ರಾಜಸ್ಥಾನ: ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 278, ಬಿಜೆಪಿಗೆ 165 ಸ್ಥಾನ
ಸಾಂದರ್ಭಿಕ ಚಿತ್ರ
ಜೈಪುರ, ಡಿ. 22: ರಾಜಸ್ಥಾನದ ನಾಲ್ಕು ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 278 ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ 165 ಸ್ಥಾನಗಳನ್ನು ಗಳಿಸಿದೆ.
ನಾಲ್ಕು ಜಿಲ್ಲೆಗಳಾದ ಬಾರನ್, ಕೋಟಾ, ಗಂಗಾನಗರ್ ಹಾಗೂ ಕರೌಲಿಯ 30 ಪಂಚಾಯತ್ಗಳ 568 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಫಲಿತಾಂಶ ಮಂಗಳವಾರ ಘೋಷಿಸಲಾಗಿತ್ತು. ಕಾಂಗ್ರೆಸ್ 278 ಸ್ಥಾನಗಳು, ಬಿಜೆಪಿ 165, ಸ್ಪತಂತ್ರ ಪಕ್ಷ 97, ಬಿಎಸ್ಪಿ 14 ಹಾಗೂ ಸಿಪಿಎಂ 13 ಸ್ಥಾನಗಳನ್ನು ಪಡೆದುಕೊಂಡಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
Next Story