ಮಂಗಳೂರು; ಮೀನುಗಾರನ ಕಾಲು ಕಟ್ಟಿ ತೂಗು ಹಾಕಿದ ಸಹ ಕಾರ್ಮಿಕರು
'ಕೊಲೆಯತ್ನ ಪ್ರಕರಣ ದಾಖಲು'

ಮಂಗಳೂರು, ಡಿ.23: ನಗರದ ಬಂದರ್ ದಕ್ಕೆಯಲ್ಲಿ ಮೀನುಗಾರನೊಬ್ಬನನ್ನು ಇತರ ಕಾರ್ಮಿಕರು ತೂಗು ಹಾಕಿ ದೌರ್ಜನ್ಯ ಎಸಗಿದ ಘಟನೆ ಬೆಳಕಿಗೆ ಬಂದಿದೆ.
ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನುಗಾರನೊಬ್ಬನನ್ನು ಇತರ ಕಾರ್ಮಿಕರು ಕಾಲು ಕಟ್ಟಿ ತೂಗು ಹಾಕಿ ಹಿಂಸಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಬೆಸ್ತ ಸಮುದಾಯದ ವೈಲ ಶೀನು ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ಅರಿತ ಪೊಲೀಸ್ ಆಯುಕ್ತ ಶಶಿಕುಮಾರ್ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ತಿಳಿಸಿದ್ದು, ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ಪಾಂಡೇಶ್ವರ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅದರಂತೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Next Story





