ಶಿಕ್ಷಕರ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನಾಧ್ಯಕ್ಷರಾಗಿ ಸುರೇಶ್ ಮರಕಾಲ ಆಯ್ಕೆ

ಸುರೇಶ್ ಮರಕಾಲ
ಕೋಟ, ಡಿ.22: ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಠಾನ, ಕೋಟತಟ್ಟು ಗ್ರಾಪಂ, ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನಡೆಯುವ ಉಡುಪಿ ಜಿಲ್ಲೆಯ ಶಿಕ್ಷಕರ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ‘ನಾವಿಕ’ ಇದರ ಸಮ್ಮೇಳನಾಧ್ಯ ರಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಸುರೇಶ್ ಮರಕಾಲ ಸಾಬ್ರಕಟ್ಟೆ ಆಯ್ಕೆ ಯಾಗಿದ್ದಾರೆ.
ಶಿಕ್ಷಣದ ಜೊತೆಗೆ ಮಕ್ಕಳಿಗೆ ಮಕ್ಕಳ ಬೌದ್ಧಿಕ ವಿಕಸನಕ್ಕೆ ಸಹಕಾರವಾಗಬಲ್ಲ ಶಾಡೋಪ್ಲೇ ಕನ್ನಡಿ ಬರಹ, ಪಿಯಾನೋ ಕೀಬೋರ್ಡ್ ಕಲಿಕೆ ನಾಟಕಾ ಭಿನಯ, ಥರ್ಮೋಫೋಮ್, ಪೇಪರ್ ಕ್ರಾಪ್ಟ್ ಕಾರ್ಯಾಗಾರ, ತೋಟ ಗಾರಿಕ ಶಿಕ್ಷಣ, ಪ್ಲಮ್, ಬಿಂಗ್ ಶಿಕ್ಷಣ, ಚಿತ್ರಕಲೆ, ಗೋಡೆ ಪೇಂಟಿಂಗ್, ಸಂಗೀತ ಇಂತಹ ಹಲವಾರು ವಿಷೆಯಗಳನ್ನು ಮಕ್ಕಳಿಗಾಗಿ ಪ್ರಸ್ತುತ ಪಡಿಸಿದ್ದಾರೆ.

ಕೋಟದ ಕಾರಂತ್ ಥೀಮ್ ಪಾರ್ಕ್ನಲ್ಲಿ ಡಿ.31ರಂದು ಶಿಕ್ಷಕರ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದ್ದು ಜಿಲ್ಲೆಯ ವಿವಿಧ ಶಿಕ್ಷಕರಿಂದ ಬಹುವಿಧ ಗೋಷ್ಠಿ, ದಿಕ್ಸೂಚಿ, ಭಾಷಣ, ಭಾವಗಾನ, ಗೌರವ ಸಮರ್ಪಣೆ ಜರಗಲಿದೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿಕುಂದರ್, ಕೋಟ ತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.