ಬೆಂಗಳೂರು: 5 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ; ಇಬ್ಬರ ಬಂಧನ

ಬೆಂಗಳೂರು, ಡಿ.22: ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಇಬ್ಬರು ಅಂತರ್‍ರಾಜ್ಯ ಡ್ರಗ್ಸ್ ಪೆಡ್ಲರ್ಸ್‍ಗಳನ್ನು ಮೈಕೋಲೇಔಟ್ ಠಾಣೆ ಪೊಲೀಸರು ಬಂಧಿಸಿ 5 ಕೋಟಿ ರೂ. ಮೌಲ್ಯದ 5 ಕೆಜಿ ಹ್ಯಾಶಿಷ್ ಆಯಿಲ್ ಮತ್ತು ಒಂದು ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಆಂಧ್ರಪ್ರದೇಶದ ಪ್ರಕಾಶ್ ಮತ್ತು ದಾರಾಸ್ವಾಮಿ ಎಂದು ಗುರುತಿಸಲಾಗಿದೆ. ಎಸ್‍ಎನ್‍ಎನ್ ಅಪಾರ್ಟ್‍ಮೆಂಟ್ ರಸ್ತೆಯ ಹತ್ತಿರ ಮಾದಕ ವಸ್ತು ಗಾಂಜಾ ಮತ್ತು ಹ್ಯಾಶಿಷ್ ಆಯಿಲ್ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸುವಲ್ಲಿ ಮೈಕೋಲೇಔಟ್ ಠಾಣಾ ಪೊಲೀಸರು ಯಶಸ್ವಿಯಾಗಿದೆ.
ಆರೋಪಿಗಳು ಹ್ಯಾಶಿಷ್ ಆಯಿಲ್ ಹಾಗೂ ಗಾಂಜಾವನ್ನು ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಂಗಳೂರಿಗೆ ತಂದು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಐಟಿ, ಬಿಟಿ ಕಂಪೆನಿಗಳ ನೌಕರರಿಗೆ ಮಾರಾಟ ಮಾಡಿ ಬಂದ ಹಣದಿಂದ ಮೋಜಿನ ಜೀವನ ನಡೆಸುತ್ತಿದ್ದರು ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ.
Next Story





