ಮಂಗಳೂರು: ಫ್ಲ್ಯಾಟ್ ನೊಳಗೆ ಸಿಲುಕಿದ ಮಗುವನ್ನು ರಕ್ಷಿಸಿದ ಅಗ್ನಿಶಾಮಕ ದಳ
![ಮಂಗಳೂರು: ಫ್ಲ್ಯಾಟ್ ನೊಳಗೆ ಸಿಲುಕಿದ ಮಗುವನ್ನು ರಕ್ಷಿಸಿದ ಅಗ್ನಿಶಾಮಕ ದಳ ಮಂಗಳೂರು: ಫ್ಲ್ಯಾಟ್ ನೊಳಗೆ ಸಿಲುಕಿದ ಮಗುವನ್ನು ರಕ್ಷಿಸಿದ ಅಗ್ನಿಶಾಮಕ ದಳ](https://www.varthabharati.in/sites/default/files/images/articles/2021/12/22/318622-1640188927.jpg)
ಮಂಗಳೂರು, ಡಿ.22: ನಗರದ ಅಪಾರ್ಟ್ಮೆಂಟ್ನ ಫ್ಲ್ಯಾಟ್ ನಲ್ಲಿ ಕಿಟಕಿಯ ಗಾಜಿನ ಬಾಗಿಲು ಲಾಕ್ ಆಗಿ ಒಳಗೆ ಸಿಲುಕಿದ್ದ ಮಗುವನ್ನು ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ದಂಪತಿ ಒಂದು ವರ್ಷ ಪ್ರಾಯದ ಮಗುವನ್ನು ಅಜ್ಜಿಯ ಜತೆಗೆ ಬಿಟ್ಟು ಹೊರಗಡೆ ಹೋಗಿದ್ದರು. ಅಜ್ಜಿ ಫ್ಲ್ಯಾಟ್ ನ ಹೊರಭಾಗಕ್ಕೆ ತೆರಳಿ ಸ್ವಚ್ಛತೆಯ ಕೆಲಸ ಮಾಡುತ್ತಿದ್ದರು. ಈ ವೇಳೆ ಮಗು ಹೊರಗೆ ಬಾರದಿರಲಿ ಎಂದು ಫ್ಲ್ಯಾಟ್ ನೊಗಿನ ಗಾಜಿನ ಬಾಗಿಲನ್ನು ಸರಿಸಿದ್ದರು. ಆದರೆ ಆ ಬಾಗಿಲು ಆಕಸ್ಮಿಕವಾಗಿ ಲಾಕ್ ಆಯಿತು. ಗಾಬರಿಗೊಂಡ ಅವರು ತಕ್ಷಣ ಫ್ಲ್ಯಾಟ್ ನ ಇತರರಿಗೆ ಮಾಹಿತಿ ನೀಡಿದರು. ಅವರು ಅಗ್ನಿಶಾಮಕ ದಳಕ್ಕೆ ಸುದ್ದಿ ರವಾನಿಸಿದರು. ಅದರಂತೆ ಅಗ್ನಿಶಾಮಕ ದಳದ 4 ಮಂದಿ ಸಿಬ್ಬಂದಿ ಅಪಾರ್ಟ್ಮೆಂಟ್ನ 6ನೇ ಮಹಡಿಯಲ್ಲಿರುವ ಫ್ಲ್ಯಾಟ್ ಗೆ ತೆರಳಿ ಹಗ್ಗದ ಸಹಾಯದಿಂದ ಮಗುವನ್ನು ರಕ್ಷಿಸಿದ್ದಾರೆ.
Next Story