ಕರಾಚಿ: ಹಿಂದು ದೇವಸ್ಥಾನದ ವಿಗ್ರಹಕ್ಕೆ ಹಾನಿ

photo:screengrab twitter/@mssirsa
ಇಸ್ಲಮಾಬಾದ್, ಡಿ.21: ಪಾಕಿಸ್ತಾನದ ಕರಾಚಿಯಲ್ಲಿರುವ ಹಿಂದು ದೇವಸ್ಥಾನ ನಾರಾಯಣ ಮಂದಿರದ ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿದ ಘಟನೆ ಮಂಗಳವಾರ ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಮುಹಮ್ಮದ್ ವಲೀದ್ ಶಬ್ಬೀರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಶಬ್ಬೀರ್ ಸುತ್ತಿಗೆಯಿಂದ ದೇವರ ವಿಗ್ರಹವನ್ನು ಧ್ವಂಸ ಮಾಡುತಿದ್ದಾಗ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದವರು ಶಬ್ಬೀರ್ನನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
Next Story





