ಕೃಷ್ಣಾಪುರ ಪರ್ಯಾಯಕ್ಕೆ ಚಪ್ಪರ ಮುಹೂರ್ತ

ಉಡುಪಿ, ಡಿ.22: ಶ್ರೀಕೃಷ್ಣ ಮಠದಲ್ಲಿ ಜನವರಿ 18ರಂದು ನಡೆಯಲಿರುವ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವಕ್ಕೆ ಚಪ್ಪರ ಮುಹೂರ್ತವು ಇಂದು ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಯಿತು.
ಶ್ರೀಮಠದ ಪುರೋಹಿತರಾದ ವೇ.ಮೂ.ಶ್ರೀನಿವಾಸ ಉಪಾಧ್ಯಾಯರು ಧಾರ್ಮಿಕ ಕಾರ್ಯಕ್ರಮವನ್ನು ನೆರವೇರಿಸಿದರು. ಕೆನರಾ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ರಾಮ ನಾಯ್ಕ್ ಇವರು ಚಪ್ಪರದ ಕಂಬ ನೆಡುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪರ್ಯಾಯೋತ್ಸವ ಸಮಿತಿ ಅಧ್ಯಕ್ಷ ಕೆ. ಸೂರ್ಯ ನಾರಾಯಣ ಉಪಾಧ್ಯಾಯ, ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್, ಪಿಆರ್‌ಓ ಬಿ.ವಿ.ಲಕ್ಷ್ಮೀನಾರಾಯಣ, ಹೊರೆ ಕಾಣಿಕೆ ಸಮಿತಿ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ, ಪರ್ಯಾಯ ಸಮಿತಿಯ ಯು.ರಾಘವೇಂದ್ರ ರಾವ್, ರಾಮಚಂದ್ರ ಉಪಾಧ್ಯಾಯ, ಭಾಸ್ಕರ ರಾವ್ ಕಿದಿಯೂರು, ಪ್ರವೀಣ ಉಪಾಧ್ಯಾಯ, ರಮಾಕಾಂತ ಭಟ್, ಮಾರ್ಪಳ್ಳಿ ಸುಬ್ರಹ್ಮಣ್ಯ ಉಪಾಧ್ಯಾಯ, ಮಠದ ಸೀತಾರಾಮ ಭಟ್, ಕೊಟ್ಟಾರಿಗಳಾದ ರಾಘವೇಂದ್ರ ರಾವ್, ವೆಂಕಟರಮಣ ಹೆಗಡೆ ಹಾಗೂ ರವಿರಾಜ್ ಅಲೆವೂರು ಉಪಸ್ಥಿತರಿದ್ದರು.
Next Story







