ಡಿ. 24ರಂದು ಯುಡಿಐಡಿ ಕಾರ್ಡ್‌ಗಾಗಿ ವಿಕಲಚೇತನ ವಿದ್ಯಾರ್ಥಿಗಳ ತಪಾಸಣೆ
ಉಡುಪಿ, ಡಿ.23: ಎಸೆಸೆಲ್ಸಿಯಲ್ಲಿ ಕಲಿಯುತ್ತಿರುವ ವಿಕಲಚೇತನ ವಿದ್ಯಾರ್ಥಿ ಗಳು ಪರೀಕ್ಷೆಗೆ ಹಾಜರಾಗಲು ಯುಡಿಐಡಿ ಕಾರ್ಡ್ ಕಡ್ಡಾಯವಾಗಿದ್ದು, ಕಾರ್ಡ್ ಪಡೆಯಲು ಸ್ವಾವಲಂಬನ್ ಕಾರ್ಡ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಯುಡಿಐಡಿ ಕಾರ್ಡ್ ತಪಾಸಣೆಗಾಗಿ ಆಯಾ ತಾಲೂಕಿನ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಅರ್ಜಿ ಸಲ್ಲಿಸಿದ ಪ್ರತಿ ಹಾಗೂ ಆಧಾರ್ ಕಾರ್ಡ್‌ನ ಮೂಲ ಪ್ರತಿಯೊಂದಿಗೆ ತಪಾಸಣೆಗೆ ಪೋಷಕರೊಂದಿಗೆ ಹಾಜರಾಗಬೇಕು.
ಯುಡಿಐಡಿ ಕಾರ್ಡ್ ವಿತರಣೆಗಾಗಿ ಇರುವ ವೈದ್ಯಕೀಯ ಪ್ರಾಧಿಕಾರದಿಂದ ಡಿಸೆಂಬರ್ 24ರಂದು ನಗರದ ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಕಾರ್ಕಳ ಮತ್ತು ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಮಾನಸಿಕ ಮತ್ತು ಬೌದ್ಧಿಕ ವಿಕಲತೆ ಇರುವ ವಿಕಲಚೇತನ ವಿದ್ಯಾರ್ಥಿಗಳು ತಪಾಸಣೆಗಾಗಿ ನಗರದ ಜಿಲ್ಲಾಸ್ಪತ್ರೆಗೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ರಜತಾದ್ರಿ ಮಣಿಪಾಲ ದೂರವಾಣಿ ಸಂಖ್ಯೆ 0820 -2574810/811, ವಿವಿಧೋದ್ದೇಶ ಪುನವರ್ಸತಿ ಕಾರ್ಯಕರ್ತರು (ಎಂಆರ್‌ಡಬ್ಲ್ಯೂ) ಉಡುಪಿ, ಕುಂದಾಪುರ ಮೊ.ನಂ: 9901824878, ಕಾರ್ಕಳ ಮೊ:9481145518 ಅಥವಾ ಗ್ರಾಮ ಪಂಚಾಯತ್ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







