ಗುಂಪು ಹತ್ಯೆ,ದ್ವೇಷದ ಅಪರಾಧದ ಕುರಿತು ಎನ್ಸಿಆರ್ಬಿಯಿಂದ ಮಾಹಿತಿ ಸಂಗ್ರಹ ಸ್ಥಗಿತ:ಕೇಂದ್ರ ಸರಕಾರ
"'ರಾಷ್ಟ್ರ ವಿರೋಧಿ' ಎಂಬ ಪದವನ್ನು ಕಾನೂನಿನಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ"

ಸಾಂದರ್ಭಿಕ ಚಿತ್ರ Photo: ANI
ಹೊಸದಿಲ್ಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) 2017 ರಲ್ಲಿ ಗುಂಪು ಹತ್ಯೆ ಹಾಗೂ ದ್ವೇಷದ ಅಪರಾಧದ ಪ್ರಕರಣಗಳ ಮಾಹಿತಿಯನ್ನು ಸಂಗ್ರಹಿಸಿತ್ತು. ಆದರೆ ಡೇಟಾ 'ವಿಶ್ವಾಸಾರ್ಹವಲ್ಲ'ಎಂದು ಅದನ್ನು ಸ್ಥಗಿತಗೊಳಿಸಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಮಂಗಳವಾರ ಲೋಕಸಭೆಗೆ ತಿಳಿಸಿದೆ.
'ರಾಷ್ಟ್ರ ವಿರೋಧಿ'ಎಂಬ ಪದವನ್ನು ಕಾನೂನಿನಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ ಎಂದು ಎಂಎಚ್ಎ ಸಂಸತ್ತಿಗೆ ತಿಳಿಸಿದೆ.
ಎನ್ಸಿಆರ್ಬಿ ತನ್ನ 2017 ರ ವರದಿಯಿಂದ ದ್ವೇಷದ ಅಪರಾಧಗಳು, ನಕಲಿ ಗೋ ರಕ್ಷಕರು ಹಾಗೂ ಗುಂಪು ಹತ್ಯೆಯ ಡೇಟಾವನ್ನು ಏಕೆ ಕೈಬಿಟ್ಟಿದೆ ಎಂದು ಕೇಳಿದಾಗ ಲಿಖಿತ ಉತ್ತರ ನೀಡಿದ ರಾಜ್ಯ ಸಚಿವ (ಗೃಹ) ನಿತ್ಯಾನಂದ ರಾಯ್ ಅವರು “2017 ರಲ್ಲಿ ಗುಂಪು ಹತ್ಯೆ, ದ್ವೇಷದ ಅಪರಾಧಗಳು ಇತ್ಯಾದಿ ಪ್ರಕರಣಗಳ ಡೇಟಾವನ್ನು ಎನ್ಸಿಆರ್ಬಿ ಸಂಗ್ರಹಿಸಿದೆ. ಈ ಡೇಟಾ ವಿಶ್ವಾಸಾರ್ಹವಲ್ಲ ಎಂದು ಗಮನಿಸಲಾಗಿದೆ. ಆದ್ದರಿಂದ, ಈ ನಿಟ್ಟಿನಲ್ಲಿ ಡೇಟಾ ಸಂಗ್ರಹಣೆಯನ್ನು ನಿಲ್ಲಿಸಲಾಗಿದೆ ಎಂದರು.
Next Story