ಕಾಂಗ್ರೆಸ್ ನಿಂದ ಅಸಹಕಾರ, ಪಕ್ಷ ತೊರೆಯುವ ಸೂಚನೆ ನೀಡಿದ ಹರೀಶ್ ರಾವತ್
"ನನ್ನ ಕೈಕಾಲುಗಳನ್ನು ಕಟ್ಟುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ ಹಿರಿಯ ನಾಯಕ

photo:PTI
ಡೆಹ್ರಾಡೂನ್, ಡಿ. 22: ಚುನಾವಣೆ ನಡೆಯಲಿರುವ ಉತ್ತರಾಖಂಡದ ಕಾಂಗ್ರೆಸ್ನ ಪ್ರಚಾರದ ಮುಖ್ಯಸ್ಥ ಹರೀಶ್ ರಾವತ್ ಪಕ್ಷ ತನಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೆ, ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ.
‘‘ನಾನು ಚುನಾವಣಾ ಸಾಗರವನ್ನು ಈಜುತ್ತಿರುವ ಸಂದರ್ಭ ನೆರವಿನ ಹಸ್ತ ಚಾಚುವ ಬದಲಾಗಿ ಬೆನ್ನು ತಿರುಗಿಸುವುದು ಅಥವಾ ನಕಾರಾತ್ಮಕ ಪಾತ್ರ ವಹಿಸುವುದು ಪಕ್ಷದ ಸಾಂಸ್ಥಿಕ ರಚನೆಯಲ್ಲಿ ತೀರಾ ವಿಚಿತ್ರ ಅಲ್ಲವೇ?” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಯಾರ ಆದೇಶದ ಮೇರೆಗೆ ನಾನು ಈಜಬೇಕೋ ಅವರ ಪ್ರತಿನಿಧಿಗಳು ನನ್ನ ಕೈ ಕಾಲುಗಳನ್ನ ಕಟ್ಟುತ್ತಿದ್ದಾರೆ. ನೀವು ತುಂಬಾ ದೂರ ಈಜಿದ್ದೀರಿ ಸಾಕಪ್ಪ ಹರೀಶ್ ರಾವತ್. ಈಗ ವಿಶ್ರಾಂತಿಯ ಕಾಲ ಎಂದು ನನ್ನ ಆಂತರ್ಯ ಹೇಳುತ್ತಿದೆ ಎಂದು ಅವರು ತಿಳಿಸಿದ್ದಾರೆ.
Next Story