Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತೀಯ ಚುನಾವಣಾ ಆಯೋಗದ...

ಭಾರತೀಯ ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಕಾಪಾಡಿ

ರಾಷ್ಟ್ರಪತಿಗೊಂದು ಬಹಿರಂಗ ಪತ್ರ

ಇ.ಎ.ಎಸ್. ಸರ್ಮಾಇ.ಎ.ಎಸ್. ಸರ್ಮಾ22 Dec 2021 12:12 PM IST
share
ಭಾರತೀಯ ಚುನಾವಣಾ ಆಯೋಗದ ಸ್ವಾತಂತ್ರ್ಯವನ್ನು ಕಾಪಾಡಿ

ಸಂವಿಧಾನ ಹಾಗೂ ಕಾನೂನನ್ನು ಸಂರಕ್ಷಿಸುವ ಹಾಗೂ ಜನರ ಯೋಗಕ್ಷೇಮವನ್ನು ಕಾಪಾಡುವುದಕ್ಕಾಗಿ, ದೇಶದಲ್ಲಿ ಅತ್ಯುನ್ನತವಾದ ನಿಮ್ಮ ಕಾರ್ಯಾಲಯದ ಆದೇಶದ ಮೂಲಕ ರಾಜಕೀಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಭಾರತೀಯ ಚುನಾವಣಾ ಆಯೋಗವು ತಮ್ಮ ಅಧಿಕಾರದ ವ್ಯಾಪ್ತಿಯನ್ನು ವಿಭಜಿಸುವ ಲಕ್ಷ್ಮಣ ರೇಖೆಯನ್ನು ದಾಟದಂತೆ ಸಲಹೆ ನೀಡಬೇಕಾಗಿದೆ.

ಗೌರವಾನ್ವಿತ ರಾಷ್ಟ್ರಪತೀಜಿ,

  (ಇಸಿಐ) 2021ರ ಡಿಸೆಂಬರ್ 16ರಂದು ಪ್ರಧಾನಿಯವರ ಕಾರ್ಯಾಲಯ (ಪಿಎಂಒ)ದ ಅಧಿಕಾರಿಯೊಬ್ಬರು ಭಾರತೀಯ ಚುನಾವಣಾ ಆಯೋಗದೊಂದಿಗೆ ನಡೆಸಿದ ಸಭೆಯನ್ನು ನಾನಿಲ್ಲಿ ಪ್ರಸ್ತಾವಿಸುತ್ತಿದ್ದೇನೆ. ಕೇಂದ್ರ ಸಂಪುಟವು ಈಗಾಗಲೇ ಅನುಮೋದನೆ ನೀಡಿದ್ದ ಚುನಾವಣಾ ಸುಧಾರಣೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಈ ಸಭೆಯನ್ನು ಆಯೋಜಿಸಲಾಗಿತ್ತು.

ಶೀಘ್ರದಲ್ಲೇ ಕೆಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗಾಗಿ ಪ್ರಚಾರ ಕಾರ್ಯದಲ್ಲಿ ರಾಜಕೀಯ ಪಕ್ಷಗಳು ಸಕ್ರಿಯವಾಗಿ ತೊಡಗಿರುವಾಗಲೇ ಮತ್ತು ಖುದ್ದಾಗಿ ಪ್ರಧಾನಿಯವರೇ ಪ್ರಚಾರದಲ್ಲಿ ಪಾಲ್ಗೊಂಡಿರುವ ಸಂದರ್ಭದಲ್ಲಿ ಭಾರತೀಯ ಚುನಾವಣಾ ಆಯೋಗವು ಕರೆದಿದ್ದ ಈ ಸಭೆಯ ಉದ್ದೇಶದ ಬಗ್ಗೆ ಆತಂಕಗಳುಂಟಾಗಿವೆ.

ಭಾರತೀಯ ಚುನಾವಣಾ ಆಯೋಗವು ಸ್ವತಂತ್ರವಾದ ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಇಂತಹ ಸಭೆಯನ್ನು ನಡೆಸಲು ಕಾರ್ಯನಿರ್ವಹಣಾಧಿಕಾರಿಯು ಚುನಾವಣಾ ಆಯುಕ್ತರಿಗೆ ಸೂಚನೆ ನೀಡಿರುವುದು ತೀರಾ ಅಸಹಜವಾದುದಾಗಿದೆ.

1949ರ ನವೆಂಬರ್ 25ರಂದು ಸಂವಿಧಾನ ರಚನಾ ಅಸೆಂಬ್ಲಿಯಲ್ಲಿ ಸಂವಿಧಾನದ ಕರಡನ್ನು ಮಂಡಿಸಿದ ಸಂದರ್ಭ ಡಾ.ಬಿ.ಆರ್.ಅಂಬೇಡ್ಕರ್ ಅವರು ಸರಕಾರದ ಕಾರ್ಯನಿರ್ವಹಣಾಧಿಕಾರಗಳು ಸಾಂವಿಧಾನಿಕ ಸಂಸ್ಥೆಗಳನ್ನು ಬುಡಮೇಲುಗೊಳಿಸುವ ಸಾಧ್ಯತೆಯ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು. ನಮ್ಮ ಪ್ರಜಾಪ್ರಭುತ್ವವನ್ನು ಸಂರಕ್ಷಿಸುವುದಕ್ಕಾಗಿ ಅಂತಹ ಯಾವುದೇ ಪ್ರಯತ್ನವನ್ನು ವಿಫಲಗೊಳಿಸುವ ಅಗತ್ಯವಿದೆಯೆಂದು ಅವರು ಪ್ರತಿಪಾದಿಸಿದ್ದರು.

1949ರ ಜೂನ್ 15 ಹಾಗೂ 16ರಂದು ಸಂವಿಧಾನರಚನಾ ಅಸೆಂಬ್ಲಿಯು ಚುನಾವಣಾ ಆಯೋಗದ ಪಾತ್ರ ಹಾಗೂ ಅದನ್ನು ಸರಕಾರದ ಕಾರ್ಯನಿರ್ವಹಣಾಧಿಕಾರಿಯ ವ್ಯಾಪ್ತಿಯಿಂದ ಹೊರಗಿಡುವ ಅವಶ್ಯಕತೆಯನ್ನು ಈ ಕೆಳಗಿನ ಪದಗಳಲ್ಲಿ ವಿವರಿಸಿದ್ದರು.

‘‘ಮೂಲಭೂತ ಪ್ರಶ್ನೆಯು ಚುನಾವಣಾ ಯಂತ್ರವು ಸರಕಾರದ ಕಾರ್ಯಾಂಗದ ನಿಯಂತ್ರಣದಿಂದ ಹೊರಗಿಡುವುದಕ್ಕೆ ಸಂಬಂಧಿಸಿದ್ದಾಗಿರುವುದರಿಂದ, ಅದರಲ್ಲಿ ಯಾವುದೇ ವಿವಾದವಿಲ್ಲ. ಸಂವಿಧಾನದ 289ನೇ ವಿಧಿ (ಈಗ 324ನೇ ವಿಧಿ ಆಗಿದೆ)ಯು ಸಂವಿಧಾನ ರಚನಾ ಅಸೆಂಬ್ಲಿಯ ನಿರ್ಧಾರದ ಒಂದು ಭಾಗವನ್ನು ಜಾರಿಗೊಳಿಸಲಿದೆ. ಅದು ಲೋಕಸಭೆ ಹಾಗೂ ರಾಜ್ಯಗಳ ವಿಧಾನಮಂಡಲಗಳ ಎಲ್ಲಾ ಚುನಾವಣೆಗಳನ್ನು ಹಾಗೂ ಮತದಾರ ಪಟ್ಟಿ ತಯಾರಿಯ ಮೇಲ್ವಿಚಾರಣೆ, ನಿರ್ದೇಶನ ಹಾಗೂ ಸಿದ್ಧತೆಯನ್ನು ಕಾರ್ಯಾಂಗದ ವ್ಯಾಪ್ತಿಯ ಹೊರಗಿರುವ ಚುನಾವಣಾ ಆಯೋಗಕ್ಕೆ ವಹಿಸಲಾಗುತ್ತದೆ. ಚುನಾವಣಾ ಆಯೋಗದ ಸದಸ್ಯರನ್ನು ಅಧಿಕಾರದಿಂದ ಕೈಬಿಡುವ ಸಾಧ್ಯತೆಯಿರುವುದರಿಂದ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸರಿಸಮಾನವಾದ ಸ್ಥಾನಮಾನ ನೀಡಲಾಗಿದೆ’’ .

ಸಂವಿಧಾನದ 324ನೇ ವಿಧಿಯ ಆಶಯಕ್ಕನುಗುಣವಾಗಿ ಸ್ಥಾಪನೆಯಾದ ಚುನಾವಣಾ ಆಯೋಗವು ಚುನಾವಣೆಗಳನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಗುರುತರವಾದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ.

ಚುನಾವಣಾ ಆಯೋಗವು ಸ್ವತಂತ್ರವಾದ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಬೇಕಾಗಿದೆ ಮಾತ್ರವಲ್ಲದೆ ಅದು ರಾಜಕೀಯೇತರ ನಡವಳಿಕೆಯನ್ನು ಹೊಂದಿರಬೇಕು ಎಂಬ ಉದ್ದೇಶವನ್ನು ಸಂವಿಧಾನದ 324ನೇ ವಿಧಿಯು ಹೊಂದಿದೆ. ಪ್ರಜಾಪ್ರಭುತ್ವದಲ್ಲಿ ಕೆಲಸದಂತೆ ಗ್ರಹಿಕೆಯು ಕೂಡಾ ಪ್ರಮುಖವಾದುದಾಗಿದೆ. ಚುನಾವಣೆಗಳನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಹೊಂದಿರುವ ಭಾರತೀಯ ಚುನಾವಣಾ ಆಯೋಗವು ಸಾರ್ವಜನಿಕರ ಹಾಗೂ ರಾಜಕೀಯ ಪಕ್ಷಗಳು ಇವೆರಡರ ವಿಶ್ವಾಸವನ್ನು ಗಳಿಸಬೇಕಾಗಿದೆ. ಈ ವಿಷಯದಲ್ಲಿ ಆಡಳಿತಾರೂಢ ರಾಜಕೀಯ ಪಕ್ಷದ ಲಕ್ಷ್ಮಣ ರೇಖೆಯನ್ನು ದಾಟಬಾರದೆಂಬುದು ಅಲಿಖಿತವಾದ ಒಡಂಬಡಿಕೆಯಾಗಿದೆ. ಪ್ರಧಾನಿ ಕಾರ್ಯಾಲಯವು ರಾಜಕೀಯ ಕಾರ್ಯಾಂಗವನ್ನು ಪ್ರತಿನಿಧಿಸುವುದರಿಂದ ಅದು ಮಾತುಕತೆಗಾಗಿ ಭಾರತೀಯ ಚುನಾವಣಾ ಆಯೋಗವನ್ನು ಆಹ್ವಾನಿಸುವ ಅಸಾಧಾರಣವಾದ ಹೆಜ್ಜೆಯನ್ನಿಡುವ ಮೂಲಕ ಲಕ್ಷ್ಮಣ ರೇಖೆಯನ್ನು ದಾಟಿದಂತಾಗಿದೆ.

ಇತ್ತೀಚೆಗೆ ಅಂದರೆ ಮೇ 6,2021ರಂದು ಗೌರವಾನ್ವಿತ ಸುಪ್ರೀಂ ಕೋರ್ಟ್ 2021ರಲ್ಲಿ ಸಿವಿಲ್ ಅಪೀಲು ಸಂಖ್ಯೆ 1767ಕ್ಕೆ ನೀಡಿದ ಆದೇಶದಲ್ಲಿ ‘‘ಚುನಾವಣಾ ಪ್ರಜಾತಂತ್ರದ ಪಾವಿತ್ರವನ್ನು ಖಾತರಿಪಡಿಸುವ ಮಹತ್ವದ ಹೊರೆಯನ್ನು ಹೆಗಲಿಗೇರಿಸಿಕೊಂಡಂತಹ ಸ್ವತಂತ್ರವಾದ ಸಾಂವಿಧಾನಿಕ ಘಟಕವಾಗಿ ನಡೆದುಕೊಂಡು ಬಂದಿರುವ ದಾಖಲೆಯನ್ನು ಚುನಾವಣಾ ಆಯೋಗವು ಹೊಂದಿದೆ’’ ಎಂದು ತಿಳಿಸಿತ್ತು. ಚುನಾವಣಾ ಆಯೋಗದ ಸ್ಥಾನಕ್ಕಿರುವ ಪಾವಿತ್ರತೆಗೆ ಯಾವುದೇ ಸಂದರ್ಭದಲ್ಲಿ ಭಂಗವುಂಟಾಗುವುದಕ್ಕೆ ಆಸ್ಪದ ನೀಡಬಾರದು.

ಭಾರತೀಯ ಚುನಾವಣಾ ಆಯೋಗವನ್ನು ಮಾತುಕತೆಗೆ ಕರೆಯಲು ಪ್ರಧಾನಿ ಕಾರ್ಯಾಲಯವು ತೋರಿಕೆಗೆ ತಥಾಕಥಿತ ಚುನಾವಣಾ ಸುಧಾರಣೆಯ ಕಾರಣವನ್ನು ನೀಡಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವವರು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ಸಂಸ್ಥೆಗಳಿಂದ ದೇಣಿಗೆ ನೀಡಿಕೆಯ ಮಿತಿಯಲ್ಲಿ ಸಡಿಲಿಕೆಯನ್ನು ಮಾಡಲು ಕಂಪೆನಿಗಳ ಕಾಯ್ದೆಗೆ ಅವಸರವಸರವಾಗಿ ತಿದ್ದುಪಡಿಗಳನ್ನು ತಂದಿದ್ದಾರೆ. 1976 ಮತ್ತು 2010ರ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ತಿದ್ದುಪಡಿ ಮಾಡಿ, 2016 ಮತ್ತು 2017ರ ಹಣಕಾಸು ಕಾಯ್ದೆಗಳ ಅಸಹಜ ದಾರಿಯ ಮೂಲಕ ವಿದೇಶಿ ದೇಣಿಗೆಗಳ ಪ್ರವಾಹದ ತಡೆಗೋಡೆಯನ್ನೇ ತೆರೆದಿಟ್ಟಿತ್ತು. ಆ ಸಮಯದಲ್ಲಿ ಭಾರತೀಯ ಚುನಾವಣಾ ಆಯೋಗವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಬಗ್ಗೆ ಸೂಕ್ತವಾದುದು ಅಥವಾ ಅಗತ್ಯವೆಂದು ಕೇಂದ್ರ ಸರಕಾರಕ್ಕೆ ಯೋಚಿಸಲೇ ಇಲ್ಲ. ಅಂತಹ ದೂರಗಾಮಿ ಪರಿಣಾಮವನ್ನು ಬೀರುವ, ಆದರೆ ಪ್ರತಿಗಾಮಿತನದ ಶಾಸನಾತ್ಮಕ ಕ್ರಮಗಳಿಂದಾಗಿ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳ ನೀಡಿಕೆಯಲ್ಲಿ ಅಪಾರದರ್ಶಕತೆಯುಂಟಾಗುವುದಕ್ಕೆ ಕಾರಣವಾಗಿದೆ.

ಮೇಲೆ ಉಲ್ಲೇಖಿಸಿರುವ ಅಂಬೇಡ್ಕರ್ ಅವರ ಕಳವಳದ ಮಾತುಗಳನ್ನು ಸ್ಮರಿಸಿಕೊಳ್ಳುವಾಗ ‘‘ಸಂವಿಧಾನ ಹಾಗೂ ಕಾನೂನನ್ನು ಸಂರಕ್ಷಿಸುವ ಹಾಗೂ ಜನರ ಯೋಗಕ್ಷೇಮವನ್ನು ಕಾಪಾಡುವುದಕ್ಕಾಗಿ, ದೇಶದಲ್ಲಿ ಅತ್ಯುನ್ನತವಾದ ನಿಮ್ಮ ಕಾರ್ಯಾಲಯದ ಆದೇಶದ ಮೂಲಕ ರಾಜಕೀಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಭಾರತೀಯ ಚುನಾವಣಾ ಆಯೋಗವು ತಮ್ಮ ಅಧಿಕಾರದ ವ್ಯಾಪ್ತಿಯನ್ನು ವಿಭಜಿಸುವ ಲಕ್ಷ್ಮಣ ರೇಖೆಯನ್ನು ದಾಟದಂತೆ ಸಲಹೆ ನೀಡಬೇಕಾಗಿದೆ.

ಭಾರತೀಯ ಚುನಾವಣಾ ಆಯೋಗದ ಮೇಲೆ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸುವಲ್ಲಿ ಹಾಗೂ ಸಂವಿಧಾನದಲ್ಲಿ ಪ್ರತಿಷ್ಠಾಪಿತವಾಗಿರುವ ಪ್ರಜಾತಾಂತ್ರಿಕ ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ಇಂತಹ ಸಲಹೆಯು ನಿಸ್ಸಂದೇಹವಾಗಿ ತುಂಬಾ ದೂರದವರೆಗೆ ಸಾಗಲಿದೆ.

share
ಇ.ಎ.ಎಸ್. ಸರ್ಮಾ
ಇ.ಎ.ಎಸ್. ಸರ್ಮಾ
Next Story
X