ಕಾಸರಗೋಡು: ಸುಲ್ತಾನ್ ಜ್ಯುವೆಲ್ಲರಿಯಿಂದ ವಜ್ರಾಭರಣ ಕಳವು ಪ್ರಕರಣದ ಪ್ರಮುಖ ಆರೋಪಿ ಸೆರೆ
![ಕಾಸರಗೋಡು: ಸುಲ್ತಾನ್ ಜ್ಯುವೆಲ್ಲರಿಯಿಂದ ವಜ್ರಾಭರಣ ಕಳವು ಪ್ರಕರಣದ ಪ್ರಮುಖ ಆರೋಪಿ ಸೆರೆ ಕಾಸರಗೋಡು: ಸುಲ್ತಾನ್ ಜ್ಯುವೆಲ್ಲರಿಯಿಂದ ವಜ್ರಾಭರಣ ಕಳವು ಪ್ರಕರಣದ ಪ್ರಮುಖ ಆರೋಪಿ ಸೆರೆ](https://www.varthabharati.in/sites/default/files/images/articles/2021/12/23/318692-1640251657.jpeg)
ಕಾಸರಗೋಡು, ಡಿ.23: ನಗರದ ಸುಲ್ತಾನ್ ಗೋಲ್ಡ್ ಆ್ಯಂಡ್ ಡೈಮೆಂಡ್ಸ್ ಜ್ಯುವೆಲ್ಲರಿಯಿಂದ ಸುಮಾರು 2.88 ಕೋಟಿ ರೂ. ಮೌಲ್ಯದ ವಜ್ರಾಭರಣಗಳನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ಬಿ.ಸಿ.ರೋಡ್ ತಾಳಿಪಡ್ಪು ನಿವಾಸಿ ಮುಹಮ್ಮದ್ ಫಾರೂಕ್ (35) ಬಂಧಿತ ಆರೋಪಿ.
ಈತನನ್ನು ಕರ್ನಾಟಕದಿಂದ ಪೊಲೀಸರು ಬಂಧಿಸಿದ್ದಾರೆ.
ಜ್ಯುವೆಲ್ಲರಿಯಿಂದ ದೋಚಿದ ಆಭರಣಗಳನ್ನು ಪತ್ತೆ ಹಚ್ಚಲು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಎಂದು ಪೊಲೀಸರು ತಿಳಿಸಿದ್ದಾರೆ
Next Story