ಅಮಾಸೆಬೈಲು; ಮಟನ್ ಬಿರಿಯಾನಿ ನೀಡಿದ್ದಕ್ಕಾಗಿ ಹೊಟೇಲ್ ಮಾಲಕನಿಗೆ ಹಲ್ಲೆ: ದೂರು

ಸಾಂದರ್ಭಿಕ ಚಿತ್ರ
ಅಮಾಸೆಬೈಲು, ಡಿ.22: ಮಟನ್ ಬಿರಿಯಾನಿ ನೀಡಿದ್ದಕ್ಕಾಗಿ ಹೊಟೇಲ್ ಮಾಲಕರೊಬ್ಬರಿಗೆ ಹಲ್ಲೆ ನಡೆಸಿರುವ ಘಟನೆ ಡಿ.21ರಂದು ರಾತ್ರಿ 10ಗಂಟೆಗೆ ಹೊಸಂಗಡಿ ಪೇಟೆಯಲ್ಲಿ ನಡೆದಿದೆ.
ಲಕ್ಷ್ಮೀ ಕೃಪಾ ಹೋಟೆಲ್ ಗೆ ಸಾಧಿಕ್, ಸುನೀಲ್ ಮತ್ತು ಸತೀಶ ಎಂಬವವರು ಊಟಕ್ಕೆ ಹೋಗಿ ಮಟನ್ ಬಿರಿಯಾನಿ ಕೇಳಿದ್ದು, ಹೊಟೇಲ್ ಮಾಲಕ ಶಂಭು ಶೆಟ್ಟಿ (51) ಮಟನ್ ಬಿರಿಯಾನಿ ಇಲ್ಲ ಬೇರೆ ಏನು ಬೇಕು ಎಂದು ಕೇಳಿದರು. ಇದಕ್ಕೆ ಕೋಪಗೊಂಡ ಆರೋಪಿಗಳು, ಅವಾಚ್ಯ ಶಬ್ದಗಳಿಂದ ಬೈದು ಶಂಭು ಶೆಟ್ಟಿಗೆ ಕೈಯಿಂದ ಮತ್ತು ಬಾಟಲಿಯಿಂದ ಹಲ್ಲೆ ಮಾಡಿರುವುದಾಗಿ ದೂರ ಲಾಗಿದೆ.
ಗಲಾಟೆ ತಡೆಯಲು ಬಂದ ಶಂಭು ಶೆಟ್ಟಿ ಅವರ ಹೆಂಡತಿಗೂ ಕೈಯಿಂದ ಹೊಡೆದು ನೋವುಂಟು ಮಾಡಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





