Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆಳುವ ವರ್ಗದ ಗುಲಾಮರಾಗುತ್ತಿರುವ ಭಾರತೀಯ...

ಆಳುವ ವರ್ಗದ ಗುಲಾಮರಾಗುತ್ತಿರುವ ಭಾರತೀಯ ಮಾಧ್ಯಮಗಳು

ವಿಕಾಸ್ ಪರಶುರಾಮ್ ಮೇಶ್ರಮ್ವಿಕಾಸ್ ಪರಶುರಾಮ್ ಮೇಶ್ರಮ್23 Dec 2021 1:06 PM IST
share

ಬಡತನ, ಅಸಮಾನತೆ, ಆರೋಗ್ಯ ರಕ್ಷಣೆಯಲ್ಲಿ ಅಸಮಾನತೆ, ಶಿಕ್ಷಣದ ವ್ಯಾಪಾರೀಕರಣ ಮುಂತಾದ ಭಾರತೀಯ ಸಮಾಜದ ಸಮಸ್ಯೆಗಳು ಈಗ ಪತ್ರಿಕೆಗಳ ಕಣ್ಣುಗಳಿಗೆ ಬೀಳುವುದಿಲ್ಲ. ಶಿಕ್ಷಣ ಈಗ ಸಾಮಾನ್ಯ ಜನತೆಯ ಕೈಗೆಟಕುತ್ತಿಲ್ಲ ಹಾಗೂ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇವುಗಳ ಬಗ್ಗೆ ಬರೆಯುವ ಪತ್ರಕರ್ತರು ಯಾರ ಕಣ್ಣಿಗೂ ಬೀಳುವುದಿಲ್ಲ. ನಾವು ಕಳೆದ ಹಲವು ವರ್ಷಗಳೀಂದ ನೋಡುತ್ತಿರುವಂತೆ, ಮಾನವಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಗೌಣವಾಗಿದೆ.

ಇಲೆಕ್ಟ್ರಾನಿಕ್ ಮಾಧ್ಯಮಗಳ ಕೆಲಸ ಜನರಿಗೆ ತಿಳುವಳಿಕೆ ನೀಡುವುದಾಗಿದೆ. ಆದರೆ, ಇಂದು ಟಿಆರ್‌ಪಿಯ ಕಾರಣಕ್ಕಾಗಿ ಸುದ್ದಿವಾಹಿನಿಗಳು ಸುದ್ದಿಗಳನ್ನು ರೋಚಕವಾಗಿ ನಿರೂಪಿಸುತ್ತಿವೆ. ಇದು ಆತಂಕಕಾರಿ ಪರಿಸ್ಥಿತಿಯಾಗಿದೆ. ಭಾರತೀಯ ಪತ್ರಿಕೆಗಳು ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇಂದು ಪ್ರಸಾರಗೊಳ್ಳುತ್ತಿರುವ ಸುದ್ದಿಯನ್ನು ನೋಡಿದರೆ, ಇಂದಿನ ಸುದ್ದಿ ಮಾಧ್ಯಮಗಳ ಪ್ರಧಾನ ಆಸಕ್ತಿಯಿರುವುದು ರಾಜಕೀಯ ವಿಪ್ಲವಗಳು, ಕೆಲವು ರಾಜಕಾರಣಿಗಳ ವೈಭವ ಮತ್ತು ಪ್ರಸಿದ್ಧಿಯನ್ನು ಪ್ರಚುರಪಡಿಸುವುದು ಎನ್ನುವುದನ್ನು ಅರ್ಥಮಾಡಿಕೊಳ್ಳಲು ಕಷ್ಟವಿಲ್ಲ. ಕೊರೋನವನ್ನು ಹೊರತುಪಡಿಸಿದರೆ ಬೇರೆ ಸುದ್ದಿಯೇ ಇಲ್ಲ. ಎಲ್ಲಿಯಾದರೂ ಕೊರೋನ ಸುದ್ದಿ ಕೇಳಿಬಂದರೆ ಅದನ್ನು ವರದಿ ಮಾಡಲೇಬೇಕು. ಅವಿಲ್ಲದಿದ್ದರೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯತ್ತ ಹೆಚ್ಚಿನ ಗಮನ. ಚುನಾವಣಾ ಋತುವಿನಲ್ಲಿ ಚಾನೆಲ್‌ಗಳಲ್ಲಿ ನಾಯಕನ ಗುಣಗಾನ ನಡೆಯುತ್ತದೆ. ನಂತರ, ಕ್ರಿಕೆಟ್ ಬಿಟ್ಟರೆ ಬೇರೆ ಏನೂ ಇಲ್ಲ. ಹಣದುಬ್ಬರ, ನಿರುದ್ಯೋಗ, ಕಾನೂನು ಮತ್ತು ವ್ಯವಸ್ಥೆ ಈಗ ಸುದ್ದಿಯೇ ಅಲ್ಲ.

ಈ ದಿನಗಳಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ. ಅದರಿಂದಾಗಿ, ಪತ್ರಿಕೋದ್ಯಮ ಎನ್ನುವುದು ಜೊಳ್ಳು ಎಂಬ ತೀರ್ಮಾನಕ್ಕೆ ಜನರು ಬರುವ ಪರಿಸ್ಥಿತಿ ಏರ್ಪಟ್ಟಿದೆ. ಈ ವಾಸ್ತವವನ್ನು ಸುದ್ದಿ ಮಾಧ್ಯಮಗಳು ಆದಷ್ಟು ಬೇಗೆ ಅರ್ಥ ಮಾಡಿಕೊಳ್ಳಬೇಕು. ಇದು ವಿಳಂಬವಾದರೆ ಅವುಗಳ ಅಸ್ತಿತ್ವಕ್ಕೇ ಅಪಾಯವಿದೆ. ಹೆಚ್ಚುತ್ತಿರುವ ಸಾಮಾಜಿಕ ಮಾಧ್ಯಮಗಳ ಪ್ರಭಾವ, ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಹಾಗೂ ವೆಬ್ (ಇಂಟರ್‌ನೆಟ್) ಪತ್ರಿಕೋದ್ಯಮದ ಶಕ್ತಿ ಈಗಾಗಲೇ ಇಲೆಕ್ಟ್ರಾನಿಕ್ ಮಾಧ್ಯಮದ ಪ್ರಸ್ತುತತೆ ಮತ್ತು ವಿಶ್ವಾಸಾರ್ಹತೆಯನ್ನು ತಗ್ಗಿಸಿವೆ.

ಸತ್ಯವನ್ನು ಹೊರತರುವುದು ಮಾಧ್ಯಮಗಳ ಹೊಣೆಗಾರಿಕೆ. ಆದರೆ, ಆ ಸತ್ಯಕ್ಕಾಗಿ ಬೆಲೆಯನ್ನು ಯಾರು ತೆರುತ್ತಾರೆ? ಮುದ್ರಣ ಮಾಧ್ಯಮವು ಇಲೆಕ್ಟ್ರಾನಿಕ್ ಮಾಧ್ಯಮಕ್ಕಿಂತ ಹೆಚ್ಚು ಪ್ರಭಾವಿಯಾಗಿದೆ. ಮುದ್ರಣ ಮಾಧ್ಯಮವು ಸುದ್ದಿಗಳನ್ನು ಅರ್ಥಮಾಡಿಕೊಂಡು ಹಾಗೂ ಜಾಗರೂಕವಾಗಿ ಪರಿಶೀಲಿಸಿ ನೀಡುತ್ತದೆ. ಆದರೆ ಇಲೆಕ್ಟ್ರಾನಿಕ್ ಮಾಧ್ಯಮವು ತಕ್ಷಣದ ಸುದ್ದಿಯನ್ನು ನೀಡುತ್ತದೆ. ಸಮಾಜದಲ್ಲಿ ಜಾಗೃತಿಯನ್ನು ಹುಟ್ಟಿಸುವಲ್ಲಿ ಸುದ್ದಿ ಪತ್ರಿಕೆಗಳು ಮಹತ್ವದ ಪಾತ್ರವನ್ನು ವಹಿಸಿವೆ. ಈ ಪಾತ್ರವು ಒಂದು ದೇಶಕ್ಕೆ ಅಥವಾ ಒಂದು ವಲಯಕ್ಕೆ ಸೀಮಿತವಾಗಿಲ್ಲ. ಪ್ರಗತಿಪರವಾಗಿ ಯೋಚಿಸುವ ಜಗತ್ತಿನ ಎಲ್ಲ ದೇಶಗಳಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವನ್ನು ವಹಿಸಿವೆ ಎನ್ನುವುದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.

ಮಾಧ್ಯಮಗಳು, ಅದರಲ್ಲೂ ಮುಖ್ಯವಾಗಿ ಮುದ್ರಣ ಮಾಧ್ಯಮಗಳು ಜನಾಭಿಪ್ರಾಯವನ್ನು ರೂಪಿಸುವ ಅಮೋಘ ಸಾಮರ್ಥ್ಯವನ್ನು ಹೊಂದಿವೆ. ಸರಕಾರಿ ನೀತಿಗಳಿಗೆ ಸಂಬಂಧಿಸಿ ಜನರ ಅಭಿಪ್ರಾಯವನ್ನು ತಿಳಿಯುವ ನಿಟ್ಟಿನಲ್ಲಿ ಪತ್ರಿಕೆಗಳು ಕೆಲಸ ಮಾಡುತ್ತವೆ ಹಾಗೂ ಜನರ ಅಭಿಪ್ರಾಯಗಳನ್ನು ನೀತಿ ರೂಪಕರಿಗೆ ತಲುಪಿಸುತ್ತವೆ. ನಾವು ನಮ್ಮನ್ನು ಪ್ರಜಾಪ್ರಭುತ್ವ ದೇಶ ಎಂದು ಕರೆದುಕೊಳ್ಳುವುದಾದರೆ, ತಮ್ಮ ಹಕ್ಕುಗಳನ್ನು ಚಲಾಯಿಸಲು ನಾಗರಿಕರಿಗೆ ಸಂಪೂರ್ಣ ಅವಕಾಶ ಸಿಗದ ಹೊರತು ಯಾವುದೇ ದೇಶವು ಸಂಪೂರ್ಣ ಪ್ರಜಾಪ್ರಭುತ್ವ ಆಗಲು ಸಾಧ್ಯವಿಲ್ಲ ಎನ್ನುವುದನ್ನು ನಾವು ಮನಗಾಣಬೇಕು. ಸಮಾಜದ ಧ್ವನಿಯನ್ನು ಸರಕಾರಕ್ಕೆ ತಲುಪಿಸುವಲ್ಲಿ ಮಾಧ್ಯಮವು ನಮ್ಮ ಪ್ರತಿನಿಧಿಯಾಗುತ್ತದೆ. ಆದರೆ, ಇಂದಿನ ದಿನಗಳಲ್ಲಿ ಪರಿಸ್ಥಿತಿ ತಿರುವು ಮುರುವಾಗುತ್ತಿದೆ. ಭಾರತದಲ್ಲಿ ಮೋದಿ, ಅವರ ಪಕ್ಷ ಮತ್ತು ಸರಕಾರವನ್ನು ಹೊರತುಪಡಿಸಿ ಬೇರೆ ಸುದ್ದಿಯೇ ಇಲ್ಲ ಎಂಬಂತಾಗಿದೆ. ಮಾಧ್ಯಮಗಳು ನಂತರ ಗಮನ ಹರಿಸುವುದು ಸೆನ್ಸೆಕ್ಸ್, ಐಪಿಎಲ್ ಮುಂತಾದ ಆರ್ಥಿಕ ಮತ್ತು ವ್ಯಾಪಾರದ ಸುದ್ದಿಗಳತ್ತ. ಈಗ ನಾವು ಕೇಳಬೇಕಾಗಿರುವ ಪ್ರಶ್ನೆಯೆಂದರೆ, ಪತ್ರಿಕೆಗಳು ನಿಜವಾಗಿಯೂ ಜನರ ಧ್ವನಿಯೇ? ಕೊನೆಗೆ, ಜನರು ಯಾರನ್ನು ನಂಬುತ್ತಾರೆ? ಪತ್ರಿಕೆಗಳನ್ನು ಜನರು ನಂಬಬೇಕಾದರೆ, ಅವುಗಳು ದಮನಿತರಿಗೆ ಧ್ವನಿಯಾಗುವುದು ಅಗತ್ಯವಾಗಿದೆ.

 ಸಾಮಾನ್ಯ ಜನರ ಬದುಕಿನ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೆಗಳು ದೊಡ್ಡದೇ ಅಥವಾ ಪ್ರಸಿದ್ಧ ವ್ಯಕ್ತಿಗಳ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸಂಗತಿಗಳು ದೊಡ್ಡದೇ? ಇಂದಿನ ಪತ್ರಿಕೋದ್ಯಮವು ಇಂಥ ಘಟ್ಟವೊಂದನ್ನು ಹಾದು ಹೋಗುತ್ತಿದೆ ಹಾಗೂ ಅದರ ಬದ್ಧತೆಯನ್ನು ಪ್ರಶ್ನಿಸಲಾಗುತ್ತಿದೆ. ಮಾಧ್ಯಮದ ಸ್ವರೂಪ ಮತ್ತು ಉದ್ದೇಶ ಕಾಲ ಸರಿದಂತೆ ತುಂಬಾ ಬದಲಾಗಿದೆ. ಈಗ ಗಂಭೀರ ವಿಷಯಗಳಿಗೆ ಮಾಧ್ಯಮಗಳಲ್ಲಿ ಕಡಿಮೆ ಸ್ಥಳಾವಕಾಶವಿದೆ. ಪತ್ರಿಕೆಗಳ ಮುಖಪುಟಗಳು ರಾಜಕಾರಣಿಗಳ ದೊಡ್ಡ ಧ್ವನಿಯ ಒಣ ಮಾತುಗಳು, ಅವರ ಗುಣಗಾನ, ಕ್ರಿಕೆಟ್ ಸುದ್ದಿಗಳು ಮತ್ತು ಮಾರುಕಟ್ಟೆ ಏರಿಳಿತಗಳ ಸುದ್ದಿಗಳಿಂದಲೇ ತುಂಬಿವೆೆ. ಅತ್ಯಂತ ಗಂಭೀರ ಸಮಸ್ಯೆಗಳಿಗೆ ಸಂಬಂಧಿಸಿದ ಸುದ್ದಿಗಳು ಒಳಪುಟಗಳಿಗೆ ಸೀಮಿತವಾಗಿರುತ್ತವೆ ಅಥವಾ ಸಂಪೂರ್ಣವಾಗಿ ನಾಪತ್ತೆಯಾಗಿರುತ್ತವೆ. ಹೆಚ್ಚಿನ ಸಮಸ್ಯೆಗಳಿಗೆ ಸಂಬಂಧಿಸಿದ ಸುದ್ದಿಗಳು ಪತ್ರಿಕೆಗಳಲ್ಲಿ ಬರುತ್ತವೆ, ಆದರೆ ಅವುಗಳ ಗಂಭೀರ ಚರ್ಚೆಗೆ ಸಮಯಾವಕಾಶ ಅಥವಾ ಪುಟಗಳ ಕೊರತೆಯಿರುತ್ತದೆ.

ಪತ್ರಿಕೆಗಳಲ್ಲಿ ಬರುವ ಹೆಚ್ಚಿನ ಸುದ್ದಿಗಳು ರಾಜಕೀಯ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಕ್ರೀಡೆಗಾಗಿ ಇರುವ ಎರಡು ಪುಟಗಳ ಹೆಚ್ಚಿನ ಭಾಗ ಕ್ರಿಕೆಟ್‌ನಿಂದ ಆವರಿಸಿದೆ. ಇನ್ನುಳಿದ ಭಾಗ ಸಿನೆಮಾ-ಮನರಂಜನೆಗೆ ಮೀಸಲಾಗಿದೆ. ಈ ರೀತಿಯಾಗಿ, ಮಾಧ್ಯಮಗಳು ಭಾರತದ ಪೊಳ್ಳು ಚಿತ್ರವೊಂದನ್ನು ಬಿಂಬಿಸುತ್ತಿವೆ. ಆರೋಗ್ಯ, ಶಿಕ್ಷಣ, ಕೃಷಿ ಮತ್ತು ಪರಿಸರ ವಿಷಯಗಳಿಗೆ ಮಾಧ್ಯಮಗಳು-ಪತ್ರಿಕೆಗಳಲ್ಲಿ ಸಮಯ-ಸ್ಥಳಾವಕಾಶಗಳು ಸಿಗುವುದಿಲ್ಲ. ರೈತರ ಆತ್ಮಹತ್ಯೆಗಳು ಈಗ ಸುದ್ದಿಯೇ ಆಗುವುದಿಲ್ಲ. ರೈತರ ಚಲನವಲನಗಳು ಈಗ ಸುದ್ದಿಯ ವ್ಯಾಪ್ತಿಗೆ ಬರುವುದಿಲ್ಲ.

ಬಡತನ, ಅಸಮಾನತೆ, ಆರೋಗ್ಯ ರಕ್ಷಣೆಯಲ್ಲಿ ಅಸಮಾನತೆ, ಶಿಕ್ಷಣದ ವ್ಯಾಪಾರೀಕರಣ ಮುಂತಾದ ಭಾರತೀಯ ಸಮಾಜದ ಸಮಸ್ಯೆಗಳು ಈಗ ಪತ್ರಿಕೆಗಳ ಕಣ್ಣುಗಳಿಗೆ ಬೀಳುವುದಿಲ್ಲ. ಶಿಕ್ಷಣ ಈಗ ಸಾಮಾನ್ಯ ಜನತೆಯ ಕೈಗೆಟಕುತ್ತಿಲ್ಲ ಹಾಗೂ ನಿರುದ್ಯೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಇವುಗಳ ಬಗ್ಗೆ ಬರೆಯುವ ಪತ್ರಕರ್ತರು ಯಾರ ಕಣ್ಣಿಗೂ ಬೀಳುವುದಿಲ್ಲ. ನಾವು ಕಳೆದ ಹಲವು ವರ್ಷಗಳೀಂದ ನೋಡುತ್ತಿರುವಂತೆ, ಮಾನವಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಗೌಣವಾಗಿದೆ. ಹಿಂದೆ ನಾವು ಇರೋಮ್ ಶರ್ಮಿಳಾ ಮತ್ತು ಸಲ್ವಾ ಜುಡುಮ್ ಬಗ್ಗೆ ಕೇಳುತ್ತಿದ್ದೆವು. ಈ ಎರಡೂ ಪ್ರಕರಣಗಳು, ಮಾನವಹಕ್ಕು ಉಲ್ಲಂಘನೆಗೆ ಸಂಬಂಧಿಸಿದವುಗಳು. ಆದರೆ, ಅಂಥ ವಿಷಯಗಳು ಈಗ ಮಾಧ್ಯಮಗಳ ಕಣ್ಣಿಗೆ ಬೀಳುವುದಿಲ್ಲ.

 ಮಹಿಳೆಯರು ಮತ್ತು ದಲಿತರ ಮೇಲೆ ಸರಣಿ ದೌರ್ಜನ್ಯಗಳು ನಡೆದಿವೆ. ಉತ್ತರಪ್ರದೇಶ, ಮಧ್ಯಪ್ರದೇಶ, ಕರ್ನಾಟಕಗಳಲ್ಲಿ ಇತ್ತೀಚೆಗೆ ಹಲವು ದಮನಕಾರಕ ಘಟನೆಗಳು ನಡೆದಿವೆ. ಘಟನೆಗಳು ನಡೆದಾಗ ತಕ್ಷಣಕ್ಕೆ ಜೋರು ಬೊಬ್ಬೆ ಕೇಳುತ್ತದೆ ಮತ್ತೆ ಎಲ್ಲವೂ ಯಥಾಸ್ಥಿತಿ. ಆರೋಗ್ಯಯುತ ಪ್ರಜಾಪ್ರಭುತ್ವಕ್ಕೆ ಮಾಧ್ಯಮಗಳ ತಟಸ್ಥ ಧೋರಣೆ ಅತ್ಯಂತ ಅಪಾಯಕಾರಿ. ಪ್ರಜಾಪ್ರಭುತ್ವದಲ್ಲಿ ದೇಶದ್ರೋಹ ಎನ್ನುವ ಪರಿಕಲ್ಪನೆ ಇರಬಾರದು. ಪ್ರತಿಯೊಬ್ಬರಿಗೂ ಅಭಿಪ್ರಾಯ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಇದೆ. ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ವಾಧಿಕಾರಿ ಪ್ರಭುತ್ವವೊಂದು ದೇಶದ್ರೋಹ ಎಂಬುದಾಗಿ ಪರಿಗಣಿಸಿದರೆ, ಪ್ರಜಾಪ್ರಭುತ್ವದ ಅಸ್ತಿತ್ವಕ್ಕೇ ಗಂಡಾಂತರ ಎದುರಾಗಿದೆ.

ಭ್ರಷ್ಟ ರಾಜಕಾರಣಿಗಳು ಮತ್ತು ರಾಜಕೀಯ ಅಪರಾಧಿಗಳನ್ನು ಸೃಷ್ಟಿಸುವ ಮಾಫಿಯ ಜೊತೆ ಮಾಧ್ಯಮಗಳು ಮತ್ತು ಮಾಧ್ಯಮದ ಜನರು ನಂಟು ಹೊಂದಿದ್ದಾರೆ. ಹಾಗಾಗಿಯೇ, ಸಂಪಾದಕರು ಮತ್ತು ನಿರೂಪಕರು ದುರಹಂಕಾರಿಗಳಾಗಿದ್ದಾರೆ. ಅವರು ತಮ್ಮನ್ನು ತಾವು ಜನಸಾಮಾನ್ಯರ ರಕ್ಷಕರು ಎಂಬುದಾಗಿ ಬಿಂಬಿಸುತ್ತಿದ್ದಾರೆ. ಆದರೆ ಅವರ ಅಹಂಕಾರದಿಂದಾಗಿ ಜನರು ರೋಸಿ ಹೋಗಿದ್ದಾರೆ.

ತಮಾಷೆಯ ಸಂಗತಿಯೆಂದರೆ, ತಾವು ರಾಜಕೀಯದಿಂದ ದೂರವಿದ್ದೇವೆ ಎಂದು ಹೇಳಿಕೊಳ್ಳುವ ಹಾಗೂ ರಾಜಕೀಯದ ಬಗ್ಗೆ ವ್ಯಾಖ್ಯಾನ ನೀಡುವ ಮಾಧ್ಯಮಗಳ ಜನರು, ವಾಸ್ತವವಾಗಿ ರಾಜಕೀಯದಲ್ಲೇ ಹೂತು ಹೋಗಿದ್ದಾರೆ.

share
ವಿಕಾಸ್ ಪರಶುರಾಮ್ ಮೇಶ್ರಮ್
ವಿಕಾಸ್ ಪರಶುರಾಮ್ ಮೇಶ್ರಮ್
Next Story
X