ಉಡುಪಿ: ಡಾ.ಎಚ್ ಶಾಂತರಾಮ್ ರಿಗೆ ಸನ್ಮಾನ

ಉಡುಪಿ, ಡಿ.23: ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ಮಾಜಿ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್ ಅವರಿಗೆ ಎಂ.ಜಿ.ಎಂ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವತಿಯಿಂದ ಕಾಲೇಜಿನ ನೂತನ ರವೀಂದ್ರ ಮಂಟಪಲ್ಲಿಸ ಇತ್ತೀಚೆಗೆ ಸನ್ಮಾನಿಸಲಾಯಿತು.
96 ವರ್ಷ ಹರೆಯದ ಡಾ.ಎಚ್. ಶಾಂತಾರಾಮ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಆರು ದಶಕಗಳ ವೃತ್ತಿಜೀವನದ ಕುರಿತು ಸಂತೃಪ್ತಿಯಿದೆ. ಇಂದಿಗೂ ಪ್ರಾಧ್ಯಾಪಕನೆಂದು ಗುರುತಿಸಿಕೊಳ್ಳಲು ಹೆಮ್ಮೆಯಿದೆ. ಸ್ವಇಚ್ಛೆಯಿಂದ ಜವಾಬ್ದಾರಿ ಯಿಂದ ದೂರ ಉಳಿಯುತ್ತಿದ್ದೇನೆ. ನನ್ನ ಸೇವೆಯು ಅಕಾಡೆಮಿಯ ಪ್ರತಿಯೊ ಬ್ಬರಿಗೂ ಮುಂದೆಯೂ ಲಭ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲದ ನೂತನ ಕಾರ್ಯದರ್ಶಿ ವರದರಾಜ ಪೈ ಬಿ.ಪಿ ಮಾತನಾಡಿ, ಡಾ.ಎಚ್.ಶಾಂತಾರಾಮರ ಕೊಡುಗೆಗಳ ಬಗ್ಗೆ ಗುಣಗಾನ ಮಾಡಿದರು. ಕಾಲೇಜಿನ ಹಳೆ ವಿದ್ಯಾರ್ಥಿ ಯಾಗಿರುವ ತನಗೆ ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಹೆಮ್ಮೆ ಇದೆ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯಕ್ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿ ದೇವಿ ಉಪಸ್ಥಿತರಿದ್ದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಲಕ್ಷ್ಮೀನಾರಾಯಣ ಕಾರಂತ ವಂದಿಸಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಪ್ರವೀಣಾ ಕುಮಾರಿ ಎಂ.ಕೆ ಕಾರ್ಯಕ್ರಮ ನಿರೂಪಿಸಿದರು.







