷಕರಿಗೆ ಹಾಗೂ ಖಗೋಳ ವಿಜ್ಞಾನಿಗಳಿಗೆ ತೊಂದರೆ ಇದೆ. ಇನ್ನು ಕೆಲ ವರ್ಷಗಳಲ್ಲಿ ಕಾಣುವ ಹತ್ತು ನಕ್ಷತ್ರಗಳಲ್ಲಿ ಒಂದು ಈ ಕೃತಕ ಉಪಗ್ರಹವಿರಬಹುದು. ಹಾಗೆಯೇ ಒಂದು ಆಕಾಶ ಕಾಯದ ಅಧ್ಯಯನ ಮಾಡುತ್ತಿರುವ ಖಗೋಳ ವಿಜ್ಞಾನಿಗೆ ಈ ಕೃತಕ ಉಪಗ್ರಹಗಳ ಬೆಳಕಿನಿಂದ ತೊಂದರೆಯಾಗಬಹುದು. ಇಂದು ಸಂಜೆ ಸಹ ಆಕಾಶದಲ್ಲಿ ಬೆಳಕಿನ ಮೆರವಣಿಗೆ ಕಾಣಿಸಿಕೊಂಡಿದ್ದರೂ, ನಿನ್ನೆಯಷ್ಟು ಚಂದವಿರಲಿಲ್ಲ. ಅದೇ ರೀತಿ ಡಿ.24ರಂದು ಸಂಜೆ 7:23ಕ್ಕೆ ಉತ್ತರ ಆಕಾಶದಲ್ಲಿ ಕೆಲ ನಿಮಿಷಗಳ ಕಾಲ ಈ ಬೆಳಕಿನ ಮಾಲೆ ಮತ್ತೆ ಕಾಣಿಸಿಕೊಳ್ಳಬಹುದು ಎಂದು ಡಾ.ಭಟ್ ತಿಳಿಸಿದರು.

ಖಗೋಳಾಸಕ್ತರ ಚಿಂತೆ: ಈವರೆಗೆ ಸುಮಾರು 11,670ರಷ್ಟು ಕೃತಕ ಉಪಗ್ರಹಗಳನ್ನು ಹಾರಿಸಿಯಾಗಿದೆ. ಇವೆಲ್ಲವೂ ಸುಮಾರು 200 ಕಿಮೀ ಎತ್ತರ ದಿಂದ 36 ಸಾವಿರ ಕಿಮೀ ಎತ್ತರದಲ್ಲಿ ಭೂಮಿ ಸುತ್ತ ತಿರುಗುತ್ತಿವೆ. ಇವುಗಳಲ್ಲಿ ಈಗ 4,300 ಸಕ್ರಿಯವಾಗಿ ಕೆಲಸಮಾಡುತ್ತಿವೆ. ಆದರೆ ಇನ್ನು ನಾಲ್ಕು ವರ್ಷಗಳಲ್ಲಿ ಇವುಗಳ ಜೊತೆ ಈ ಹೊಸ ಯೋಜನೆಯ 60 ಸಾವಿರ ಕೃತಕ ಉಪಗ್ರಹಗಳು ಅದೇನು ಹೊಸ ಆಕಾಶವನ್ನು ಸೃಷ್ಟಿಸುವವೋ ಎನ್ನುವುದು ಖಗೋಳಾಸಕ್ತರ ಚಿಂತೆಯಾಗಿದೆ ಎಂದು ಡಾ.ಎ.ಪಿ.ಭಟ್ ಕಳವಳ ವ್ಯಕ್ತಪಡಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X