ಕಾರಿನಲ್ಲಿ ಅಕ್ರಮ ಜಾನುವಾರು ಸಾಗಾಟ
ಬೈಂದೂರು, ಡಿ.22: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಜಾನುವಾರುಗಳನ್ನು ಬೈಂದೂರು ಪೊಲೀಸರು ಫೆ.21ರಂದು ಬೆಳಗಿನವ ಜಾವ ಯಡ್ತರೆ ಜಂಕ್ಷನ್ ಬಳಿ ರಕ್ಷಿಸಿದ್ದಾರೆ.
ಕಿರಿಮಂಜೇಶ್ವರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಕಾರನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದು, ಆದರೆ ಕಾರು, ಸ್ವಲ್ಪ ಹಿಂದೆಯೇ ನಿಂತಿತ್ತು. ಬಳಿಕ ಅದರಲ್ಲಿದ್ದವರು ಕತ್ತಲೆಯಲ್ಲಿ ಓಡಿಹೋದರೆನ್ನಲಾಗಿದೆ. ಕಾರನ್ನು ಪರಿಶೀಲಿಸಿದಾಗ 2 ಜಾನುವಾರುಗಳು ಕಂಡುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story